ಚಾರಿತ್ರಿಕ ಸಂಸ್ಕೃತಿ ಬಿಂಬಿಸುವ ನಾಟಕ ಕಲೆ ಉಳಿಸಿ: ಮಲ್ಲಿಕಾರ್ಜುನ್

KannadaprabhaNewsNetwork | Published : Apr 14, 2025 1:16 AM

ಸಾರಾಂಶ

ನಮ್ಮ ಹಿರಿಯರ ಕಾಲದಲ್ಲಿ ಮನೋರಂಜನೆ, ಗ್ರಾಮದ ಒಗ್ಗಟ್ಟು, ಸೋದರತ್ವ ಭಾವನೆಗೆ ನಾಟಕ ಸಮಾರಂಭಗಳು ಮುಖ್ಯ ಭೂಮಿಕೆ ಆಗಿತ್ತು. ನಾಟಕ ಕಲೆ ಕಲಾವಿದನ ಸೃಷ್ಟಿಸುತ್ತಿತ್ತು. ಪ್ರಸ್ತುತ ಲಕ್ಷಗಟ್ಟಲೆ ನಾಟಕ ಪ್ರದರ್ಶನಕ್ಕೆ ಹಣ ಬೇಕಿದೆ. ರಂಗಕಲೆ ಉಳಿಯಲು, ಹಿರಿಯ ಕಲಾವಿದರ ಪೋಷಿಸಲು ಮಾಶಾಸನದಂತಹ ಸಹಕಾರ ಸರ್ಕಾರ ನೀಡಲು ಮುಂದಾಗಬೇಕಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪೌರಾಣಿಕ ನಾಟಕಗಳು ಗ್ರಾಮೀಣ ಜನತೆ ಬದುಕಿನ ದಿಕ್ಕನ್ನು ಬದಲಾಯಿಸಿ ಶಾಂತಿ, ನೆಮ್ಮದಿ ನೀಡುತ್ತವೆ. ಸಾಂಸ್ಕೃತಿಕ ನೆಲಗಟ್ಟನ್ನು ಜೋಪಾನ ಮಾಡುವ ನಾಟಕ ಕಲೆಯನ್ನು ಉಳಿಸಬೇಕಿದೆ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕಿಕ್ಕೇರಮ್ಮ ದೇಗುಲ ಆವರಣದಲ್ಲಿ ನಡೆದ ಕುರುಕ್ಷೇತ್ರ ನಾಟಕ ಸಮಾರಂಭದಲ್ಲಿ ಮಾತನಾಡಿ, ಕಲೆ, ಸಂಸ್ಕೃತಿ ಉಳಿಸುವುದು ಎಲ್ಲರ ಕರ್ತವ್ಯ. ಮಕ್ಕಳ ಮನದಲ್ಲಿ ಟಿವಿ, ಮೊಬೈಲ್ ಸಂಸ್ಕೃತಿ ಬಿತ್ತುವ ಬದಲು ನಾಟಕ ಕಲೆಯನ್ನು ಬಿತ್ತಿದ್ದರೆ ನಮ್ಮ ಸಂಸ್ಕೃತಿ ಬೇರುಗಟ್ಟಿಯಾಗಲಿದೆ ಎಂದರು.

ನಮ್ಮ ಹಿರಿಯರ ಕಾಲದಲ್ಲಿ ಮನೋರಂಜನೆ, ಗ್ರಾಮದ ಒಗ್ಗಟ್ಟು, ಸೋದರತ್ವ ಭಾವನೆಗೆ ನಾಟಕ ಸಮಾರಂಭಗಳು ಮುಖ್ಯ ಭೂಮಿಕೆ ಆಗಿತ್ತು. ನಾಟಕ ಕಲೆ ಕಲಾವಿದನ ಸೃಷ್ಟಿಸುತ್ತಿತ್ತು. ಪ್ರಸ್ತುತ ಲಕ್ಷಗಟ್ಟಲೆ ನಾಟಕ ಪ್ರದರ್ಶನಕ್ಕೆ ಹಣ ಬೇಕಿದೆ. ರಂಗಕಲೆ ಉಳಿಯಲು, ಹಿರಿಯ ಕಲಾವಿದರ ಪೋಷಿಸಲು ಮಾಶಾಸನದಂತಹ ಸಹಕಾರ ಸರ್ಕಾರ ನೀಡಲು ಮುಂದಾಗಬೇಕಿದೆ ಎಂದರು.

ಪ್ರತಿ ಗ್ರಾಮಗಳಲ್ಲಿ ರಂಗಮಂದಿರ ನಿರ್ಮಾಣ, ಮಕ್ಕಳು, ಯುವಕರಿಗೆರಂಗಕಲೆತರಬೇತಿ ನೀಡುವಲ್ಲಿ ಶಿಬಿರ, ಶಾಲಾ ಹಂತದಲ್ಲಿ ಮಕ್ಕಳಿಗೆ ನಾಟಕ ಕಲೆ ಅಭಿರುಚಿ ಮೂಡಿಸಲು ಯತ್ನ ನಡೆಯಬೇಕಿದೆ ಎಂದು ಆಶಿಸಿದರು.

ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷಎಲ್.ಎಸ್. ಧರ್ಮಪ್ಪ, ಹಿರಿಯ ಕಲಾವಿದ ರಾಜಣ್ಣ, ಚಟ್ಟೇನಹಳ್ಳಿ ನಾಗರಾಜು, ಜಿಪಂ ಮಾಜಿ ಸದಸ್ಯ ಮಂಜೇಗೌಡ, ಆನೆಗೊಳ ಕೆ.ಆರ್.ವೆಂಕಟೇಶ್, ಪಟೇಲ್ ಸಣ್ಣೇಗೌಡ, ನಿಂಗರಾಜು, ಚಂದ್ರೇಗೌಡ, ತಾಪಂ ಮಾಜಿ ಸದಸ್ಯ ಶ್ಯಾಮಣ್ಣ, ತಾಲೂಕು ಸರ್ಕಾರಿ ನೌಕರ ಸಂಘದಅಧ್ಯಕ್ಷ ಆನಂದಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ ಇದ್ದರು.

ಟೊಯೋಟ ಕೌಶಲ್ಯ ಕಾರ್ಯಕ್ರಮ

ಮಂಡ್ಯ:

ನಗರದ ಅರ್ಕೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಿರ್ಲೋಸ್ಕರ್ ಟೊಯೋಟ ಹಾಗೂ ಅನನ್ಯ ಆರ್ಟ್ಸ್ ಸಂಸ್ಥೆ ವತಿಯಿಂದ ಟೊಯೋಟ ಕೌಶಲ್ಯ ಕಾರ್ಯಕ್ರಮ ನಡೆಯಿತು.

ಟೊಯೋಟ ಕಂಪನಿಯ ಅಕ್ಷತಾ ಮಾತನಾಡಿ, ಕಂಪನಿಯಲ್ಲಿ ಹಲವು ಹುದ್ದೆಗಳು ಖಾಲಿ ಉಳಿಯುತ್ತಿದ್ದು, ಉದ್ಯೋಗ ಮಾಡುವವರು ಸಾಕಷ್ಟು ಅವಕಾಶಗಳಿವೆ. ಟೊಯೋಟ ಮತ್ತು ಕಿರ್ಲೋಸ್ಕರ್ ಕಂಪನಿ ಇಂಡಿಯಾ ಮತ್ತು ಜಪಾನ್ ನೊಂದಿಗೆ ವಿಲೀನವಾಗಿದ್ದು ಮಾರುಕಟ್ಟೆಯಲ್ಲಿ ಬೃಹತ್ ಮಟ್ಟದಲ್ಲಿ ಬೆಳೆದಿದೆ. ಮಹಿಳೆಯರಿಗೆ ಸಾಕಷ್ಟು ಉದ್ಯೋಗ ಅವಕಾಶ ನೀಡುತ್ತಿದೆ ಎಂದರು.

ಟೊಯೋಟ ಕಂಪನಿಯಲ್ಲಿ 16,000ಕ್ಕೂ ಹೆಚ್ಚು ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿರುವವರಿಗೆ ಒಂದು ಒಳ್ಳೆಯ ಅವಕಾಶವಾಗಿದೆ ಎಂದರು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೂರು ತಿಂಗಳು ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ವಸತಿ ಊಟ ಮತ್ತು ಸಂಬಳವೂ ನೀಡಲಿದ್ದೇವೆ. ನಮ್ಮ ಕಂಪನಿ ಉದ್ದೇಶ ಕಲಿಕೆ ಜೊತೆಗೆ ಗಳಿಕೆ ಮಾಡುವುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹನುಮಂತಯ್ಯ, ಮೃತ್ಯುಂಜಯ, ಗಾಮನಹಳ್ಳಿ ಸ್ವಾಮಿ ,ಅನನ್ಯ ಹಾರ್ಟ್ ಸಂಸ್ಥೆಯ ಬಿ ಎಸ್ ಅನುಪಮ ಟೊಯೋಟ ಕಂಪನಿ ಅಮರ್ ಭಾಗವಹಿಸಿದ್ದರು.

Share this article