ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಲೂಕಿನ ಮುಡುಕುತೊರೆಯಲ್ಲಿರುವ ಕಲ್ಲುಮಠದ ಆವರಣದಲ್ಲಿ ನಡೆದ ಶ್ರೀ ವಿರಕ್ತಾಶ್ರಮಾಧಿಕಾರ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಠಗಳ ಸಾಂತ್ವನದ ಮಾತುಗಳು ಆತ್ಮಸ್ಥೈರ್ಯವನ್ನು ತುಂಬುವುದರ ಜೊತೆಗೆ ಬದುಕಿನ ವಿಕಾಶಕ್ಕೂ ಅವಕಾಶ ಕಲ್ಪಿಸುವುದರಿಂದ ಮಠಗಳು ಮತ್ತು ಭಕ್ತರ ನಡುವೆ ಉತ್ತಮ ಬಾಂಧವ್ಯ ಬೆಸೆದಿದೆ ಎಂದರು.ನಾಡಿನಾದ್ಯಂತ ಇದ್ದಂತಹ 1,500 ಮಠಗಳ ಸಂಖ್ಯೆ ಕಡಿಮೆಯಾಗಿದ್ದರೂ ಮಠಗಳು ಇಂದಿಗೂ ಜಾತಿ, ಮತ, ಭೇದವಿಲ್ಲದೆ ಎಲ್ಲರಿಗೂ ಆಶ್ರಯ ಕೊಟ್ಟಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತೀವೆ. ಮಠಗಳಲ್ಲಿ ಆರ್ಥಿಕತೆಯ ಕೊರತೆಯಿದ್ದರೂ ಬರುವ ಭಕ್ತರು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆಶ್ರಯವನ್ನು ನೀಡುತ್ತಾ ಜನರಿಗೆ ನೆಮ್ಮದಿ ನೀಡಿವೆ. ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಕ್ಕೆ ರಾಜೇಂದ್ರ ಶ್ರೀಗಳು ಮತ್ತು ಸಿದ್ಗಗಂಗಾ ಶಿವಕುಮಾರ ಶ್ರೀಗಳು ಧಾರ್ಮಿಕರಾಗಿದ್ದಾರೆ ಎಂದರು.
ಮೈಸೂರು ಹೊಸಮಠದ ಚಿದಾನಂದ ಸ್ವಾಮಿಜಿ ಅವರ ನೇತೃತ್ವದಲ್ಲಿ ನಡೆಯುವ ಧಾರ್ಮಿಕ ಸಭೆಯನ್ನು ಕನಕಪುರ ದೇಗುಲ ಮಠದ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಉದ್ಘಾಟಿಸಿದರು. ನಂತರ ಗದ್ದುಗೆಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನೆರವೇರಿರು.
ಜೆಎಸ್ಎಸ್ ಮಾದಪ್ಪ ಪ್ರಾರ್ಥಿಸಿದರು. ಶಂಬುದೇವನಪುರ ಕುಮಾರಸ್ವಾಮಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ನಾಗೇಂದ್ರ ಪ್ರಭು ನಿರೂಪಿಸಿದರು. ಚನ್ನಬಸವ ಸ್ವಾಮೀಜಿ, ಸಿದ್ಧಮಲ್ಲ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ,
ಇಮ್ಮಡಿ ಉದ್ದಾನ ಸ್ವಾಮೀಜಿ, ಗೌಡ್ರು ಮಹದೇವಸ್ವಾಮಿ, ನಿವೃತ್ತ ಶಿಕ್ಷಕ ಪುಟ್ಟಬುದ್ಧಿ, ಎಸ್. ಕುಮಾರಸ್ವಾಮಿ, ಎನ್. ಮರಿಸ್ವಾಮಿ, ದೊಡ್ಡನಹುಂಡಿ ಗೌಡ್ರು ಸ್ವಾಮಿ, ಮಿಲ್ ನಂಜುಂಡಸ್ವಾಮಿ, ಶಿವಪ್ಪ, ಬಸವರಾಜ ಸ್ವಾಮಿ, ರಾಜೇಶ, ಬಸವಣ್ಣ, ಬಸವಲಿಂಗಪ್ಪ, ಕಟ್ಟೆಪುರ ಓಂಕಾರ ಮೂರ್ತಿ,