)
ಕನ್ನಡಪ್ರಭ ವಾರ್ತೆ ಸಾವಳಗಿ
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಖೊಂಡಿ ತಾಂಡಾ ನಿವಾಸಿ ಸುನಿಲ್ ಕಿಶನ್ ಪವಾರ್ (36) ಬಂಧಿತ ಆರೋಪಿ. ಚಿಕ್ಕಲಕಿ ಗ್ರಾಮದಲ್ಲಿ ಕಳೆದ ಜೂನ್ 22ರ ರಾತ್ರಿ 11.10 ಗಂಟೆಯಿಂದ ಜೂನ್ 23ರ ಬೆಳಗಿನ ಜಾವ 4 ಗಂಟೆಯ ನಡುವಿನ ಅವಧಿಯಲ್ಲಿ ಮನೆ ಕಳ್ಳತನ ನಡೆದಿತ್ತು. ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಕಳವು ಮಾಡಲಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹4.15 ಲಕ್ಷ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಕಳ್ಳತನ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸಾವಳಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ತನಿಖೆಯ ಮುಂದುವರಿದ ಭಾಗವಾಗಿ ಅಕ್ಟೋಬರ್ 22ರಂದು ಬೆಳಗ್ಗೆ 10 ಗಂಟೆಗೆ ಸುನಿಲ್ ಕಿಶನ್ ಪವಾರ್‌ನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಎಸ್ಪಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ ಎಸ್. ರೋಷನ್ ಜಮೀಲ್, ಸಿಪಿಐ ಎಂ.ಡಿ. ಮಡ್ಡಿ, ಪಿಎಸ್ಐ ಅಪ್ಪಣ್ಣ ಐಗಳಿ, ಮಾರ್ಗದರ್ಶನ ಮೇರೆಗೆ ಸಿಬ್ಬಂದಿಗಳಾದ ಶಿವಾನಂದ ಬಜಂತ್ರಿ, ವಿಶಾಲ ಬಜಂತ್ರಿ, ಲಕ್ಷ್ಮಣ ಕೆ. ಜಂಬಗಿ, ಎ.ಎ. ನಧಾಫ್, ರಾಜು ಪಡತಾರೆ, ಎಸ್. ಎಚ್. ಕೋಟಿ ಸಿದ್ದು ಹನಗಂಡಿ ಸಿಬ್ಬಂದಿ ಸೇರಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.