ಆಗಸ್ಟ್‌ 19ರಂದು ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಸತ್ಯಾಗ್ರಹ

KannadaprabhaNewsNetwork |  
Published : Jul 26, 2025, 01:30 AM IST
ಮುಂಡರಗಿ ತಾಲೂಕ ಸಾರ್ವಜನಿಕ ಹೋರಾಟ ವೇದಿಕೆ ಆಶ್ರಯದಲ್ಲಿ ಗದಗ ಮುಂಡರಗಿ ಹಪರನಹಳ್ಳಿ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಸತ್ಯಾಗ್ರಹ ಹಮ್ಮಿಕೊಳ್ಳುವ ಕುರಿತು ಕರಪತ್ರ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಗದಗ-ಮುಂಡರಗಿ ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ವಿವಿಧ ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ವಿವಿಧ ಪ್ರಗತಿ ಪರ ಸಂಘಟನೆಗಳ ಆಶ್ರಯದಲ್ಲಿ ಆ.19 ರಂದು ಬೆಳಗ್ಗೆ 11ಕ್ಕೆ ಗದಗ-ಬೆಟಗೇರಿ ರೈಲ್ವೆ ಕಚೇರಿ ಮುಂದೆ ಅನಿರ್ದಿಷ್ಟ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಗದಗ ಹರಪನಹಳ್ಳಿ ರೈಲ್ವೆ ಮಾರ್ಗ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ ಹೇಳಿದರು.

ಮುಂಡರಗಿ: ಗದಗ-ಮುಂಡರಗಿ ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ವಿವಿಧ ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ವಿವಿಧ ಪ್ರಗತಿ ಪರ ಸಂಘಟನೆಗಳ ಆಶ್ರಯದಲ್ಲಿ ಆ.19 ರಂದು ಬೆಳಗ್ಗೆ 11ಕ್ಕೆ ಗದಗ-ಬೆಟಗೇರಿ ರೈಲ್ವೆ ಕಚೇರಿ ಮುಂದೆ ಅನಿರ್ದಿಷ್ಟ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಗದಗ ಹರಪನಹಳ್ಳಿ ರೈಲ್ವೆ ಮಾರ್ಗ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ ಹೇಳಿದರು.ಪಟ್ಟಣದಲ್ಲಿಈ ಕುರಿತು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೋರಾಟ ರೂಪುರೇಷಗಳ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ 16 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. 2014ರಲ್ಲಿ ರೈಲ್ವೆ ಮುಂಗಡ ಪತ್ರದಲ್ಲಿ ತಾತ್ಕಾಲಿಕ ಮಂಜೂರಾತಿ ಸಿಕ್ಕು ದೆಹಲಿ ರೈಲ್ವೆ ಬೋರ್ಡಿನವರು 2015ರಲ್ಲಿ ಸರ್ವೇ ಮಾಡಿ 94 ಕಿಮೀಗೆ 813.14 ಕೋಟಿ ಬೇಕಾಗುತ್ತದೆ. ಹೀಗಾಗಿ ರೈಲ್ವೆ ಮಾರ್ಗ ಕಾಯ್ದಿರಿಸಲಾಗಿದೆ ಎಂಬ ವರದಿ ಕೊಡಲಾಗಿದೆ. ಆದ್ದರಿಂದ ಇದು ನನೆಗುದಿಗೆ ಬಿದ್ದಿದೆ. ಇನ್ನು ಹೋರಾಟವನ್ನು ತೀವ್ರಗೊಳಿಸಲು ಗದಗ ಕಚೇರಿ ಮುಂದೆ ವಿಭಿನ್ನ ಹೋರಾಟ ಹಮ್ಮಿಕೊಳ್ಳುವ ಮೂಲಕ ಭರವಸೆ ಸಿಗುವವರೆಗೂ ಅನಿರ್ದಿಷ್ಟ ಕಾಲ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಈ ಮಾರ್ಗದಲ್ಲಿ ಸಹ್ಯಾದ್ರಿ ಕಪ್ಪತಗುಡ್ಡ, ತುಂಗಭದ್ರ ನದಿ ಪ್ರದೇಶ, ಮುಂಡರಗಿ ಡಂಬಳ ಭಾಗದಲ್ಲಿ ತರಕಾರಿ ತೋಟಗಾರಿಕೆ ಬೆಳೆಗಳ ಪ್ರದೇಶ, ಮುಂಡರಗಿ ಹಡಗಲಿ, ಹರನಹಳ್ಳಿ ಭಾಗ ಬಳ್ಳಾರಿ, ಗದಗ ಜಿಲ್ಲೆಯ ವಾಣಿಜ್ಯ ಬೆಳೆಗಳು, ಲಕ್ಕುಂಡಿ, ಡಂಬಳ, ಹೂವಿನಹಡಗಲಿ, ಮುಂಡರಗಿ, ಗದಗ ಐತಿಹಾಸಿಕ ಸ್ಥಳಗಳು ಹೀಗೆ ಎಲ್ಲ ರೀತಿಯಿಂದಲೂ ಪೂರಕ ವಾತಾವಣ ಹೊಂದಿರುವುದರಿಂದ ಮಧ್ಯಮ ವರ್ಗದ ಜನತೆಗೆ ಕೂಲಿಕಾರ್ಮಿಕರಿಗೆ ಕಡಿಮೆ ಮತ್ತು ಉತ್ತಮ ಸಾರಿಗೆ ದೊರೆತಂತಾಗುತ್ತದೆ ಎಂದ ನವಲಗುಂದ ಈಗಾಗಲೇ ಕಾಶಿ, ವಾರಣಾಸಿ, ಹುಬ್ಬಳ್ಳಿ, ನವದೆಹಲಿ ಎಲ್ಲ ಕಡೆಗೂ ಹೋರಾಟ ಮಾಡಿ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಆದರೂ ಯಾವದೇ ಸ್ಪಂದನೆ ಇಲ್ಲ. ಕೂಡಲೇ ಗದಗ ಹರಪನಹಳ್ಲಿ ರೈಲೈ ಮಾರ್ಗ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸತ್ಯಾಗ್ರಹ ಸ್ಥಳಕ್ಕೆ ಕೇಂದ್ರ ರೈಲ್ವೆ ಸಚಿವರು, ರಾಜ್ಯದ ಮುಖ್ಯಮಂತ್ರಿ ಭೇಟಿ ನೀಡಿ ಲಿಖಿತವಾಗಿ ಭರವಸೆ ಕೊಡುವವರೆಗೂ ಹೋರಾಟ ನಡೆಯುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಯಮನಪ್ಪ ಭಜಂತ್ರಿ, ಕಿಸಾನ್ ಜಾಗೃತಿ ವಿಕಾಸ ಸಂಘ ಜಿಲ್ಲಾಧ್ಯಕ್ಷ ದೃವಕುಮಾರ ಹೂಗಾರ, ರವಿಗೌಡ ಪಾಟೀಲ, ಬಸಪ್ಪ ವಡ್ಡರ ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್