ನೆಲಮಂಗಲ: ಕನ್ನಡ ಚಿತ್ರರಂಗಕ್ಕೆ ಬಹುಭಾಷಾ ಹಿರಿಯ ನಟಿ ಸರೋಜಾದೇವಿ ಅವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಟಿ.ಎಸ್.ಶೀತಲ್ ತಿಳಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಕನ್ನಡ ಸಾಂಸ್ಕೃತಿಕ ರಂಗದಿಂದ ಆಯೋಜಿಸಿದ್ದ ಹಿರಿಯ ನಟಿ ಸರೋಜಾದೇವಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ದಕ್ಷಿಣ ಭಾರತದ ಬಹುಭಾಷಾ ನಟಿ ಸರೋಜಾದೇವಿ ಅವರ ಅಭಿನಯ ಅಮೋಘವಾಗಿತ್ತು. ನಾವು ಕೂಡ ಚಿಕ್ಕವಯಸ್ಸಿನಲ್ಲಿ ಅವರ ಚಿತ್ರಗಳನ್ನು ನೋಡಿದ್ದೇವೆ. ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡುವ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಜತೆಗೆ ಅವರ ಅಭಿನಯ ಪ್ರಸ್ತುತ ಚಿತ್ರರಂಗವನ್ನು ಪ್ರವೇಶಿಸುವ ಯುವ ಸಮುದಾಯಕ್ಕೆ ಮಾದರಿಯಾಗಿದೆ. ಸರೋಜಾದೇವಿ ಅವರು ಚಿತ್ರರಂಗದ ಜತೆಗೆ ಸಮಾಜಮುಖಿ ಕಾರ್ಯಕ್ಕೂ ಅನೇಕ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಹಿರಿಯ ನಟಿ ಸರೋಜಾದೇವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್, ಪುರಸಭೆ ಮಾಜಿ ಅದ್ಯಕ್ಷ ಎಚ್.ಜಿ.ರಾಜು, ಕನ್ನಡ ಸಾಂಸ್ಕೃತಿಕ ರಂಗ ಕಾರ್ಯದರ್ಶಿ ಗಿರೀಶ್, ವಿಜಯ್‌ಕುಮಾರ್, ಪದವಿ ಪೂರ್ವಶಿಕ್ಷಣ ಇಲಾಖೆ ನಿವೃತ ಉಪನಿರ್ದೇಶಕ ಮಹಾಲಿಂಗಪ್ಪ.ವಿ.ನೆಗಳೂರು, ನಗರಸಭೆ ಹೆಚ್ಚುವರಿ ಸದಸ್ಯ, ಸಾಹಿತಿ ವೆಂಕಟೇಶ್.ಆರ್.ಚೌಥಾಯಿ, ನಗರಸಭೆ ಹೆಚ್ಚುವರಿ ಸದಸ್ಯ ಕೃಪಾನಂದ್, ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಯುವ ಘಟಕ ಅಧ್ಯಕ್ಷ ರಮೇಶ್, ಮುಖಂಡ ಕೆಂಪರಾಮಯ್ಯ, ದೇವರಾಜು, ರಾಜಮ್ಮ ಪ್ರಕಾಶ್, ಸೌಮ್ಯ, ರಾಜೇಶ್ವರಿ, ಸುಮಾ, ಶಾಂತಕುಮಾರಿ, ವೀಣಾ, ರಂಗಸ್ವಾಮಿ, ವಿಶ್ವನಾಥ್, ನಾಗೇಶ್, ರಾಮಣ್ಣ, ಅನಂತಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
(ಕ್ಯಾಪ್ಷನ್)ನೆಲಮಂಗಲದ ತಾಲೂಕು ಕಚೇರಿ ಮುಂಭಾಗದಲ್ಲಿ ಕನ್ನಡ ಸಾಂಸ್ಕೃತಿಕ ರಂಗದಿಂದ ಬುಧವಾರ ಹಿರಿಯ ನಟಿ ಸರೋಜಾದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.