ಶಾಲಾ ವಾಹನ ತಪಾಸಣೆ ಅಭಿಯಾನ: 282 ಪ್ರಕರಣ, 1.58 ಲಕ್ಷ ರು. ದಂಡ

KannadaprabhaNewsNetwork |  
Published : Jun 19, 2025, 11:50 PM IST
19ಬಸ್ | Kannada Prabha

ಸಾರಾಂಶ

ಅಭಿಯಾನದ ಅಂಗವಾಗಿ ಬೆಳಗ್ಗೆ 7ರಿಂದ ಅಪರಾಹ್ನ 12 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪಿಯಲ್ಲಿ ಶಾಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಒಟ್ಟು 930 ವಾಹನಗಳನ್ನು ತಪಾಸಣೆ ನಡೆಲಾಯಿತು. ನಿಯಮ ಮೀರಿದ್ದ 282 ವಾಹನಗಳ ಮೇಲೆ ಪ್ರಕರಣಗಳನ್ನು ದಾಖಲಿಸಿ 1,58,000 ರು. ದಂಡ ವಿಧಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಾದ್ಯಂತ ಶಾಲಾ ವಾಹನಗಳು ಮಿತಿ ಮೀರಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹಾಗೂ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಜಿಲ್ಲೆಯ ನೂತನ ಎಸ್ಪಿ ಹರಿರಾಮ್ ಶಂಕರ್ ಅವರು ಶಾಲಾ ಮಕ್ಕಳ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಗುರುವಾರ ವಿಶೇಷ ತಪಾಷಣಾ ಅಭಿಯಾನ ಆಯೋಜಿಸಿದ್ದರು.

ಈ ಅಭಿಯಾನದ ಅಂಗವಾಗಿ ಬೆಳಗ್ಗೆ 7ರಿಂದ ಅಪರಾಹ್ನ 12 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪಿಯಲ್ಲಿ ಶಾಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಒಟ್ಟು 930 ವಾಹನಗಳನ್ನು ತಪಾಸಣೆ ನಡೆಲಾಯಿತು. ನಿಯಮ ಮೀರಿದ್ದ 282 ವಾಹನಗಳ ಮೇಲೆ ಪ್ರಕರಣಗಳನ್ನು ದಾಖಲಿಸಿ 1,58,000 ರು. ದಂಡ ವಿಧಿಸಲಾಯಿತು.ಸರಿಯಾದ ದಾಖಲೆಗಳನ್ನು ಹೊಂದಿರದಿದ್ದ 39, ನಿಮಯಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದ 48 ಹಾಗೂ 194 ವಾಹನಗಳ ಮೇಲೆ ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಯಿತು. ಈ ವಿಶೇಷ ತಪಾಷಣಾ ಅಭಿಯಾನದಲ್ಲಿ 5 ಪೊಲೀಸ್‌ ನಿರೀಕ್ಷಕರು, 30 ಪೊಲೀಸ್‌ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

...................

ಒಂದು ವಾರ ಕಾಲಾವಕಾಶ: ಎಸ್ಪಿ

ಈ ಎಲ್ಲಾ ವಾಹನಗಳಿಗೆ ದಾಖಲೆಗಳನ್ನು ಸರಿಪಡಿಸಿಕೊಳ್ಳಲು, ವಾಹನದ ಮಿತಿಗನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಇತರ ಸುರಕ್ಷತಾ ನಿಯಮಗಳನ್ನು ಅಳವಡಿಸಿಕೊಳ್ಳಲು ಸಂಬಂಧಿತ ಶಾಲಾ ಆಡಳಿತ ಮಂಡಳಿಗಳಿಗೆ 1 ವಾರ ಕಾಲಾವಕಾಶ ನೀಡಲಾಗಿದೆ. ಈ ಬಾರಿ ಯಾವುದೇ ವಾಹನ ಜಫ್ತು ಮಾಡದೇ ಬಿಟ್ಟುಪ ಕಳುಹಿಸಲಾಗಿದೆ. ವಾರದ ನಂತರ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಈ ಸಂದರ್ಭ ಅಥವಾ ಮುಂದೆ ನಿರಂತರವಾಗಿ ನಡೆಯುವ ತಪಾಸಣಾ ಅಙಿಯಾನದ ಸಂದರ್ಭದಲ್ಲಿ ಮತ್ತೇ ತಪ್ಪು ಪುನರಾವರ್ತನೆಯಾದರೇ ಭಾರತೀಯ ವಾಹನ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಹರಿರಾಮ್ ಶಂಕರ್ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ