ಮುಂಡರಗಿ: ತಾಲೂಕಿನಲ್ಲಿ ಎಸ್‌ಸಿ ಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮಾತ್ರ ಬಳಕೆ ಮಾಡಬೇಕು, ಬೇರೆ ಜನಾಂಗಕ್ಕೆ ಮಾಡಿದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೋರಗಾಂವಿ ಎಚ್ಚರಿಕೆ ನೀಡಿದರು.
ಅವರು ಶುಕ್ರವಾರ ಸಂಜೆ ಪಟ್ಟಣದ ತಾಪಂ ಸಮರ್ಥ ಸೌಧ ಸಭಾಂಗಣದಲ್ಲಿ ಜರುಗಿದ ಎಸ್‌ಸಿ ಎಸ್‌ಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ತಾಪಂ ಇಒ ವಿಶ್ವನಾಥ ಹೊಸಮನಿ ಸಭೆಯ ಅಧ್ಯಕ್ಷತೆ ವಹಿಸಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ವಿಚಾರಿಸಿ, ಕೃಷಿ ಭಾಗ್ಯ ಹಾಗೂ ಸಸ್ಯ ಸಂರಕ್ಷಣೆ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಯಾವ ಯಾವ ಅನುಕೂಲತೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಕೃಷಿ ಅಧಿಕಾರಿ ಉತ್ತರಿಸಿ ಸಸ್ಯ ಸಂರಕ್ಷಣೆಯಲ್ಲಿ ಔಷಧಿ ವಿತರಣೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಇಒ ವಿಶ್ವನಾಥ ಹೊಸಮನಿ ಮಾತನಾಡಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಸೇರಿದಂತೆ ಫಲಾನುಭವಿಗಳಿಗೆ ನೀಡುವಾಗ ಎರಡು ಇಲಾಖೆಯವರು ಎನ್ಓಸಿ ತೆಗೆದುಕೊಂಡು ಫಲಾನುಭಾವಿಗಳಿಗೆ ಸರ್ಕಾರಿ ಸವಲತ್ತು ನೀಡಬೇಕು ಎಂದರು.ಶಿಕ್ಷಣಾಧಿಕಾರಿ ಇಲಾಖೆಯ ಪ್ರಗತಿ ವರದಿ ಓದಿದರು. ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಇಲಾಖೆಯವರು ಎಸ್‌ಸಿಪಿ ಮಕ್ಕಳ ಸಂಖ್ಯೆ ನೀಡುವಾಗ ವ್ಯತ್ಯಾಸವಿದ್ದು, ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಮಕ್ಕಳ ಸಂಖ್ಯೆ ಸರಿಯಾದ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣಾ ಸೋರಗಾಂವಿ ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿ ತಮ್ಮ ಪ್ರಗತಿ ವರದಿ ಮಾಹಿತಿ ನೀಡಿ,ಅರಣ್ಯ ಇಲಾಖೆಯಿಂದ 2014-15ರಲ್ಲಿ ಸಿಲಿಂಡರ್ ವಿತರಣೆ ಆಗಿದ್ದು, ಇದೀಗ 2023-24 ಹಾಗೂ 2024-25 ರಲ್ಲಿ ಅವುಗಳನ್ನು ರಿಪೀಲಿಂಗ್ ಮಾಡಲು ವರ್ಷದಲ್ಲಿ ಎರಡು ಬಾರಿ ಆರು ತಿಂಗಳಿಗೆ ಒಂದರಂತೆ ಪ್ರತಿ ಸಿಲಿಂಡರ್ ಗೆ ₹805ಗಳನ್ನು ನೀಡಲು ಪ್ರಾರಂಭಿಸಿದ್ದು, 73 ಎಸ್ಸಿ,40 ಎಸ್ಟಿ ಫಲನುಭವಿಗಳಿಗೆ ಈ ಹಣ ನೀಡಲಾಗಿದೆ ಎಂದು ತಿಳಿಸಿದರು.ತಾಪಂ ಇಒ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಮಾಡಿದ ಕಾಮಗಾರಿ ನಾವು ನೋಡಿದ್ದು, ಕಕ್ಕೂರ ತಾಂಡಾದ ಫಲನುಭವಿಗಳಿಗೆ 306 ಮನೆಗಳಿಗೆ ಜೆಜಿಎಂ ಯೋಜನೆಯಡಿಯಲ್ಲಿ ಪೈಫಲೈನ್ ವ್ಯವಸ್ಥೆ ಮಾಡಿದ್ದು, ಇನ್ನೂ 150 ಮನೆಗಳಿಗೆ ನೀರಿನ ವ್ಯವಸ್ಥೆ ಇಲ್ಲ. ಅದನ್ನು ಸರಿ ಮಾಡಿಸುವಂತೆ ತಿಳಿಸಿ, ಕಕ್ಕೂರ ತಾಂಡಾದ ಪಿಎಂ ಎಜಿವೈ ಕಾಮಗಾರಿಗಳು ಕೂಡ ಮುಂದಿನ ಎಂಟು ದಿನಗಳಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.
ಮೀನುಗಾರಿಕೆ ಇಲಾಖೆ ಸಂಬಂಧಿಸಿದಂತೆ ಎಸ್‌ಸಿ ಎಸ್‌ಪಿ, ಟಿಎಸ್‌ಪಿ ಯೋಜನೆಗೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಲಾಗಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಎಸ್‌ಸಿ ಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿಯಲ್ಲಿ ಬಿಡುಗಡೆಗೊಂಡ ಅನುದಾನ ನಿಗದಿತ ಸಮಯದಲ್ಲಿ ಖರ್ಚು ಮಾಡದೇ ಇರುವುದಕ್ಕೆ ತಾಪಂ ಇಒ ಕೂಡಲೇ ಸಂಬಂಧಿಸಿದ ಅನುದಾನ ನಿಗದಿತ ಅವಧಿಯೊಳಗೆ ಖರ್ಚು ಮಾಡುವಂತೆ ಸೂಚಿಸಿದರು.
ಪಿಡಬ್ಲೂಡಿ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದ ಕಾಮಗಾರಿ ಜರುಗುತ್ತಿದ್ದು, ಆ ಕಾಮಗಾರಿ ಸರಿಯಾಗಿ ಕ್ಯೂರಿಂಗ್ ಮಾಡುತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ವಿಚಾರಿದಾಗ ಅದಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಉತ್ತರಿಸಿ, ಕೆಳಗಿನ ಫ್ಲೋರ್ ಕ್ಯೂರಿಂಗ್ ಆಗಿದೆ. ಹಾಗಾಗಿ ಅದಕ್ಕೆ ವೈಟ್ ಪೇಂಟ್ ಮಾಡಲಾಗುತ್ತಿದೆ ಎಂದು ತಿಳಿಸಿದರು.ಅನುಮತಿ ಪಡೆಯದೆ ಸಭೆಗೆ ಗೈರಾದ ಅಧಿಕಾರಿಗಳಿಗೆ ಸೋಕಾಸ್ ನೊಟೀಸ್ ನೀಡುವಂತೆ ಸೂಚಿಸಿದರು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪ್ರಗತಿ ವರದಿ ನೀಡುವಾಗ ಪಲಾನುಭವಿಗಳ ಯಾದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೋರಗಾಂವಿ ಸಭೆಗೆ ತಿಳಿಸಿದರು.