ಕುದೂರು: ಶಾಲೆಯೇ ದೇವಾಲಯ, ಮಕ್ಕಳೇ ದೇವರು ಎಂದು ಭಾವಿಸಿದ ನೆಲ ನಮ್ಮದು. ಅದಕ್ಕಾಗಿಯೇ ಚಿಕ್ಕ ಮಕ್ಕಳಿಗೆ ಶ್ರೀ ಕೃಷ್ಣ ಯಶೋಧ, ರಾಧೆ, ಶಿವ ಇಂತಹ ವೇಷಗಳನ್ನು ಹಾಕಿ ಪೋಷಕರು ಸಂಭ್ರಮಿಸುತ್ತಾರೆ. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಅಂತಹ ಗುಣಗಳಿಂದ ಕಂಗೊಳಿಸಲಿ ಎಂಬ ಭಾವವೇ ಇದರಲ್ಲಿ ಅಡಗಿದೆ ಎಂದು ಕೋರಮಂಗಲದ ಅಜ್ಜಯ್ಯ ಮಠದ ಶ್ರೀ ಶ್ರೀಧರ್ ಗುರೂಜಿ ಹೇಳಿದರು.
ಕುದೂರು ಗ್ರಾಮದ ಶ್ರೀ ವಿವೇಕಾನಂದ ವಿದ್ಯಾಪೀಠದಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಶಾಲೆಗಳಲ್ಲಿ ಓದುವಾಗಲೇ ಶ್ರೀಕೃಷ್ಣನ ಬಾಲ್ಯದ ಜೀವನವನ್ನು ಮಕ್ಕಳಿಗೆ ಪರಿಚಯಿಸಬೇಕು. ಸಮಾಜದಲ್ಲಿ ಶಿಷ್ಟವಾತಾವರಣವನ್ನು ಸದಾ ಕಾಪಾಡಿಕೊಳ್ಳಲು ಕೃಷ್ಣನಂತಹವರು ಕಾಲಕಾಲಕ್ಕೆ ಅವತಾರ ಎತ್ತಿ ಬರುತ್ತಾರೆ. ಅಂತಹ ಅವತಾರ ಈ ಮಕ್ಕಳ ರೂಪದಲ್ಲೇ ಆಗಿರಬಹುದು. ಏಕೆಂದರೆ ಸೆರಮನೆಯಲ್ಲಿ ಹುಟ್ಟಿದ ಕೃಷ್ಣ ಭಗವಂತನ ಅವತಾರವಾದ. ಹಾಗೆಯೇ ನಮ್ಮ ನಿಮ್ಮ ಅಟ್ಟಿಯಲ್ಲಿ ಹುಟ್ಟಿದ ಮಗುವೊಂದು ಧೀರನಾಗುವುದಿಲ್ಲ ಎಂಬ ಅನುಮಾನ ನಮಗ್ಯಾಕೆ ಎಂದರು.
ಹುಟ್ಟಿದ ಪ್ರತಿ ಮಗುವು ಭಗವಂತನ ರೂಪದಂತೆಯೇ ಬರುತ್ತಾನೆ. ಆದರೆ ನಮ್ಮ ಬೆಳವಣಿಗೆಯಲ್ಲಿ ಕೆಟ್ಟಗುಣಗಳನ್ನು ಅಳವಡಿಸಿಕೊಂಡು, ಶುದ್ದವಾದ ಸರೋವರವನ್ನು ಚರಂಡಿಯಂತಹ ಕೊಳಕಾಗಿರುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ಅದಕ್ಕಾಗಿ ಚಿಕ್ಕಂದಿನಿಂದಲೇ ಒಳ್ಳೆಯ ಭಾವ ಬರಲಿ ಎಂದು ಇಂತಹ ಉಡುಪುಗಳನ್ನು ಮಕ್ಕಳಿಗೆ ಹಾಕಿ ಸಂಭ್ರಮಿಸುತ್ತೇವೆ ಎಂದು ತಿಳಿಸಿದರು.ಶ್ರೀ ವಿವೇಕಾನಂದ ವಿದ್ಯಾಪೀಠದ ಮುಖ್ಯಸ್ಥ ರಂಗೇಶ್ ಮಾತನಾಡಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಕವಿವಾಣಿಯಂತೆ ಶಾಲೆಯಲ್ಲಿ ಶಿಕ್ಷಣವನ್ನು ರೂಪಸಿ ಮಕ್ಕಳಿಗೆ ತರಬೇತಿ ಕೊಡಲಾಗುತ್ತಿದೆ. ಹುಟ್ಟಿದ ಮಣ್ಣಿಗೆ ವರವಾಗದೇ ಹೋದರೂ ಶಾಪವಾಗದಂತೆ ಬದುಕುವುದನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದೇವೆ. ಅದಕ್ಕಾಗಿ ಕೃಷ್ಣನ ಉಡುಪು ಧರಿಸಿ ಮಕ್ಕಳಿಗೆ ಪ್ರೇರಣೆ ನೀಡುತ್ತಿದ್ದೇವೆ ಎಂದು ಹೇಳಿದರು.
ಪ್ರಾಚಾರ್ಯೆ ಪಲ್ಲವಿ ಮಾತನಾಡಿ, ಈ ಭೂಮಿಯ ಮೇಲೆ ದಡ್ಡ ಮಕ್ಕಳು ಎಂದು ಯಾರೂ ಇರುವುದಿಲ್ಲ. ಆದರೆ ಮಕ್ಕಳನ್ನು ದಡ್ಡ ಮತ್ತು ಬುದ್ದಿವಂತ ಎಂದು ರೂಪಿಸುವ ಜವಾಬ್ದಾರಿ ಶಿಕ್ಷಕ ಮತ್ತು ಪೋಷಕರ ಜವಾಬ್ದಾರಿ ದೊಡ್ಡದಾಗಿದೆ. ಅಂತಹ ಕೆಲಸವನ್ನು ನಮ್ಮ ವಿದ್ಯಾಪೀಠ ದೇವರ ಪೂಜೆಯಷ್ಟೇ ಶ್ರದ್ದೆಯಿಂದ ಮಾಡುತ್ತಾ ಬಂದಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೃಷ್ಣ ರಾಧೆಯ ಉಡುಪು ಧರಿಸಿದ ಮಕ್ಕಳಿಗೆ ಬೆಣ್ಣೆಯ ಮಡಿಕೆ ಹೊಡೆವ ಸ್ಪದರ್ೆಯನ್ನು ಏರ್ಪಡಿಸಲಾಗಿತ್ತು. ಶಿಕ್ಷಕರಾದ ನಾಗರಾಜು, ಪ್ರತಿಭಾ, ಕಾವ್ಯಶ್ರೀ, ಆಶಾ, ಸುಮ, ನೂರೈಸ್ ಸಭಾ, ಅನುರಾಧ, ಜಯಲಕ್ಷ್ಮಿ ಸಹನ ಮತ್ತಿತರರು ಭಾಗವಹಿಸಿದ್ದರು.
---------------------------1ಕೆಆರ್ ಎಂಎನ್ 3.ಜೆಪಿಜಿ
ಕುದೂರು ಗ್ರಾಮದ ಶ್ರೀ ವಿವೇಕಾನಂದ ವಿದ್ಯಾಪೀಠ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ಕೃಷ್ಣ ರಾಧೆ ವೇಷ ಧರಿಸಿ ಸಂಭ್ರಮಿಸಿದರು.-------------------------