ಸಂಸದ ಶ್ರೇಯಸ್ ಎಂ.ಪಟೇಲ್ ಮನೆಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ

KannadaprabhaNewsNetwork |  
Published : Apr 20, 2025, 01:56 AM ISTUpdated : Apr 20, 2025, 01:17 PM IST
19ಎಚ್ಎಸ್ಎನ್9 : ಹೊಳೆನರಸೀಪುರದಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಮನೆಗೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಭೇಟಿ ನೀಡಿದ್ದರು. | Kannada Prabha

ಸಾರಾಂಶ

ಪಟ್ಟಣದಲ್ಲಿರುವ ಸಂಸದ ಶ್ರೇಯಸ್ ಎಂ.ಪಟೇಲ್ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಕೆಲ ಸಮಯವಿದ್ದು, ಆತಿಥ್ಯ ಸ್ವೀಕರಿಸಿ ತೆರಳಿದರು

  ಹೊಳೆನರಸೀಪುರ :  ಪಟ್ಟಣದಲ್ಲಿರುವ ಸಂಸದ ಶ್ರೇಯಸ್ ಎಂ.ಪಟೇಲ್ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಕೆಲ ಸಮಯವಿದ್ದು, ಆತಿಥ್ಯ ಸ್ವೀಕರಿಸಿ ತೆರಳಿದರು.

ಕರ್ನಾಟಕ ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಅವರು ಅರಕಲಗೂಡಿನಲ್ಲಿ ಜೈ ಭೀಮ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಲು ಆಗಮಿಸಿ, ವೇದಿಕೆ ಕಾರ್ಯಕ್ರಮ ನಂತರ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಸಂಸದರ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ರಾಜ್ಯದ ಹಿರಿಯ ಸಚಿವರಿಗೆ ಸಂಸದ ಶ್ರೇಯಸ್ ಅವರು ಲಘು ಉಪಹಾರವನ್ನು ಸರ್ವ್ ಮಾಡುವ ಮೂಲಕ ಸರಳತೆ ಮೆರೆಯುವ ಜತೆಗೆ ಗೌರವ ಸೂಚಿಸಿದರು. ಸಚಿವರು ಲೋಕಾರೂಢಿಯ ಮಾತುಗಳನ್ನಾಡಿ, ಸಂಸದರಿಂದ ಸನ್ಮಾನ ಸ್ವೀಕರಿಸಿ ತೆರಳಿದರು.

ನೂರಾರು ಕಾರ್ಯಕರ್ತರು ಸಂಸದರ ಮನೆ ಮುಂದೆ ಜಮಾಯಿಸಿ, ರಾಜ್ಯ ನಾಯಕರುಗಳಿಗೆ ಹಾಗೂ ಸಂಸದರಿಗೆ ಜೈಕಾರ ಕೂಗಿದರು. ಕೆಪಿಸಿಸಿ ಸದಸ್ಯೆ ಅನುಪಮಾ ಮಹೇಶ್, ರಾಜ್ಯ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಮುಜಾಯಿದ್ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ, ಮುಖಂಡರಾದ ರವಿ ಮಾರಗೋಡನಹಳ್ಳಿ, ಪುರುಷೋತ್ತಮ್ ಅಂಬೇಡ್ಕರ್‌ ನಗರ, ಬಾಗಿವಾಳು ಮಂಜು, ಸುದರ್ಶನ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''