ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತ್ರಿಪದಿ ಬ್ರಹ್ಮ, ಸಂತಕವಿ ಸರ್ವಜ್ಞ ಜಯಂತಿ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸರ್ಕಾರದಿಂದ ಆಚರಿಸಲ್ಪಡುತ್ತಿರುವ ಸರ್ವಜ್ಞ ಜಯಂತಿಯು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಅಂಧಕಾರ, ಕಂದಾಚಾರದಲ್ಲಿ ಮುಳುಗಿದ್ದ ಸಮಾಜದಲ್ಲಿ ತಮ್ಮ ವಚನಗಳು ಹಾಗೂ ತ್ರಿಪದಿಗಳ ಮೂಲಕ ಸಮಾಜದ ಸುಧಾರಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.
ಸರ್ವಜ್ಞರು 1000 ಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿದ್ದು, ತ್ರಿಪದಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸುವ ಮತ್ತು ಅನುಭವಗಳನ್ನು ತೋರಿಸುವ ಕಾರ್ಯ ಮಾಡಿದ್ದಾರೆ. ಜಗತ್ತಿನ ಬೆರಳೆಣಿಕೆಯಷ್ಟು ಆಶುಕವಿಗಳಲ್ಲಿ ಸಂತಕವಿ ಸರ್ವಜ್ಞ ಮೊದಲಿಗರಾಗಿದ್ದು, ತಮ್ಮ ಕವನಗಳ ಮೂಲಕ ಜ್ಞಾನದಿಂದ ಸುಖ ಸಂತೋಷಗಳನ್ನು ಕಾಣಬಹುದಾಗಿದೆ ಎಂಬ ಸಂದೇಶವನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಸರ್ವಜ್ಞ ಕವಿಗಳು ತಮ್ಮ ತ್ರಿಪದಿಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸಿದ್ದಾರೆ. ಅವರ ವಚನಗಳು ಸಮಾಜದ ಎಲ್ಲಾ ವ್ಯಕ್ತಿಗಳಿಗೆ ಜೀವನ ಮಾರ್ಗದರ್ಶನವಾಗಿದೆ. ಸಂಕಷ್ಟಗಳನ್ನು, ಮೌಢ್ಯತ್ಯೆಯನ್ನು ಹೋಗಲಾಡಿಸುವುದರ ಜೊತೆಗೆ ಶಿಕ್ಷಣದಿಂದ ನಿರ್ಭಯ ಬದುಕನ್ನು ನಡೆಸಬಹುದಾಗಿದೆ ಎಂಬ ಸಂದೇಶವನ್ನು ತಮ್ಮ ವಚನದ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.
ಸಮಾರಂಭವನ್ನು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದಕ್ಕೂ ಮೊದಲು ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದವರೆಗೆ ಸಂತಕವಿ ಸರ್ವಜ್ಞರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಅರ್ಥ ಕಳೆದುಕೊಳ್ಳುತ್ತಿರುವ ಜಯಂತಿಗಳು: ಕಾಟಾಚಾರ ಆಚರಣೆ
ಮುಖ್ಯವಾಗಿ ರಾಯಚೂರು ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಇತ್ತೀಚೆಗೆ ಆಯೋಜಿಸುತ್ತಿರುವ ಜಯಂತಿ ಕಾರ್ಯಕ್ರಮಗಳು ಕೇವಲ ಕೌಂಟಿಗೆ ಸೀಮಿತಗೊಳ್ಳುತ್ತಿವೆ.
ಸರ್ಕಾರಗಳು ಜಯಂತಿ ಆಚರಣೆಯ ಸದುದ್ದೇಶ ಮರೆತಂತೆ ಭಾವಿಸಿರುವ ಕನ್ನಡ ಮತ್ತು ಸಂಸ್ಕೃತಿ (ಜಯಂತಿ ಆಯೋಜನೆಯ ಜವಾಬ್ದಾರಿ ಹೊಂದಿರುವ) ಇಲಾಖೆ ಇಂತಹ ಕಾರ್ಯಕ್ರಮಗಳಲ್ಲಿ ಜನರನ್ನು ಸೇರಿಸುವುದು, ಮಹಾನ್ ನಾಯಕರ ಸ್ಮರಣೆ ಜೊತೆಗೆ ಅವರ ಜೀವನ ಸಾಧನೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.