ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 8ನೇ ದಿನದ ಕಾರ್ಯಕ್ರಮದಲ್ಲಿ ಸರ್ವಜ್ಞರ ಕುರಿತ ಕಾರ್ಯಕ್ರಮವನ್ನು ಡಾ.ಮಹೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ವಜ್ಞರು ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಯಾಗಿದ್ದು, ಅತ್ಯಂತ ಶ್ರೇಷ್ಠಕವಿ, ಅತ್ಯಂತ ದಾರ್ಶನಿಕರು ಎಂದು ಸಿಮ್ಸ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 8ನೇ ದಿನದ ಕಾರ್ಯಕ್ರಮದಲ್ಲಿ ಸರ್ವಜ್ಞನ ಕುರಿತು ಮಾತನಾಡಿದರು. ಸರ್ವಜ್ಞರು ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಯಾಗಿದ್ದರು. ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಅಂಬಲೂರು ಮಾಸೂರು. ಇದು ಈಗ ಸರ್ವಜ್ಞನ ಮಾಸೂರು ಎಂದು ಪ್ರಸಿದ್ಧಿ ಪಡೆದಿದೆ. ಅವರು ಬಾಲ್ಯದಲ್ಲಿ ಆಗಾಧ ಪಾಂಡಿತ್ಯ ಹೊಂದಿದ್ದರು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾಸಿದರು. ಅವರ ವಚನಗಳು ಅವರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿದೆ. ಅವರು ರಚಿಸಿದ ತ್ರಿಪದಿಗಳಿಗೆ ಲೆಕ್ಕವೇ ಇಲ್ಲ. ಆಶುಕವಿಯಾದ್ದರಿಂದ ಎಷ್ಟೋ ಕವನಗಳು ಅವರ ಸ್ಮೃತಿಯಲ್ಲೇ ಉಳಿದಿರಬಹದು. ಸಾವಿರ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿದೆ ಎಂದರು. ಸರ್ವಜ್ಞನ ತ್ರಿಪದಿಗಳು ಸರಳತೆ, ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತು ಹಲವು ಒಗಟುಗಳು ಸಹ ಅವರ ತ್ರಿಪದಿಗಳಲ್ಲಿ ಸೇರಿವೆ. ಸರ್ವಜ್ಞನ ಹೆಸರನ್ನು ನಗರದ ಪ್ರಮುಖ ರಸ್ತೆ, ವೃತ್ತಕ್ಕೆ ನಾಮಕರಣ ಮಾಡುವ ಕೆಲಸ ಆಗಬೇಕಿದೆ ಎಂದರು.
ಕನ್ನಡ ಜ್ಯೋತಿ ಮನೆಮನೆಗಳಲ್ಲಿ ಬೆಳಗಲಿ:
ಡಾ.ಶ್ವೇತ ಬಸವರಾಜೇಂದ್ರ ಮಾತನಾಡಿ, ಕನ್ನಡ ಜ್ಯೋತಿ ಮನೆಮನೆಗಳ ಬೆಳಗುವಂತಾಗಬೇಕು. ನವೆಂಬರ್ ತಿಂಗಳು ಆರಂಭವಾದರೆ ಮುಂದಿನ ನವೆಂಬರ್ ತಿಂಗಳ ತನಕ ಕನ್ನಡ ಜ್ಯೋತಿ ಬೆಳಗುವಂತಾಗಬೇಕು. ಆಗ ಮಾತ್ರ ಕನ್ನಡ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದರು. ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಶಿವಲಿಂಗಮೂರ್ತಿ, ನಿಜಧ್ವನಿ ಗೋವಿಂದರಾಜು, ರಾಚಪ್ಪ, ಚಾ.ವೆಂ.ರಾಜ್ ಗೋಪಾಲ್,ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ನಂಜುಂಡಶೆಟ್ಟಿ, ತಮಿಳು ಸಂಘದ ಜಗದೀಶ್, ತಾಂಡವಮೂರ್ತಿ, ಶಿವು, ಬಸವರಾಜನಾಯಕ, ಪ್ರಕಾಶ್ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.