ಸಕಾಲಕ್ಕೆ ಸಾಲ ಮರುಪಾವತಿ ಸಹಕಾರಿ ಕ್ಷೇತ್ರ ಉಳಿಸಿ

KannadaprabhaNewsNetwork | Published : Sep 25, 2024 1:11 AM

ಸಾರಾಂಶ

ಹಾಲಿ ಸಾಲ ಪಡೆದಿರುವ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದರ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕು, ಜತೆಗೆ ಬೇರೆ ಬೇರೆ ರೈತರಿಗೆ ಸಾಲ ನೀಡಬೇಕಾದರೆ ಪಡೆದಿರುವ ರೈತರು ಸಾಲ ಮರುಪಾವತಿ ಮಾಡಿದರೆ ಮಾತ್ರ ಸಾಧ್ಯ. ತಪ್ಪದೆ ಸಾಲ ಹಿಂತಿರುಗಿಸಿ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ರೈತರು ಸಕಾಲಕ್ಕೆ ಸಾಲ ಮರು ಪಾವತಿ ಮಾಡುವುದರ ಮೂಲಕ ಬ್ಯಾಂಕ್ ಅಭಿವೃದ್ದಿಗೆ ಹಾಗೂ ಬೇರೆ ರೈತರಿಗೆ ಸಾಲ ಸೌಲಭ್ಯ ನೀಡಲು ಅವಕಾಶ ಮಾಡಿಕೊಡಬೇಕೆಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಜಿ.ಎಂ.ಬಾಬಾ ಫಕೃದ್ದಿನ್ ತಿಳಿಸಿದರು.

ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.

ಸಕಾಲಕ್ಕೆ ಸಾಲ ಮರುಪಾವತಿ

ಹಾಲಿ ಸಾಲ ಪಡೆದಿರುವ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದರ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕು, ಜತೆಗೆ ಬೇರೆ ಬೇರೆ ರೈತರಿಗೆ ಸಾಲ ನೀಡಬೇಕಾದರೆ ಪಡೆದಿರುವ ರೈತರು ಸಾಲ ಮರುಪಾವತಿ ಮಾಡಬೇಕೆಂದು ತಿಳಿಸಿದರು. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಈ ವರ್ಷದಲ್ಲಿ ಹೆಚ್ಚು ಲಾಭಪಡೆದಿಲ್ಲ. ಒಟ್ಟಾರೇ 2.90 ಲಕ್ಷ ಲಾಭದಲ್ಲಿ ಸಂಘ ಇದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಪಿ.ಎಸ್.ಸುರೇಂದ್ರರೆಡ್ಡಿ ಮಾತನಾಡಿ, ಈಗಾಗಲೇ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ದಿಗೆ ಶ್ರಮಿಸಲಾಗುತ್ತದೆ, ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಹಾಗೂ ನಮ್ಮ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಇದ್ದು ರೈತರು ಉಳಿತಾಯ ಖಾತೆಯನ್ನು ತೆರೆದು ವ್ಯವಹಾರ ಮಾಡಬಹುದು. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡುತ್ತೇವೆಂದು ತಿಳಿಸಿದರು.

₹10 ಲಕ್ಷ ವರೆಗೆ ಸಾಲ ನೀಡಿ

ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ರೈತರಿಗೆ ಹೆಚ್ಚು ಸಾಲ ನೀಡಬೇಕು ವಿಶೇಷವಾಗಿ 10 ಲಕ್ಷದ ವರೆವಿಗೂ ಸಾಲ ಸೌಲಭ್ಯ ನೀಡಬೇಕು. ಜತೆಗೆ ಡಿಸಿಸಿ ಬ್ಯಾಂಕ್ ನಲ್ಲಿ 2 ಕೋಟಿ ಅವ್ಯವಹಾರ ಆಗಿದ್ದು, ಎಲ್ಲಾ 8 ಸಂಘದ ಅಧ್ಯಕ್ಷರುಗಳು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಈ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಎ.ಅನ್ಸಾರಿ, ಮೇಲ್ವೀಚಾರಕ ಕೆ.ಚಿದಾನಂದ, ಸಂಘದ ಉಪಾಧ್ಯಕ್ಷ ವೆಂಕಟಾಚಲಪತಿ, ನಿರ್ದೇಶಕರಾದ ವೆಂಕಟರವಣಪ್ಪ, ರಾಜಪ್ಪ, ಚಂದ್ರಶೇಖರ್, ಜಾಕೀರ್ ಹುಸೇನ್, ಚಿಕ್ಕಆವುಲಕೊಂಡಪ್ಪ, ಆದಿನಾರಾಯಣಪ್ಪ, ಮುನಿರಾಜಪ್ಪ, ಮಂಜುನಾಥರೆಡ್ಡಿ, ವೆಂಕಟಲಕ್ಷ್ಮಮ್ಮ, ಸುಜಾತ ಸೇರಿದಂತೆ ಹಲವರು ಇದ್ದರು.

Share this article