ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಭಾರತೀಯ ಜನತಾ ಪಾರ್ಟಿ ಸವದತ್ತಿ ಮಂಡಲ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಸಕ್ರಿಯ ಕಾರ್ಯಕರ್ತರ ಗುರುತಿಸುವಿಕೆ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಾದ್ಯಂತ ಸದಸ್ಯತ್ವ ಅಭಿಯಾನ ಅತ್ಯಂತ ಅಚ್ಚುಕಟ್ಟಾಗಿ ನೆರವೇರುತ್ತಿದ್ದು, ಕಾರ್ಯಕರ್ತರು ಇನ್ನಷ್ಟು ಶ್ರಮಿಸಿದಲ್ಲಿ ಅಂದಕೊಂಡ ಗುರಿ ತಲುಪಲು ಸಾಧ್ಯ ಎಂದರು.ಬಿಜೆಪಿ ರಾಜ್ಯ ಮಾದ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನೌಡರ ಮಾತನಾಡಿ, ಬಿಜೆಪಿಯಲ್ಲಿ ಸಕ್ರಿಯ ಸದಸ್ಯತ್ವ ಬಹಳಷ್ಟ್ಟು ಪ್ರಾಮುಖ್ಯತೆ ಹೊಂದಿದ್ದು, ಬರುವ ದಿನಗಳಲ್ಲಿ ಪಕ್ಷದಲ್ಲಿನ ಸ್ಥಾನಮಾನಗಳಿಗೆ ಸಕ್ರೀಯ ಸದಸ್ಯತ್ವ ಮಾನ ದಂಡವಾಗಲಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರತ್ನಕ್ಕ ಆನಂದ ಮಾಮನಿ, ಜಗದೀಶ ಕೌಜಗೇರಿ, ಮದ್ಲೂರ ಗ್ರಾಂ.ಪಂ ಅಧ್ಯಕ್ಷ ಪುಂಡಲೀಕ ಉಪ್ಪಾರ, ಸುಭಾಷ ಗಿದಿಗೌಡರ, ಪುರಸಭೆ ಬಸವರಾಜ ಇಂಚಲ, ಮಹಾದೇವ ಮುರಗೋಡ, ಯುವ ಮೋರ್ಚಾ ಅಧ್ಯಕ್ಷ ರಾಜು ಸಾಲಿಮಠ, ಮಾದ್ಯಮ ಪ್ರಮುಖ ಈರಣ್ಣ ವೀರಶೆಟ್ಟಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.