ಐಎಫ್‌ಎಸ್‌ ಪರೀಕ್ಷೆಯಲ್ಲಿ ಎಸ್‌.ಎಲ್‌. ಶಶಿಕುಮಾರ್‌ 66ನೇ ರ್‍ಯಾಂಕ್‌

KannadaprabhaNewsNetwork |  
Published : May 10, 2024, 01:30 AM IST
ಮಧುಗಿರಿಯ ಎಸ್‌.ಎಲ್‌.ಶಶಿಕುಮಾರ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಐಎಫ್‌ಎಸ್‌ ಇಂಡಿಯನ್‌ ಫಾರೆಸ್ಟ್‌ ಸರ್ವೀಸ್ ದೇಶದಲ್ಲೇ 66ನೇ ರ್ಯಾಂಕ್‌ ಪಡೆದು ತೇರ್ಗಡೆ ಹೊಂದಿ ಹಿನ್ನಲೆಯಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಪ್ರತಿಭಾವಂತ ವಿದ್ಯಾರ್ಥಿ ಎಸ್‌.ಎಲ್‌.ಶಸಿಕುಮಾರ್‌ ಅವರನ್ನು  ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಭಿನಂದಿಸಿದರು. ಮುಖ್ಯ ಶಿಕ್ಷಕ ಲಕ್ಷ್ಮೀರಂಗಯ್ಯ,ತಾಯಿ ಚಂದ್ರಕಾಂತಮ್ಮ ಇದ್ದಾರೆ.  | Kannada Prabha

ಸಾರಾಂಶ

ಅಪ್ಪಟ ಗ್ರಾಮೀಣ ಪ್ರದೇಶದ ಪ್ರತಿಭೆ ಎಸ್‌.ಎಲ್‌. ಶಶಿಕುಮಾರ್‌ ಯುಪಿಎಸ್‌ಸಿಯ ಐಎಫ್‌ಎಸ್‌ ಪರೀಕ್ಷೆಯಲ್ಲಿ ದೇಶದಲ್ಲೇ 66ನೇ ರ್‍ಯಾಂಕ್‌ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಅಪ್ಪಟ ಗ್ರಾಮೀಣ ಪ್ರದೇಶದ ಪ್ರತಿಭೆ ಎಸ್‌.ಎಲ್‌. ಶಶಿಕುಮಾರ್‌ ಯುಪಿಎಸ್‌ಸಿಯ ಐಎಫ್‌ಎಸ್‌ ಪರೀಕ್ಷೆಯಲ್ಲಿ ದೇಶದಲ್ಲೇ 66ನೇ ರ್‍ಯಾಂಕ್‌ ಪಡೆದಿದ್ದಾರೆ. ಐಎಎಸ್‌ನಲ್ಲಿ ಕೇವಲ 3 ಅಂಕಗಳಿಂದ ವಂಚಿತರಾಗಿದ್ದು, ಪ್ರಸುತ್ತ 919 ಅಂಕಗಳಿಸುವ ಮೂಲಕ ಇಂಡಿಯನ್‌ ಫಾರೆಸ್ಟ್‌ ಸರ್ವೀಸ್‌ಗೆ ತೇರ್ಗಡೆಯಾಗಿದ್ದಾರೆ.

ಪಟ್ಟಣದ ಬಿಇ ಪದವೀಧರ ಎಸ್‌.ಎಲ್‌.ಶಶಿಕುಮಾರ್‌ ಇತ್ತೀಚಿಗೆ ಪ್ರಕಟಗೊಂಡ ಯುಪಿಎಸ್‌ಸಿ ಪರೀಕ್ಷೆಯ ಇಂಡಿಯನ್‌ ಫಾರೆಸ್ಟ್‌ ಸರ್ವೀಸ್‌ (ಐಎಫ್‌ಎಸ್‌) ದೇಶದಲ್ಲೇ 66ನೇ ರ್‍ಯಾಂಕ್‌ ಪಡೆದಿದ್ದಾರೆ. ಮಧುಗಿರಿ ಕಸಬಾ ವ್ಯಾಪ್ತಿಯ ಸೋಂಪುರ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀರಂಗಯ್ಯ, ಪತ್ನಿ ಚಂದ್ರಕಾಂತಮ್ಮರ ಪುತ್ರ ಎಸ್‌.ಎಲ್‌.ಶಶಿಕುಮಾರ್‌.

ಎಸ್‌.ಎಲ್‌.ಶಶಿಕುಮಾರ್‌ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮಧುಗಿರಿಯ ಕಾರ್ಡಿಯಲ್ ಶಾಲೆ, ದ್ವಿತೀಯ ಪಿಯುಸಿ ತುಮಕೂರಿನ ಸರ್ವೋದಯ ಕಾಲೇಜಿನಲ್ಲಿ ಓದಿದ್ದಾರೆ. ಬೆಂಗಳೂರಿನ ಪಿಇಎಸ್‌ ಕಾಲೇಜಿನಲ್ಲಿ ಬಿಇ ಟೆಲಿ ಕಮ್ಯುನಿಕೇಷನ್‌ನಲ್ಲಿ ಪದವಿ ಪಡೆದಿದ್ದರು. ಯುಪಿಎಸ್‌ಸಿಯಲ್ಲಿ ಐಎಎಸ್‌ನಲ್ಲಿ ಕೇವಲ 3 ಅಂಕಗಳಿಂದ ವಂಚಿತರಾಗಿದ್ದು, ಪ್ರಸುತ್ತ 919 ಅಂಕಗಳಿಸುವ ಮೂಲಕ ಇಂಡಿಯನ್‌ ಫಾರೆಸ್ಟ್‌ ಸರ್ವೀಸ್‌ಗೆ ತೇರ್ಗಡೆಯಾಗಿದ್ದಾರೆ. ಇವರ ಸಾಧನೆಗೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಎಂಎಲ್‌ಸಿ ಆರ್‌.ರಾಜೇಂದ್ರ, ಕಾರ್ಡಿಲ್ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು