ಸತ್ಸಂಗದಿಂದ ಮನೋಲ್ಲಾಸಸ ಆತ್ಮೋನ್ನತಿ: ಡಿ.ಎಸ್. ಯಶವಂತ

KannadaprabhaNewsNetwork |  
Published : May 26, 2025, 12:57 AM IST
ಹಾನಗಲ್ಲಿನಲ್ಲಿ ವಿವೇಕ ಜಾಗೃತ ಬಳಗದ ಕಾರ್ಯಕ್ರಮದಲ್ಲಿ ಸುಳ್ಯದ ಡಿ.ಎಸ್. ಯಶವಂತ ಮಾತನಾಡಿದರು. | Kannada Prabha

ಸಾರಾಂಶ

ಸತ್ಸಂಗದಿಂದ ಮನುಷ್ಯ ತನ್ನ ಮಾನಸಿಕತೆಯನ್ನೇ ಬದಲಿಸಿಕೊಳ್ಳಬಲ್ಲ. ಇದು ಬದುಕಿನ ಭರವಸೆಯನ್ನೂ ಮೂಡಿಸುತ್ತದೆ.

ಹಾನಗಲ್ಲ: ಸತ್ಸಂಗ ಮನುಷ್ಯನಿಗೆ ಮನೋಲ್ಲಾಸ ನೀಡುವುದಲ್ಲದೆ ಬದುಕಿನ ಭರವಸೆ ಮೂಡಿಸಿ ಆತ್ಮೋನ್ನತಿಗೆ ಸಾಕ್ಷಿಯಾಗಬಲ್ಲದು ಎಂದು ಸುಳ್ಯದ ಡಿ.ಎಸ್. ಯಶವಂತ ತಿಳಿಸಿದರು.

ಭಾನುವಾರ ಪಟ್ಟಣದ ವಿಠಲ ಮಂದಿರದ ಸಭಾಭವನದಲ್ಲಿ ಹಾನಗಲ್ಲ ತಾಲೂಕು ವಿವೇಕ ಜಾಗೃತ ಬಳಗದಿಂದ ಆಯೋಜಿಸಿದ್ದ ಆತ್ಮೋನ್ನತಿ ಶಿಬಿರದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರು ದೈವ ಸ್ವರೂಪಿಯಾಗಿದ್ದರು. ದೇವರ ಒಲುಮೆಗೆ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮೂಲಕ ಬೇಡಿಕೊಳ್ಳಬೇಕು. ಭಗವಂತನಲ್ಲಿ ಭಕ್ತಿಯ ವಿಶ್ವಾಸವಿಡಬೇಕು. ಗುರುದರುಶನಕ್ಕೆ ನಿರಂತರ ಪ್ರಾರ್ಥನೆ ಬೇಕು.

ಸತ್ಸಂಗದಿಂದ ಮನುಷ್ಯ ತನ್ನ ಮಾನಸಿಕತೆಯನ್ನೇ ಬದಲಿಸಿಕೊಳ್ಳಬಲ್ಲ. ಇದು ಬದುಕಿನ ಭರವಸೆಯನ್ನೂ ಮೂಡಿಸುತ್ತದೆ. ಸಾಲಿಗ್ರಾಮ ಡಿವೈನ್‌ ಪಾರ್ಕ್ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳೆದಿದೆ. ಆತ್ಮೋನ್ನತಿಗೆ ಧಾರ್ಮಿಕ ಶ್ರದ್ಧೇ ಬೇಕು. ನಾನು ನನ್ನದೆಂಬ ಅಹಂಕಾರ ಬಿಡಬೇಕು. ದೇಹಾಭಿಮಾನ ಬಿಟ್ಟು ನಿರಹಂಕಾರಿಯಾಗಿ ಭಕ್ತಿಯಿಂದಿರಬೇಕು. ಈ ಮೂಲಕ ವ್ಯಕ್ತಿತ್ವ ವಿಕಸನಗೊಂಡು ಮೌಲ್ಯಗಳು ಮನೆಮಾಡಲು ಸಾಧ್ಯ. ದೇವರ ಅನುಭೂತಿ ಪಡೆಯುವುದೇ ನಿಜವಾದ ಉದ್ದೇಶವಾಗಬೇಕು ಎಂದರು.

ರಾಣಿಬೆನ್ನೂರಿನ ನಾಗರಾಜ ಲಕ್ಷ್ಮೇಶ್ವರ ಮಾತನಾಡಿ, ಮಕ್ಕಳನ್ನು ಮೌಲಿಕ ಶಿಕ್ಷಣದ ಮೂಲಕ ಬದುಕಿನ ಶಿಕ್ಷಣ ಬೆಳೆಸುವುದು ಇಂದಿನ ಪಾಲಕರ ಅತ್ಯಂತ ಮಹತ್ವದ ಕರ್ತವ್ಯವಾಗಿದೆ. ಮಗುವಿನ ಭವಿಷ್ಯ ರೂಪಿಸಲು ಉತ್ತಮ ಮೌಲ್ಯ ಬಿತ್ತಿ ಸಂಕುಚಿತ ಭಾವನೆಗಳನ್ನು ಹೊರಹಾಕಬೇಕು. ಇತರರಲ್ಲಿಯ ಲೋಪದೋಷಗಳನ್ನು ಹುಡುಕದೇ ಒಳ್ಳೆಯತನ ಹುಡುಕುವಂತಾಗಬೇಕು. ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು.

ಮನೆಯಲ್ಲಿ ಹಿರಿಯರು ಜಾಗೃತವಾಗಿ ಮಾತು ನಡವಳಿಕೆ ತೋರಬೇಕು. ಮಕ್ಕಳು ಇದನ್ನು ಗಮನಿಸುತ್ತವೆ ಎಂಬ ಅರಿವು ಇರಲಿ. ಸದ್ಗುಣ ಬೆಳೆಸಲು ಮುಂದಾಗಿ. ಧರ್ಮ ಸಂಸ್ಕೃತಿ ಬದುಕು ಕಲಿಸಿ ಎಂದರು. ವಿವೇಕ ಜಾಗೃತ ಬಳಗದ ಜಿಲ್ಲಾ ಉಸ್ತುವಾರಿ ಬಗರೀನಾಥ ಬೇವಿನಕಟ್ಟಿ, ತಾಲೂಕು ಘಟಕದ ಅಧ್ಯಕ್ಷ ರಮೇಶ ಬಂಕಾಪುರ ವೇದಿಕೆಯಲ್ಲಿದ್ದರು. ಆರ್.ಬಿ. ರೆಡ್ಡಿ ಸ್ವಾಗತಿಸಿದರು. ಮಂಜುನಾಥ ದೊಡ್ಡಮನಿ ವಂದಿಸಿದರು. ಬಡವರಿಗೆ ನಮ್ಮ ಕ್ಲಿನಿಕ್‌ ವರದಾನ

ಶಿಗ್ಗಾಂವಿ: ಬಡವರು, ದಿನಗೂಲಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯ ದೊರಕುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಸೇವೆ ಸಲ್ಲಿಸುತ್ತದೆ ಎಂದು ಶಾಸಕ ಯಾಶೀರಖಾನ ಪಠಾಣ ತಿಳಿಸಿದರು.ತಾಲೂಕಿನ ಗಂಗೆಬಾವಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕೆಎಸ್‌ಆರ್‌ಪಿ ಪಡೆಯ ಸೇವೆ ಅಪಾರವಾಗಿದೆ. ಅವರ ಹಾಗೂ ಕುಟುಂಬಸ್ಥರ ಆರೋಗ್ಯವು ಕೂಡ ಮುಖ್ಯವಾಗಿದೆ. ಅದೇ ರೀತಿ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಚಿಕಿತ್ಸೆ ಲಭಿಸುವ ನಿಟ್ಟಿನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುವುದು ನಮ್ಮ ಕ್ಲಿನಿಕ್‌ನ ಉದ್ದೇಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಯಾಶೀರಖಾನ ಪಠಾಣ ಅವರನ್ನು ಕೆಎಸ್‌ಆರ್‌ಪಿ ಕಮಾಂಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಮಾಂಡೆಂಟ್ ನಾಗನಗೌಡ ಬಿ. ಮೆಳ್ಳಾಗಟ್ಟಿ, ಸಹಾಯಕ ಕಮಾಂಡೆಂಟ್ ಮಂಜಪ್ಪ ಕೋಟಿಹಾಳ, ತಾಲೂಕು ಆರೋಗ್ಯ ಅಧಿಕಾರಿ, ಡಾ. ಸತೀಶ್ ಎ.ಆರ್., ಗುಡ್ಡಪ್ಪ ಜಲದಿ, ಅಣ್ಣಪ್ಪ ಲಮಾಣಿ, ಶಂಭುಲಿಂಗಪ್ಪ ಆಜೂರ, ಮಹಾಂತೇಶ ಸಾಲಿ, ಜಿಲ್ಲಾ ಸಂಯೋಜಕ ಸಂತೋಷ ಹೊಸಮನಿ, ಆಡಳಿತ ವೈದ್ಯಾಧಿಕಾರಿ ಡಾ. ರಂಜಿತಾ, ಡಾ. ಮಲ್ಲೇಶ ಟಿ., ಅಶೋಕ ಬಿ. ಅಮಾತಣ್ಣವರ, ರಾಮನಗೌಡ ಪಾಟೀಲ, ಗುರುನಾಥ ಹಾಗಲೂರ, ಗುರವ್ವ ಸಿಸ್ಟರ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಮತ್ತು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ