ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಕೋಟೇಶ್ವರದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ಮೂಲಕ ಕೋಟೇಶ್ವರ ಶೈಕ್ಷಣಿಕ ವಲಯ ವ್ಯಾಪ್ತಿಯ 24 ಸರ್ಕಾರಿ ಶಾಲೆಗಳ ಶೌಚಾಲಯದ ನಿರಂತರ ಸ್ವಚ್ಛತೆಯ ಸ್ವಚ್ಛಭಾರತ್ ಅಭಿಯಾನವನ್ನು ಉದ್ಘಾಟಿಸಿ ಸ್ವಾಮೀಜಿ ಶುಭ ಸಂದೇಶ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಈ ಅಭಿಯಾನದ ವಾಹನ - ರಥಾಲಯಕ್ಕೆ ಹಸಿರು ನಿಶಾನೆ ತೋರಿಸಿ, ಸ್ವಚ್ಚ ಭಾರತ್ ಅಭಿಯಾನದ ಮೂಲ ಉದ್ದೇಶ ಹಾಗೂ ಪ್ರಧಾನಮಂತ್ರಿಗಳ ಕರೆಯನ್ನು ಸವಾಲಾಗಿ ಸ್ವೀಕರಿಸಿ, 24 ಸರ್ಕಾರಿ ಶಾಲೆಗಳ ಶೌಚಾಲಯಗಳ ನಿರ್ವಹಣೆಗೆ ಮುಂದಾಗಿರುವ ಗೋಪಾಡಿ ಶ್ರೀನಿವಾಸ ರಾವ್ ಅವರ ಕಾರ್ಯ ಮಾದರಿ ಎಂದು ಶ್ಲಾಘಿಸಿದರು.ಇತರ ಉದ್ಯಮಿಗಳಿಗೂ ಸ್ಪೂರ್ತಿಯಾಗಲಿ:
ಈ ಯೋಜನೆಯ ರೂವಾರಿ ಗೋಪಾಡಿ ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಮಕ್ಕಳೇ ಭವಿಷ್ಯದ ಆಸ್ತಿ. ಅವರಲ್ಲಿ ಸ್ವಚ್ಚತೆಯ ಅರಿವು ಮೂಡಿಸಿದಾಗ ಮಾತ್ರ ಸ್ವಚ್ಚ ಭಾರತದ ಕನಸು ಈಡೇರುತ್ತದೆ. ಸ್ವಚ್ಚತೆ ಇದ್ದಾಗ ಮಾತ್ರ ಶಾಲೆಯಲ್ಲಿ ವಿದ್ಯಾರ್ಥಿಗಳು ಉಲ್ಲಾಸದಿಂದಿರಲು ಸಾಧ್ಯ. ಸ್ಚಚ್ಚತೆಯಿಂದ ಸೋಂಕು ನಿವಾರಿಸಬಹುದು. ಈ ಮಾದರಿ ಕಾರ್ಯವನ್ನು ಇಡೀ ದೇಶಕ್ಕೆ ವಿಸ್ತರಿಸುವ ಜವಾಬ್ದಾರಿ ಶಿಕ್ಷಕರಿಗಿದೆ. ನನ್ನಂತೆಯೇ ಇರುವ ಇತರ ಉದ್ಯಮಿ, ದಾನಿಗಳಿಗೂ ಇದು ಸ್ಪೂರ್ತಿಯಾಗಲಿ ಎಂದರು.ಈ ವೇಳೆ, ಯೋಜನೆಗೆ ದುಡಿದ ಸೇವಕರನ್ನು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಗೌರವಿಸಲಾಯಿತು. ಆಕಾಶವಾಣಿ ಕಲಾವಿದ ವಿನುಷ್ ಭಾರದ್ವಾಜ್ ಮತ್ತು ಬಳಗದವರಿಂದ ಗಾನ ಮಾಧುರ್ಯ ಮತ್ತು ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.