ಕನ್ನಡಪ್ರಭವಾರ್ತೆ ಚಳ್ಳಕೆರೆ
ಆದರೆ, ನಗರಸಭೆಯ ಜೆಡಿಎಸ್ ಮತ್ತು ಬಿಜೆಪಿ ಚುನಾಯಿತ ಸದಸ್ಯರು, ಪ್ರಸ್ತುತ ನಗರಸಭಾ ಸದಸ್ಯೆ ಎಂ. ಸಾವಿತ್ರಮ್ಮನವರಿಗೆ ಚುನಾವಣಾ ಉದ್ದೇಶಕ್ಕಾಗಿ ಬಿಸಿಎಂ(ಬಿ) ಪ್ರಮಾಣಪತ್ರವನ್ನು ನೀಡಬಾರದೆಂದು ತಹಸೀಲ್ದಾರ್‌ಗೆ ಲಿಖಿತ ಮೂಲಕ ಮನವಿ ಮಾಡಿದೆ.
ಜೆಡಿಎಸ್ ತಾಲೂಕು ಅಧ್ಯಕ್ಷ ಪಿ. ತಿಪ್ಪೇಸ್ವಾಮಿ ಮಾಹಿತಿ ನೀಡಿ, ರಾಜ್ಯ ಸರ್ಕಾರ ಬಿಸಿಎಂ(ಬಿ) ಮೀಸಲಾತಿಯನ್ನು ಕೆನೆಪದರ ಯೋಜನೆಯಡಿ ವಿತರಿಸಲು ಹಲವು ಷರತ್ತುಗಳನ್ನು ವಿಧಿಸಿ ಆದೇಶಿಸಿದೆ. ಆದರೆ, ಸದಸ್ಯರಾದ ಎಂ. ಸಾವಿತ್ರಮ್ಮ ಈ ಯೋಜನೆ ವ್ಯಾಪ್ತಿಗೆ ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಇವರಿಗೆ ಬಿಸಿಎಂ(ಬಿ) ಮೀಸಲಾತಿ ನೀಡಿದರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.ತಹಶೀಲ್ಧಾರ್ ಪರವಾಗಿ ಮನವಿ ಸ್ವೀಕರಿಸಿದ ಶಿರಸ್ತೇದಾರ್ ಗಿರೀಶ್, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಬಳಿ ಪರಿಶೀಲನೆಗೆ ಕಳಿಸಿಕೊಡುವ ಭರವಸೆ ನೀಡಿದರು.
ಜೆಡಿಎಸ್ ನಗರಸಭಾ ಸದಸ್ಯ ಸಿ. ಶ್ರೀನಿವಾಸ್, ಹೊಯ್ಸಳಗೋವಿಂದ, ಸಿ.ಎಂ. ವಿಶುಕುಮಾರ್, ವಿ.ವೈ. ಪ್ರಮೋದ್, ಡಿ. ನಿರ್ಮಲ, ಕವಿತಾನಾಯಕಿ, ನಾಗಮಣಿ, ತಿಪ್ಪಮ್ಮ, ಬಿಜೆಪಿ ಸದಸ್ಯ ಟಿ. ಶಿವಕುಮಾರ್, ಪಾಲಮ್ಮ, ಸಾಕಮ್ಮ, ಬಿಜೆಪಿ ಮುಖಂಡ ಟಿ. ಮಂಜುನಾಥ, ಜೆಡಿಎಸ್ ಮುಖಂಡ ಎಸ್. ಶ್ರೀಧರಚಾರ್ ಮುಂತಾದವರು ಮನವಿ ಸಲ್ಲಿಸಿದರು.