ಹೆಣ್ಣುಮಕ್ಕಳಿಗೆ ಶಾಲೆ ತೆರೆದ ಮೊದಲ ಶಿಕ್ಷಕಿ ಸಾವಿತ್ರಿ ಬಾಫುಲೆ

KannadaprabhaNewsNetwork |  
Published : May 14, 2026, 01:00 AM IST
01 | Kannada Prabha

ಸಾರಾಂಶ

ದೇವನಹಳ್ಳಿ: ಸಾವಿತ್ರಿ ಬಾಫುಲೆಯವರು ಹೆಣ್ಣುಮಕ್ಕಳಿಗೆ ಶೂದ್ರರಿಗೆ, ಅತಿಶೂದ್ರರಿಗೆ ಕೆಳವರ್ಗದರಿಗೆ ಶಾಲೆ ತೆರೆದು ವಿದ್ಯಾಭ್ಯಾಸ ಕಲಿಸಿದಂತಹ ಮಹಾನ್ ವ್ಯಕ್ತಿ, ಅಂತಹ ಮಹನೀಯರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗು ಪ್ರಗತಿಪರ ಚಿಂತಕ ಡಾ.ವಡ್ಡಗೆರೆ ನಾಗರಾಜ್ ತಿಳಿಸಿದರು

ದೇವನಹಳ್ಳಿ: ಸಾವಿತ್ರಿ ಬಾಫುಲೆಯವರು ಹೆಣ್ಣುಮಕ್ಕಳಿಗೆ ಶೂದ್ರರಿಗೆ, ಅತಿಶೂದ್ರರಿಗೆ ಕೆಳವರ್ಗದರಿಗೆ ಶಾಲೆ ತೆರೆದು ವಿದ್ಯಾಭ್ಯಾಸ ಕಲಿಸಿದಂತಹ ಮಹಾನ್ ವ್ಯಕ್ತಿ, ಅಂತಹ ಮಹನೀಯರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗು ಪ್ರಗತಿಪರ ಚಿಂತಕ ಡಾ.ವಡ್ಡಗೆರೆ ನಾಗರಾಜ್ ತಿಳಿಸಿದರು.

ಪಟ್ಟಣದ ಮಾತೆ ಸಾವಿತ್ರಿ ಬಾಫುಲೆ ಎಜುಕೇಷನ್ ಫೌಂಡೇಷನ್‌ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯುತ್ಸವ, ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೆ ಸಾವಿತ್ರಿ ಬಾಫುಲೆ ಹೆಣ್ಣು ಮಕ್ಕಳು ಶಿಕ್ಷಣಕ್ಕಾಗಿ ಹೋರಾಡಿದರು ಎಂದರು.

ನ್ಯಾಯಾಧೀಶರಾದ ಸಂಘಮಿತ್ರ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿ, ಚಿಕ್ಕಂದಿನಿಂದಲೂ ಅಸ್ಪೃಶ್ಯತೆ, ತಾರತಮ್ಯಗಳ ನಡುವೆ ಹೋರಾಡಿ ಶಿಕ್ಷಣದಿಂದಲೇ ಮಹಾಜ್ಞಾನಿಯಾಗಿ ಇಡೀ ದೇಶಕ್ಕೆ ಬೆಳಕು ನೀಡಿದ್ದಾರೆ. ಎಲ್ಲರೂ ಅಂಬೇಡ್ಕರ್‌ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಡಿ ಹಕ್ಕುಗಳನ್ನು ಪಡೆಯಬೇಕು ಎಂದರು.

ಮಾತೆ ಸಾವಿತ್ರಿಬಾಯಿ ಫುಲೆ ಎಜುಕೇಶನಲ್ ಫೌಂಡೇಷನ್‌ ಅಧ್ಯಕ್ಷ ಕಾರಹಳ್ಳಿ ಕೇಶವ ಮಾತನಾಡಿ, ಮಕ್ಕಳು ಶಿಕ್ಷಣದಲ್ಲಿ ಗಣನೀಯ ಸಾಧನೆ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಇದೆ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಉಪನ್ಯಾಸಕ ಅಂಬರೀಶ್, ಹೈಕೋರ್ಟ್ ವಕೀಲರಾದ ಹರಿರಾಮ್, ಆರೋಗ್ಯ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಸಂಪಂಗಿರಾಮಯ್ಯ, ಜಿಕೆವಿಕೆ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ, ಸಹಾಯಕ ಪ್ರಾಧ್ಯಾಪಕ ಡಾ.ಅಂಜನ್‌ಕುಮಾರ್, ಅಂತಾರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಆಟಗಾರ ಡಿ.ಎಂ.ವೇಣುಗೋಪಾಲ್, ಅಣ್ಣೇಶ್ವರ ಗ್ರಾಪಂ ಮಾಜಿ ಉಪಾಧ್ಯಕ್ಷ ಮುನಿರಾಜಪ್ಪ ದಿಲ್‌ರಾಜ್, ವಕೀಲರಾದ ಗಂಗಾಧರ್, ಮೂರ್ತಿ ಉಪಸ್ಥಿತರಿದ್ದರು.

12 ದೇವನಹಳ್ಳಿ ಚಿತ್ರಸುದ್ದಿ: 01

ದೇವನಹಳ್ಳಿಯಲ್ಲಿ ಮಾತೆ ಸಾವಿತ್ರಿ ಬಾಫುಲೆ ಎಜುಕೇಶನ್ ಫೌಂಡೇಷನ್ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕ್‌ರ್ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಇಲ್ಲದೇ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ರೈತರ ಆಗ್ರಹ
ನೀಟ್ ಪರೀಕ್ಷೆ ರದ್ದುಪಡಿಸಲು ಆಗ್ರಹ, ಎಸ್‌ಎಫ್‌ಐ ಪ್ರತಿಭಟನೆ