ಸಸಿ ನೆಟ್ಟು ಪೋಷಣೆಗೆ ಮುಂದಾಗಬೇಕು: ಸುಷ್ಮಾ ಟಿ.ಸಿ

KannadaprabhaNewsNetwork |  
Published : Jun 09, 2024, 01:32 AM IST
ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ನ್ಯಾ.ಟಿ.ಸುಷ್ಮ  ಅಭಿಮತ. | Kannada Prabha

ಸಾರಾಂಶ

ಬನಹಟ್ಟಿಯ ವೃಕ್ಷ ಉದ್ಯಾನದಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಡಂಬರದ ಆಚರಣೆಯಾಗದೆ, ಅದು ನಿತ್ಯದ ಕಾಯಕವಾಗಬೇಕು. ಗಿಡಮರಗಳನ್ನು ನೆಡುವುದರ ಜೊತೆಗೆ ಅವುಗಳ ರಕ್ಷಣೆಯಲ್ಲಿಯೂ ನಾವು ತೊಡಗಬೇಕು. ಅಂದಾಗ ನಿತ್ಯ ನೂತನ ಪರಿಶುದ್ಧ ಪರಿಸರ ನಮ್ಮದಾಗುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಬನಹಟ್ಟಿಯ ದಿವಾಣಿ ನ್ಯಾ.ಸುಷ್ಮಾ ಟಿ.ಸಿ. ತಿಳಿಸಿದರು.

ಬನಹಟ್ಟಿಯ ವೃಕ್ಷ ಉದ್ಯಾನದಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವ ಸಂಕುಲ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಸಸಿ ನೆಟ್ಟು ಅದರ ಪೋಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಮಖಂಡಿ ವಲಯ ಅರಣ್ಯಾಧಿಕಾರಿ ಪವನ ಕುರಣಿಂಗ ಮಾತನಾಡಿ, ಆರ್ಥಿಕ ಅಭಿವೃದ್ಧಿ ಜೊತೆ ಪರಿಸರ ಸಂರಕ್ಷಣೆ ಅಗತ್ಯವಿದ್ದು, ಪ್ರತಿಯೊಬ್ಬರು ಮುಂದಿನ ಭವಿಷ್ಯದ ದಿನಗಳಲ್ಲಿ ಮನುಕುಲದ ಸಂರಕ್ಷಣೆಗೆ ಅರಣ್ಯ ರಕ್ಷಣೆಯಲ್ಲಿ ತೊಡಗಬೇಕು ಎಂದರು.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ನಾವಿ, ಮಹೇಶ ಜಿ, ಗಸ್ತು ಅರಣ್ಯ ಅಧಿಕಾರಿಗಳು, ಮಹಾಂತೇಶ ಚಂಡಕಿ, ಲಕ್ಷ್ಮಣ ಪಾಟೀಲ, ವಕೀಲರಾದ ಸುಜಾತಾ ನಿಡೋಣಿ, ವರ್ಧಮಾನ ಕೋರಿ, ಎಸ್.ಜಿ.ಸಲಬನ್ನವರ, ಜುಬೇರ ಖಲಿಪ, ಕಾರ್ತಿಕ ಭೂತಿ, ಮಹೇಶ ಕೆಂದೂಳಿ, ಬಸವರಾಜ ಕುಂಬಾರ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!