ಸಂತೋಷ್ ರೈ ಸೇವಾ ಕಾರ್ಯ ದೇಶಕ್ಕೇ ಮಾದರಿ: ಕ್ಯಾ. ಚೌಟ

KannadaprabhaNewsNetwork |  
Published : Aug 28, 2026, 02:45 AM IST
ಫಲಾನುಭವಿ ಕುಟುಂಬಕ್ಕೆ ಮನೆಯ ಕೀಲಿಕೈ ಹಸ್ತಾಂತರ. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜನಸೇವೆಯ ಆದರ್ಶವನ್ನು ಪ್ರೇರಣೆಯಾಗಿಸಿಕೊಂಡು ಸಮಾಜದ ಅಶಕ್ತ ವರ್ಗದವರಿಗೆ ನಮೋ ಕುಟೀರ ನಿರ್ಮಿಸಿ ಕೊಡುತ್ತಿರುವ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಸೇವಾ ಕಾರ್ಯ ಜಿಲ್ಲೆ ಮಾತ್ರವಲ್ಲದೆ ಇಡೀ ದೇಶಕ್ಕೆ ಮಾದರಿ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಉಳ್ಳಾಲ: ಪ್ರಧಾನಿ ನರೇಂದ್ರ ಮೋದಿ ಅವರ ಜನಸೇವೆಯ ಆದರ್ಶವನ್ನು ಪ್ರೇರಣೆಯಾಗಿಸಿಕೊಂಡು ಸಮಾಜದ ಅಶಕ್ತ ವರ್ಗದವರಿಗೆ ‘ನಮೋ ಕುಟೀರ’ ನಿರ್ಮಿಸಿ ಕೊಡುತ್ತಿರುವ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಸೇವಾ ಕಾರ್ಯ ಜಿಲ್ಲೆ ಮಾತ್ರವಲ್ಲದೆ ಇಡೀ ದೇಶಕ್ಕೆ ಮಾದರಿ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.ಉಳ್ಳಾಲ ತಾಲೂಕಿನ ಅಡ್ಕ ಶ್ರೀ ಭಗವತಿ ದೈವಸ್ಥಾನದ ದರ್ಶನ ಪಾತ್ರಿ ಶ್ರವಣ ಬೆಳ್ಚಪ್ಪಾಡ ಅವರಿಗಾಗಿ ಅಡ್ಕದ ದೊಡ್ಡಮನೆ ಕಾಂಪೌಂಡ್‌ನಲ್ಲಿ ನಿರ್ಮಿಸಲಾದ 7ನೇ ‘ನಮೋ ಕುಟೀರ’ದ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ, ಫಲಾನುಭವಿ ಕುಟುಂಬಕ್ಕೆ ಮನೆಯ ಕೀಲಿಕೈ ಹಸ್ತಾಂತರಿಸಿ ಮಾತನಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಿ.ಎಸ್. ಪ್ರಕಾಶ್ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿದ್ದರೂ ಅಧಿಕಾರದ ಆಸೆಗಿಂತ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವ ಸಂತೋಷ್ ಬೋಳಿಯಾರ್ ಅವರು ಅನಾರೋಗ್ಯದ ನಡುವೆಯೂ ತಮ್ಮ ಸಂಕಲ್ಪ ಕಳೆದುಕೊಂಡಿಲ್ಲ ಎಂದರು.

ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಹಿರಿಯ ಬಿಜೆಪಿ ಮುಖಂಡ ಸೀತಾರಾಮ ಬಂಗೇರ, ಕೈರಂಗಳ ಶಾರದಾ ಗಣಪತಿ ವಿದ್ಯಾ ಕೇಂದ್ರದ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ದಿನೇಶ್ ಶರ್ಮ, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಉದ್ಯಮಿ ದಿನೇಶ್ ಎಂ.ಪಿ., ದೈವಜ್ಞ ದಿನೇಶ್ ಪಣಿಕ್ಕರ್, ಮೂರೂರು ಬೋವಿ ಮಹಾಸಭಾ ಅಧ್ಯಕ್ಷ ಹರೀಶ್ ಟಿ. ಉಚ್ಚಿಲ್, ಸಂತೋಷ್ ಬೋಳಿಯಾರ್ ಅವರ ಪತ್ನಿ ವೀಣಾ ಎಸ್. ರೈ, ಪುತ್ರ ಸಮ್ಯಕ್ತ್ ರೈ, ಪುತ್ರಿ ಸ್ಪರ್ಶ ಎಸ್. ರೈ ಮತ್ತಿತರರಿದ್ದರು.‘ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹತ್ತಿರದಿಂದ ಮಾತನಾಡುವ ಅವಕಾಶ ನನಗೆ ದೊರೆತಿದೆ. ಅವರಲ್ಲಿರುವ ದೇವತಾ ಶಕ್ತಿಯನ್ನು ನಾನು ಗ್ರಹಿಸಿದ್ದೇನೆ. ಅವರ ಹೆಸರಿನಲ್ಲಿ ಅಶಕ್ತ ವರ್ಗದವರಿಗೆ 10 ಮನೆಗಳನ್ನು ನಿರ್ಮಿಸುವ ಸಂಕಲ್ಪ ಕೈಗೊಂಡಿದ್ದೇನೆ. -ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಪೋಕ್ಲು ವ್ಯಾಪ್ತಿಯಲ್ಲಿ ಸಂಭ್ರಮದ ಈದ್ ಮಿಲಾದ್
ಟಿಟಿ ಮೇಲೆ ಲಾರಿ ಉರುಳಿ ನಾಲ್ವರಿಗೆ ಗಾಯ