ಸ.ಮಾ.ಹಿ.ಪ್ರಾ.ಶಾಲೆ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಶಾಲಾ ಕಟ್ಟಡ ನಿರ್ಮಾಣ ಜನಮನದಲ್ಲಿ ಉಳಿಯುವಂತಹ ಕಾರ್ಯವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು. ಶನಿವಾರ, ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಳೇ ವಿದ್ಯಾರ್ಥಿಗಳ ಸಂಘದಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರೀಕೆರೆಯವರೇ ಆದ ಬೆಂಗಳೂರು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಡಾ.ಎಸ್.ರಾಜು ಅವರು ಶಾಲೆ ನಿರ್ಮಾಣಕ್ಕೆ ಹೆಚ್ಚಿನ ಧನಸಹಾಯ ನೀಡುತ್ತಿರುವುದು ಸಂತೋಷದ ವಿಚಾರ. ಪಿಡಬ್ಯುಡಿಗೆ ಪತ್ರ ಬರೆಯಬೇಕು, ಆಂಗ್ಲ ಮಾದ್ಯಮದ ಅನುಮತಿ ಕೊಡಿಸಲು ಖಂಡಿತ ಸರ್ಕಾರದಲ್ಲಿ ನಾನು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.ತರೀಕೆರೆ ಕ್ಷೇತ್ರದಲ್ಲಿ 18 ಶಾಲೆಗಳಿಗೆ ನೂರು ವರ್ಷ ತುಂಬಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಲು, ಮೊಟ್ಟೆ, ಶೂ, ಸೈಕಲ್ಲು ಇತ್ಯಾದಿ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಲು ನಾನು ಸಹಕರಿಸುತ್ತೇನೆ. ಆದರೆ ಜಾಗದ್ದೇ ಒಂದು ದೊಡ್ಡ ಸಮಸ್ಯೆ ಎಂದರು.
ತರೀಕೆರೆಯಲ್ಲಿ ಎಸ್.ಎಚ್.ಯು.ಪಿ ಇಂದ ₹20 ಕೋಟಿ, ಸಿಎಂ ವಿಶೇಷ ಅನುದಾನ ₹4 ಕೋಟಿ, ವಿಶೇಷ ಅನುದಾನ ₹10 ಕೋಟಿ, ಡಲ್ಟ್.ಗಾಗಿ ₹5 ಕೋಟಿ ಮತ್ತು ಉಳಿದ ರಸ್ತೆ ಅಭಿವೃದ್ಧಿಗಾಗಿ ರಾ.ಹೆ.ಇಲಾಖೆಯಿಂದ ₹5 ವರೆ ಕೋಟಿ ವೆಚ್ಚದಲ್ಲಿ ಪಟ್ಟಣದ ಬಿ.ಎಚ್.ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ₹35 ಕೋಟಿಯಲ್ಲಿ ಯುಜಿಡಿ ಯೋಜನೆ, ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಿಗೆ ಪೈಪ್ ಗಳನ್ನು ಜೋಡಿಸಿ, ನಲ್ಲಿಗಳಿಗೆ ಎಲ್ಲರೂ ನಲ್ಲಿಗಳಿಗೆ ಮೀಟರ್.ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ, ನೂತನ ಶಾಲಾ ಕಟ್ಟಡ ನಿರ್ಮಾಣ ಕಾರ್ಯದ ದಾನಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಡಾ.ಎಸ್.ರಾಜು ಮಾತನಾಡಿ, ಇಂದು ನನ್ನ ಎಲ್ಲಾ ಸ್ನೇಹಿತರನ್ನು ನೋಡುವ ಭಾಗ್ಯ ನನ್ನದಾಗಿದೆ ಇದು ಜೀವನದ ಅತ್ಯಂತ ಸಂತೋಷದ ದಿನ. ಶಾಲೆಯ ದಿನಗಳಲ್ಲಿ ಸ್ನೇಹಿತರೆಲ್ಲಾ ಸೇರಿ ಗಣಪತಿ ಪೂಜೆ ಮಾಡುತ್ತಿದ್ದ ದ್ದನ್ನು ಸ್ಮರಿಸಿದ ಅವರು, ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಅಭಿನಂದನೆ ಸಲ್ಲಿಸಿದರು.ಶಾಲೆ ಉನ್ನತ ವ್ಯವಸ್ಥೆಗಿರಬೇಕು. ಮಕ್ಕಳಿಗೆ ಉತ್ತಮ ವಾತಾವರಣ ಅಗತ್ಯ. ತರೀಕೆರೆ ಪಟ್ಟಣದಲ್ಲಿ ಬಡವರಿಗಾಗಿ ಒಂದು ಸಮುದಾಯ ಭವನ ಕಟ್ಟಿಸೋಣ, ತರೀಕೆರೆ ವಿಶೇಷವಾಗಿ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದರು.
ಪುರಸಭಾ ಮಾಜಿ ಅಧ್ಯಕ್ಷ ಡಿ.ವಿ.ಪದ್ಮರಾಜು ಮಾತನಾಡಿ ನೂತನ ಶಾಲಾ ಕಟ್ಟಡ ನಿರ್ಮಿಸಲು ದಾನಿಗಳಾದ ಡಾ.ಎಸ್.ರಾಜು ಹೆಚ್ಚಿನ ಅರ್ಥಿಕ ನೆರವು ನೀಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಹಳೆಯ ಮತ್ತು ಹೊಸ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತೋಷವಾಗಿದೆ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ ಶಾಸಕ ಶ್ರೀನಿವಾಸ್ ಅವರು ಪಟ್ಟಣದ ಅಭಿವೃದ್ಧಿಗೆ ₹150 ಕೋಟಿ ಅನುದಾನ ತಂದಿದ್ದಾರೆ. ದಾನಿಗಳಾದ ಡಾ.ಎಸ್.ರಾಜು ಅವರಿಗೆ ಅಭಿನಂದನೆ ತಿಳಿಸಿದರು.ಪುರಸಭಾ ಮಾಜಿ ಅಧ್ಯಕ್ಷರಾದ ಟಿ.ಎಸ್.ರಮೇಶ್, ಟಿ. ಆರ್.ಬಸವರಾಜ್, ಪುರಸಭಾ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ನಿವೃತ್ತ ಶಿಕ್ಷಕ ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಮತ್ತಿತರರು ಮಾತನಾಡಿದರು.
ಹಿರಿಯರಾದ ವಗ್ಗಪ್ಪರ ಮಂಜುನಾಥ್, ಚೆನ್ನೋಜಿರಾವ್ ಚವ್ಹಾಣ್, ಹನುಮಂತಮ್ಮ, ರವಿಕುಮಾರ್, ಲೋಕೇಶ್, ಶ್ರೀನಿವಾಸ್ ಶಾಲೆಯ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.22ಕೆಟಿಆರ್.ಕೆ.10ಃ
ತರೀಕೆರೆಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಳೇ ವಿದ್ಯಾರ್ಥಿಗಳ ಸಂಘದಿಂದ ನಡೆದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ದಾನಿ ಡಾ.ಎಸ್.ರಾಜು, ಪುರಸಭಾ ಮಾಜಿ ಅಧ್ಯಕ್ಷರಾದ ಡಿ.ವಿ.ಪದ್ಮರಾಜು, ಪುರಸಭಾ ಸದಸ್ಯ ಟಿ.ಜಿ.ಅಶೋಕ್ ಕುಮಾರ್, ದಸಂಸ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮತ್ತಿತರರು ಇದ್ದರು.