ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಕ್ಷರದವ್ವ ಸಾವಿತ್ರಬಾಯಿ ಫುಲೆ ಅವರ ಜನ್ಮದಿನದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ೧೯ನೇ ಶತಮಾನದ ಪ್ರಮುಖ ಸಮಾಜ ಸುಧಾರಕರ ಸಾಲಿನಲ್ಲಿ ನಿಲ್ಲುವ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ, ಅವರು ಶಿಕ್ಷಕಿಯಾಗಿ, ಸಮಾಜ ಸುಧಾರಕಿಯಾಗಿ, ಕವಯತ್ರಿಯಾಗಿ, ಶಿಕ್ಷಣತಜ್ಞರಾಗಿ ಜನಮಾನಸದಲ್ಲಿ ಗುರುತಿಸಿಕೊಂಡವರು ಸಾವಿತ್ರಿಬಾಯಿ ಫುಲೆ ಎಂದರು.
ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಗೋವಿಂದ ಕೌಲಗಿ ಮಾತನಾಡಿ, ಭಾರತದ ಮೊದಲು ಮಹಿಳಾ ಶಿಕ್ಷಕಿಯಾಗಿರುವ ಜ್ಯೋತಿ ಭಾ ಫುಲೆ ಪತ್ನಿ ಸಾವಿತ್ರಿಬಾಯಿ ಫುಲೆ ಮಹಿಳಾ ಸಮುದಾಯಕ್ಕೆ ಸ್ಫೂರ್ತಿದಾಯಕ, ಸಂಕಷ್ಟದ ದಿನಮಾನಗಳಲ್ಲಿ ಸಾವಿತ್ರಿಬಾಯಿ ಶೋಷಿತ ಸಮುದಾಯದ ಮಹಿಳೆಯರಿಗೆ ಅಕ್ಷರ ಕಲಿಸಿ ಅವರನ್ನು ಮೇಲೆತ್ತುವಲ್ಲಿ ಶ್ರಮಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.ಈ ವೇಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಮಾರುತಿ ರಂಗಣ್ಣವರ, ಅರುಣ ನರಗುಂದ, ಶಂಕರ ಪೂಜಾರಿ, ರಂಗನಾಥ ಚಿಪ್ಪಲಕಟ್ಟಿ, ಲಾಲಸಾಬ ನಧಾಪ, ಉಮೇಶ ಕಾಗಿ, ಪತ್ರಕರ್ತ ಮಹೇಶ ಹುಗ್ಗಿ, ಸಮಾಜಸೇವಕ ಕೃಷ್ಣಾ ಭಜಂತ್ರಿ, ದುರಗಪ್ಪ ಭಜಂತ್ರಿ, ಹಣಮಂತ ಬೆಣಗಿ ಮತ್ತು ಇನ್ನಿತರರು ಇದ್ದರು.