ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿ, ಸಾವರ್ಕರ್ ವಿಚಾರ ಪ್ರಚಾರ ಸಮಿತಿಯ ಆಶ್ರಯದಲ್ಲಿ ವೀರ ಸಾವರ್ಕರ್ ಕುರಿತು ಪುಸ್ತಕ ಬಿಡುಗಡೆ, ಉಪನ್ಯಾಸ, ಬೆಳದಿಂಗಳೂಟ ಕಾರ್ಯಕ್ರಮ ಏ.೨೦ರಂದು ಸಂಜೆ ೬.೩೦ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ವಿ.ಎನ್ ಭಟ್ಟ ನಡಿಗೆಮನೆ ಹೇಳಿದರು.ಈ ಕುರಿತು ಶನಿವಾರ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಸಾವರ್ಕರ್ ಸಂದೇಶ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿಯ ಅಧ್ಯಕ್ಷ ಗಣಪತಿ ನಡಿಗೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಅಜಿತ ಹನುಮಕ್ಕನವರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಪ್ರಸಾದ ಹೆಗಡೆ, ರಾಮಕೃಷ್ಣ ಹೆಬ್ಬಾರ ಭಾಗವಹಿಸಲಿದ್ದಾರೆ ಎಂದರು.
ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿ ಕಾರ್ಯದರ್ಶಿ ಮಹೇಶ ಗಾಂವ್ಕಾರ, ಪ್ರಸಾದ ಹೆಗಡೆ, ಗಣಪತಿ ಮಾನಿಗದ್ದೆ, ವಿಶ್ವನಾಥ ಹಳೆಮನೆ ಇದ್ದರು.
ವೀರ ಸಾವರ್ಕರ್ ಕುರಿತು ಪುಸ್ತಕ ಬಿಡುಗಡೆ ಬಗ್ಗೆ ಆಮಂತ್ರಣ ಬಿಡುಗಡೆಗೊಳಿಸಲಾಯಿತು.