ಸಂತ ಸೇವಾಲಾಲ್‍ 285ನೇ ಜಯಂತ್ಯುತ್ಸವ ಸಂಪನ್ನ

KannadaprabhaNewsNetwork |  
Published : Feb 16, 2024, 01:47 AM IST
ಹೊನ್ನಾಳಿ ಫೋಟೋ 15ಎಚ್.ಎಲ್.ಐ1ಸೂರಗೊಂಡನಕೊಪ್ಪ ಭಾಯಾಗಡ್ ದಲ್ಲಿ  ಸಂತ ಸೇವಾಲಾಲ್ ಮತ್ತು ಮರಿಯಮ್ಮ ಜಯಂತ್ಯುತ್ಸವದ  ಕೊನೆ  ದಿನ ಗುರುವಾರ ಭೋಗ್(ಹೋಮಕುಂಡ) ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು. ಮಹಾರಾಷ್ಟ್ರ ಪೌರಗಡ್  ಉತ್ತರಾಧಿಕಾರಿ ಗುರು ಬಾಬುಸಿಂಗ್ ಮಹಾರಾಜರು, ಸಾಧು,ಸಂತರು ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಹೋಮದ ಧಾರ್ಮಿಕ ವಿಧಿ, ವಿಧಾನಗಳ ಮಹಾರಾಷ್ಟ್ರ ಪೌರಾಗಡ್‍ನ ರಾಮ್‍ರಾವ್ ಮಹಾರಾಜರ ಉತ್ತರಾಧಿಕಾರಿ ಬಾಬುಸಿಂಗ್ ಮಹಾರಾಜರ ನೇತೃತ್ವದಲ್ಲಿ ಸೇವಾಲಾಲ್‍ ದೇವಸ್ಥಾನದ ಆರ್ಚಕ ಸೇವ್ಯಾನಾಯ್ಕ, ಮರಿಯಮ್ಮ ದೇವಸ್ಥಾನದ ಆರ್ಚಕ ಮಂಜುನಾಥ ನಾಯ್ಕ ಮತ್ತು ವಿವಿಧ ಸಾಧು ಸಂತರು ನೆರವೇರಿಸಿದರು. ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ‘ಸಕಲ ಜೀವರಾಶಿಗಳಿಗೆ ಒಳ್ಳೆಯದಾಗಲಿ, ಮಳೆ,ಬೆಳೆ ಸಮೃದ್ಧಿಯಾಗಿ, ಜನತೆ ಶಾಂತಿ, ಸೌಹಾರ್ದದಿಂದ ಬಾಳುವಂತಾಗಲಿ’ ಎಂದು ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸುಕ್ಷೇತ್ರ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ನಡೆದ ಸಂತ ಸೇವಾಲಾಲ್‍ 285ನೇ ಜಯಂತ್ಯುತ್ಸವ ಗುರುವಾರ ಹೋಮಕ್ಕೆ ಪೂರ್ಣಾಹುತಿ ಅರ್ಪಿಸುವ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು.

ಹೋಮಕುಂಡದ ಆವರಣಕ್ಕೆ ಗುರುವಾರ ಬೆಳಗ್ಗೆ ಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್‍ ಉತ್ಸವ ಮೂರ್ತಿಗಳ ತರಲಾಯಿತು. ವಿವಿಧ ಬಣ್ಣದ ರಂಗೋಲಿ, ಹೂವಿನಿಂದ ಅಲಂಕರಿಸಿದ್ದ ಹೋಮಕುಂಡಕ್ಕೆ(ಭೋಗ್) ಒಂಭತ್ತು ವಿವಿಧ ಜಾತಿಯ ಮರ ಹಾಗೂ ಗಂಧದ ಚೆಕ್ಕೆ, ತುಪ್ಪ ತುಂಬಿದ ಇರುಮುಡಿ ಕಾಯಿಗಳ ಧಾರ್ಮಿಕ ವಿಧಾನಗಳೊಂದಿಗೆ ಜೋಡಿಸಿ, ಕರ್ಪೂರದ ಮೂಲಕ ಕುಂಡ ಬೆಳಗಿಸಿ, ಗೋಧಿ ಪಾಯಸ ಮತ್ತು ತುಪ್ಪವನ್ನು ನೈವೇದ್ಯವಾಗಿ ಅರ್ಪಿಸಲಾಯಿತು.

ಹೋಮದ ಧಾರ್ಮಿಕ ವಿಧಿ, ವಿಧಾನಗಳ ಮಹಾರಾಷ್ಟ್ರ ಪೌರಾಗಡ್‍ನ ರಾಮ್‍ರಾವ್ ಮಹಾರಾಜರ ಉತ್ತರಾಧಿಕಾರಿ ಬಾಬುಸಿಂಗ್ ಮಹಾರಾಜರ ನೇತೃತ್ವದಲ್ಲಿ ಸೇವಾಲಾಲ್‍ ದೇವಸ್ಥಾನದ ಆರ್ಚಕ ಸೇವ್ಯಾನಾಯ್ಕ, ಮರಿಯಮ್ಮ ದೇವಸ್ಥಾನದ ಆರ್ಚಕ ಮಂಜುನಾಥ ನಾಯ್ಕ ಮತ್ತು ವಿವಿಧ ಸಾಧು ಸಂತರು ನೆರವೇರಿಸಿದರು. ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ‘ಸಕಲ ಜೀವರಾಶಿಗಳಿಗೆ ಒಳ್ಳೆಯದಾಗಲಿ, ಮಳೆ,ಬೆಳೆ ಸಮೃದ್ಧಿಯಾಗಿ, ಜನತೆ ಶಾಂತಿ, ಸೌಹಾರ್ದದಿಂದ ಬಾಳುವಂತಾಗಲಿ’ ಎಂದು ಪ್ರಾರ್ಥಿಸಿದರು.

ಹೋಮದಲ್ಲಿ ಸಂತ ಸೇವಾಲಾಲ್‍ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಪ್ರಧಾನ ಕಾರ್ಯದರ್ಶಿ ಎನ್.ಅರುಣಕುಮಾರ, ಪ್ರಧಾನ ಧರ್ಮದರ್ಶಿ ಬಿ.ಹೀರಾನಾಯ್ಕ ಮತ್ತು ಭೋಜ್ಯನಾಯ್ಕ, ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತನಾಯ್ಕ, ರಾಜ್ಯ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ ನಾಯಕ್, ರಾಘವೇಂದ್ರ ನಾಯ್ಕ, ಚಂದ್ರಸೇನಾ ಚವ್ಹಾಣ್, ಎಸ್.ಎನ್.ಗೋಪಾಲನಾಯ್ಕ, ಸವಳಂಗ ಭೋಜ್ಯನಾಯ್ಕ, ಪಿ.ಟಿ.ಪರಮೇಶ್ವರನಾಯ್ಕ,ಭೂಪಾಲ ನಾಯ್ಕ, ಶ್ರೀನಿವಾಸನಾಯ್ಕ, ರೇಣುನಾಯ್ಕ, ರಾಮನಾಯ್ಕ, ಮಹಾಮಠ ಸಮಿತಿಯ ನಿರ್ದೇಶಕರು, ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ, ಇನ್ಸಪೆಕ್ಟರ್ ಎನ್.ಎಸ್.ರವಿ, ಪಿಎಸ್‍ಐ ಬಿ.ಎಲ್.ಜಯಪ್ಪನಾಯ್ಕ ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌