ಪ್ರೌಢಶಾಲಾ ವಿಭಾಗದ ಗಾಯನ ಸ್ವರ್ಧೆಯಲ್ಲಿ ಕಲ್ಲೋಳಿಯ ಎಸ್.ಆರ್.ಇ ಶಾಲೆಯ ಸುಪ್ರೀಯಾ ಮಠಪತಿ ಪ್ರಥಮ, ಖನಗಾವದ ಆರ್.ಎಂ.ಎಸ್.ಎ ಶಾಲೆಯ ಪೂಜಾ ಮಿಲ್ಕೆ ದ್ವಿತೀಯ, ಗೋಕಾಕನ ಫಾಲ್ಸ್‌ನ ಪೋಬ್ಸ ಅಕಾಡೆಮಿ ಸ್ಕೂಲಿನ ಸುನಿಧಿ ಮುತಾಲಿಕ ದೇಸಾಯಿ ತೃತೀಯ ಸ್ಥಾನ ಪಡೆದರು.
ಕನ್ನಡಪ್ರಭ ವಾರ್ತೆ ಗೋಕಾಕ
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ 20ನೇ ಸತೀಶ ಶುಗರ್ಸ್ ಅವಾರ್ಡ್ಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂತಿಮ ದಿನದ ಕಾಲೇಜು ವಿಭಾಗದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಎಸ್.ಎಸ್.ಎ ಪಿಯು ಕಾಲೇಜಿನ ಸುದರ್ಶನ್ ರೆಬ್ಬನ್ನವರ ಪ್ರಥಮ, ಜ್ಞಾನ ದೀಪ ಕಾಲೇಜಿನ ಶಿವರಾಯಿ ಕಳಶ್ಯಾಳಗೋಳ ದ್ವಿತೀಯ, ಮೂಡಲಗಿಯ ಎಂ.ಇ.ಎಸ್.ಡಿಗ್ರಿ ಕಾಲೇಜಿನ ಐಶ್ವರ್ಯ ತಳವಾರ ತೃತೀಯ ಸ್ಥಾನ ಪಡೆದರು. ಪ್ರಥಮಸ್ಥಾನ ಪಡೆದ ವಿದ್ಯಾರ್ಥಿಗೆ ₹10 ಸಾವಿರ, ದ್ವಿತೀಯ ₹7 ಸಾವಿರ, ತೃತೀಯ ₹5 ಸಾವಿರ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.ಪ್ರೌಢಶಾಲಾ ವಿಭಾಗದ ಗಾಯನ ಸ್ವರ್ಧೆಯಲ್ಲಿ ಕಲ್ಲೋಳಿಯ ಎಸ್.ಆರ್.ಇ ಶಾಲೆಯ ಸುಪ್ರೀಯಾ ಮಠಪತಿ ಪ್ರಥಮ, ಖನಗಾವದ ಆರ್.ಎಂ.ಎಸ್.ಎ ಶಾಲೆಯ ಪೂಜಾ ಮಿಲ್ಕೆ ದ್ವಿತೀಯ, ಗೋಕಾಕನ ಫಾಲ್ಸ್‌ನ ಪೋಬ್ಸ ಅಕಾಡೆಮಿ ಸ್ಕೂಲಿನ ಸುನಿಧಿ ಮುತಾಲಿಕ ದೇಸಾಯಿ ತೃತೀಯ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ₹15 ಸಾವಿರ, ದ್ವಿತೀಯ ₹13 ಸಾವಿರ, ತೃತೀಯ ₹10 ಸಾವಿರ ನಗದು, ಟ್ರೋಫಿ ನೀಡಲಾಯಿತು. ಪ್ರಾಥಮಿಕ ವಿಭಾಗದ ಸಮೂಹ ನೃತ್ಯ ಸ್ವರ್ಧೆಯಲ್ಲಿ ಗೋಕಾಕನ ಚನ್ನಬಸವೇಶ್ವರ ವಿದ್ಯಾಪೀಠ ಶಾಲಾ ತಂಡ ಪ್ರಥಮ, ನಾಗನೂರಿನ ಎಂ.ಡಿ.ಆರ್.ಎಸ್.ತಂಡ ದ್ವಿತೀಯ, ದೂಪದಾಳನ ಶ್ರೀ ಮಹಾವೀರ ಖೇಮಲಾಪೂರೆ ಶಾಲಾ ತಂಡ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಸಮೂಹ ನೃತ್ಯ ಸ್ವರ್ಧೆಯಲ್ಲಿ ಕಲ್ಲೋಳಿಯ ಪಿ.ಜೆ.ಎನ್.ಶಾಲೆಯ ಶಾಲಾ ತಂಡ ಪ್ರಥಮ, ಕಲ್ಲೋಳಿಯ ಮೂರಾರ್ಜಿ ಶಾಲಾ ತಂಡ ದ್ವಿತೀಯ , ಗೋಕಾಕನ ಶೇಪರ್ಡ ಮಿಶನ್ ಆಂಗ್ಲ ಮಾಧ್ಯಮ ಶಾಲಾ ತಂಡ ತೃತೀಯ ಸ್ಥಾನ ಪಡೆದಿದ್ದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹50 ಸಾವಿರ, ದ್ವಿತೀಯ ₹30 ಸಾವಿರ ಹಾಗೂ ತೃತೀಯ ₹20 ಸಾವಿರ ನಗದು, ಟ್ರೋಫಿ ನೀಡಿ ಗಣ್ಯರು ಗೌರವಿಸಿದರು. ಈ ವೇಳೆ ಸತೀಶ ಶುಗರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ಯುವ ಮುಖಂಡ ರಾಹುಲ್ ಜಾರಕಿಹೊಳಿ, ಸನತ್ ಜಾರಕಿಹೊಳಿ, ಆರ್ಯನ್ ಜಾರಕಿಹೊಳಿ, ವಿರೇಶ ದೊಡಮನಿ, ರಾಮಚಂದ್ರ ದಿಕ್ಷಿತ್ , ಬಸವರಾಜ ಸಾಯನ್ನವರ, ಬಾಲಚಂದ್ರ ಶಿಗ್ಯಾಗೋಳ, ಡಾ.ಮಹೇಶ್ ಕೋಣಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಬಸವರಾಜ ಕುರಿಹೂಲಿ ಸೇರಿ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.