ರಕ್ತದಾನದ ಮೂಲಕ ಜೀವ ಉಳಿಸುವ ಕಾರ್ಯ ಮಾದರಿ: ಕೆ.ಟಿ.ಹನುಮಂತು

KannadaprabhaNewsNetwork |  
Published : Oct 03, 2026, 01:45 AM IST
2ಕೆಎಂಎನ್ ಡಿ13 | Kannada Prabha

ಸಾರಾಂಶ

ನಗರದ ಹೊಸಹಳ್ಳಿ ದ್ವಾರಕನಗರದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲಾ ಶಾಖೆ, ದ್ವಾರಕ ಅಲಯನ್ಸ್ ಸಂಸ್ಥೆ, ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಕನ್ನಡಸೇನೆ- ಕರ್ನಾಟಕ ಜಿಲ್ಲಾ ಘಟಕ, ರಕ್ತನಿಧಿ ಕೇಂದ್ರ ಮಿಮ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರೀಜಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನದ ಮೂಲಕ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರೀಜಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಇಬ್ಬರು ಮಹಾನ್ ನಾಯಕರ ಜನ್ಮದಿನದಂದು ರಕ್ತದಾನ ಮಾಡುವ ಮೂಲಕ ಐದಾರು ಜೀವ ಉಳಿಸುವ ಮಾನವೀಯತೆ ಕಾರ್ಯ ಮಾದರಿಯಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್‌ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ನಗರದ ಹೊಸಹಳ್ಳಿ ದ್ವಾರಕನಗರದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲಾ ಶಾಖೆ, ದ್ವಾರಕ ಅಲಯನ್ಸ್ ಸಂಸ್ಥೆ, ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಕನ್ನಡಸೇನೆ- ಕರ್ನಾಟಕ ಜಿಲ್ಲಾ ಘಟಕ, ರಕ್ತನಿಧಿ ಕೇಂದ್ರ ಮಿಮ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರೀಜಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನದ ಮೂಲಕ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರೀಜಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಶ್ಲಾಘಿಸಿದರು.

ಸತ್ಯ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಜಗತ್ತಿಗೆ ಮಾದರಿ ಸ್ವಾತಂತ್ರ್ಯ ಭಾರತ ದೇಶವನ್ನಾಗಿಸಿದ ಕೀರ್ತಿ ಗಾಂಧೀಜಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಲಾಲ್‌ ಬಹದ್ದೂರ್ ಶಾಸ್ತ್ರೀಜಿ ಅವರ ಆಡಳಿತ ಇಂದಿನ ರಾಜಕಾರಣಿಗಳಿಗೆ ಆದರ್ಶ ಪ್ರಾಯವಾಗಬೇಕಿದೆ. ದೇಶ ಪ್ರಗತಿ, ಸೈನಿಕ ಮತ್ತು ರೈತರ ಕೃಷಿ ಬದುಕಿಗೆ ಹೊಸ ಅಧ್ಯಾಯ ಬರೆಯುವಲ್ಲಿ ಶಾಸ್ತ್ರೀಜಿ ಯಶ ಕಂಡಿದ್ದಾರೆ ಎಂದು ತಿಳಿಸಿದರು.

ದ್ವಾರಕ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಪವಿತ್ರ ನಾಗರಾಜ್ ಮಾತನಾಡಿ, ರಕ್ತದಾನ ಮಾಡಿ ಜೀವ ಉಳಿಸುವ ನಿಟ್ಟಿನಲ್ಲಿ ದ್ವಾರಕ ಅಲಯನ್ಸ್ ಸಂಸ್ಥೆ ಶ್ರಮಿಸುತ್ತಿದೆ. ಎಲ್ಲರ ಸಹಕಾರದಿಂದ ಮಾನವೀಯ ಗುಣ ಹೆಚ್ಚಿಸಿ ಹೊಸ ಹೊಸ ರಕ್ತದಾನಿಗಳನ್ನು ಬೆಂಬಲಿಸೋಣ ಎಂದು ತಿಳಿಸಿದರು.

ಈ ವೇಳೆ ಸ್ವಯಂ ಪ್ರೇರಿತ ರಕ್ತದಾನಿಗಳು ನೀಡಿದ ಯೂನಿಟ್ ರಕ್ತವನ್ನು ಮಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿ ಸಂಗ್ರಹಿಸಿಕೊಂಡರು. ಮಾಜಿ ಜಿಲ್ಲಾ ರಾಜ್ಯಪಾಲ ಮಾದೇಗೌಡ, ರಕ್ತದಾನಿ ಎಂ.ಲಂಕೇಶ್ ಮಂಗಲ, ಶುಶ್ರೂಷಕ ಮೊಹಮದ್ ರಫೀಕ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಆರ್.ಶಶಿಧರ ಈಚೆಗೆರೆ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಡಾ.ಎಸ್.ನಾರಾಯಣ್, ಸಮಾಜ ಸೇವಕರಾದ ಎಚ್.ಆರ್.ಅಶೋಕ್, ವಿನಯ್ ಕುಮಾರ್, 1ನೇ ಜಿಲ್ಲಾ ಉಪ ರಾಜ್ಯಪಾಲ ಚಂದ್ರಶೇಖರ್, 2ನೇ ಉಪರಾಜ್ಯಪಾಲ ಎಂ. ಎನ್. ಶಿವಣ್ಣ, ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ, ಎಚ್.ಎಂ.ಬಸವರಾಜು ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವೀಲಿ 100 ಕೋಟಿ ವೆಚ್ಚದಲ್ಲಿ ಗಾಂಧಿ ಸ್ಮಾರಕ: ಡಿಕೆ
ಇಂದು ಶೋಭಾಯಾತ್ರೆ: ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನರ ನಿರೀಕ್ಷೆ