ಸರ್ಕಾರಿ ಶಾಲೆ ವಿದ್ಯಾರ್ಥಿನಿ ತಯಾರಿಸಿದ ವಿಜ್ಞಾನ ಮಾದರಿ ಅಂತಾರಾಷ್ಟ್ರೀಯ ಮಟ್ಟಕ್ಕೆ

KannadaprabhaNewsNetwork |  
Published : May 04, 2025, 01:37 AM IST
2ಎಂಡಿಜಿ1, ಮುಂಡರಗಿ ತಾಲೂಕಿನ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಚುರ್ಚಿಹಾಳ ತಯಾರಿಸಿದ ಹಾಟ್ ವೆಸಲ್ ಕ್ಯಾರಿಯರ್ ಕಿಟ್ ಮಾಡಲ್. | Kannada Prabha

ಸಾರಾಂಶ

ಮುಂಡರಗಿ ತಾಲೂಕಿನ ಸಿಂಗಟಾಲೂರು ವೀರಭದ್ರೇಶ್ವರ ಸರ್ಕಾರಿ ಪ್ರೌಢಶಾಲೆಯ‌ ವಿದ್ಯಾರ್ಥಿನಿ ರಕ್ಷಿತಾ‌ ಅಂದಪ್ಪ‌ ಚುರ್ಚಿಹಾಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ "ಇನ್‌ಸ್ಪೈಯರ್ ಅವಾರ್ಡ್‌ "ಗೆ ಸಿದ್ಧಪಡಿಸಿದ ಹಾಟ್ ವೆಸಲ್ ಕ್ಯಾರಿಯರ್ ಕಿಟ್ ಎಂಬ ವಿಜ್ಞಾನ ಮಾದರಿ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಶರಣು ಸೊಲಗಿಕನ್ನಡಪ್ರಭ ವಾರ್ತೆ ಮುಂಡರಗಿತಾಲೂಕಿನ ಸಿಂಗಟಾಲೂರು ವೀರಭದ್ರೇಶ್ವರ ಸರ್ಕಾರಿ ಪ್ರೌಢಶಾಲೆಯ‌ ವಿದ್ಯಾರ್ಥಿನಿ ರಕ್ಷಿತಾ‌ ಅಂದಪ್ಪ‌ ಚುರ್ಚಿಹಾಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ "ಇನ್‌ಸ್ಪೈಯರ್ ಅವಾರ್ಡ್‌ "ಗೆ ಸಿದ್ಧಪಡಿಸಿದ ಹಾಟ್ ವೆಸಲ್ ಕ್ಯಾರಿಯರ್ ಕಿಟ್ ಎಂಬ ವಿಜ್ಞಾನ ಮಾದರಿ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ರಕ್ಷಿತಾ‌, ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಹಮ್ಮಿಗಿ ಗ್ರಾಮದ ಗ್ಯಾರೇಜಿನಲ್ಲಿ ಈ ಮಾದರಿ ಸಿದ್ದಪಡಿಸಿದ್ದಾಳೆ. ಜೂನ್ ತಿಂಗಳು ಜಪಾನಿನಲ್ಲಿ ನಡೆಯುವ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಮಾದರಿ ಪ್ರದರ್ಶನಗೊಳ್ಳಲಿದೆ.

ಏನಿದು ವಿಜ್ಞಾನ ಮಾದರಿ?:ನಿತ್ಯ ಬಿಸಿಯೂಟ ನಡೆಯುವ ಶಾಲೆಗಳ ಅಡುಗೆ ಮನೆಯಲ್ಲಿ ಬಿಸಿ ಅನ್ನ, ಸಾಂಬಾರ ಪಾತ್ರೆಗಳನ್ನು ಬೇರೆಡೆ ಸುಲಭವಾಗಿ ಸಾಗಿಸಲು ಈ ಸಾಧನವನ್ನು ತಯಾರಿಸಲಾಗಿದೆ. ಆಹಾರ ತಯಾರಿಸಿದ ಬಿಸಿಯಾದ ಪಾತ್ರೆ ಸಾಗಿಸಲು ಅಪಾಯ ಹೆಚ್ಚು, ಇದರಿಂದ ಜೀವಹಾನಿಯೂ ಆಗಬಹುದು. ಅದನ್ನು ತಪ್ಪಿಸಲು ಇದು ಸರಳ ಸಾಧನವಾಗಿದೆ. ಯಾವುದೇ ತಾಂತ್ರಿಕ ಜ್ಞಾನ ಇಲ್ಲದವರು ಕೂಡ ಸೂಕ್ತವಾಗಿ ಬಳಸಬಹುದು. ಮಕ್ಕಳಿಗೆ ಆಹಾರ ನೀಡುವಾಗ ಪಾತ್ರೆ ಉರುಳಿ ಬೀಳದಂತೆ ವ್ಯವಸ್ಥೆ ಇದೆ. ಇಲ್ಲಿ ಬಳಸಲಾದ ಸ್ಪ್ರಿಂಗನಲ್ಲಿ ಪ್ರಚ್ಛನ ಶಕ್ತಿ ಇದೆ. ಚೌಕಾಕಾರದ ಜಾರು ಪೈಪುಗಳು ಘಟನೆಯನ್ನಾಧರಿಸಿ ಕೆಲಸ ಮಾಡುತ್ತವೆ. ಪಾತ್ರೆಯ ಗಾತ್ರ ಮತ್ತು ಎತ್ತರಕ್ಕೆ ಅನುಗುಣವಾಗಿ ಈ ಸಾಧನವನ್ನು ಹೊಂದಾಣಿಕೆ ಮಾಡಿಕೊಳ್ಳಲು ನಟ್ ಬೋಲ್ಟ್ ವ್ಯವಸ್ಥೆ ಇದೆ. ಕಡಿಮೆ ಸ್ನಾಯು ಶಕ್ತಿಯನ್ನು ಬಳಸಿಕೊಂಡು ಹೆಚ್ಚಿನ ಕೆಲಸ ಮಾಡುವ ಸಾಧನ ಇದಾಗಿದೆ. ಸಾಮಾನ್ಯ ಮೆಕ್ಯಾನಿಕ್ ಕೂಡ ಇದನ್ನು ದುರಸ್ತಿ ಮಾಡಲು ಸಾಧ್ಯ. ಅವರಿಗೆ ಇದರ ಸ್ಕೆಲಿಟನ್ ಹೇಳಿದರೆ ಸಾಕು, ಮಾಡಲ್ ತಯಾರಾಗುತ್ತದೆ. ಇದರ ಸಾಮಗ್ರಿಗಳು ಸುಲಭವಾಗಿ ದೊರೆಯುತ್ತವೆ.ಇದು 3ನೇ ಮಾದರಿ:ಇದೇ ಪ್ರೌಢ ಶಾಲೆ ವಿದ್ಯಾರ್ಥಿಗಳು ರೂಪಿಸಿದ ಎರಡು ವಿಜ್ಞಾನ ಮಾದರಿಗಳು ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರದರ್ಶನಗೊಂಡು ಹೆಸರು ತಂದಿವೆ. ಇದೀಗ ಪ್ರದರ್ಶನಗೊಳ್ಳಲಿದೆ.

ಕಳೆದ ವರ್ಷ ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿತ್ತು. ಒಟ್ಟು 700 ಮಾದರಿಗಳು ಅಂದು ಅಲ್ಲಿ ಪ್ರದರ್ಶನಗೊಂಡಿದ್ದವು. ಆ ಮಾದರಿಗಳಲ್ಲಿ 54 ಮಾದರಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿವೆ. ಅದರಲ್ಲಿ ಸಿಂಗಟಾಲೂರ ಪ್ರೌಢಶಾಲೆಯ ಮಾದರಿಯೂ ಒಂದು.

ಕೇಂದ್ರದ ಯೋಜನೆ: ಮಕ್ಕಳಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ಮಹತ್ವದ ಯೋಜನೆ ಇದಾಗಿದೆ. ಇದಕ್ಕೆ 6ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಸ್ಪರ್ಧೆ ದೇಶಾದ್ಯಂತ ಎಲ್ಲ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ 5 ಯೋಜನೆ ಸಲ್ಲಿಸಬೇಕು. ಅದರಲ್ಲಿಯೂ ನವೀನ ವಿಜ್ಞಾನ ಮಾದರಿಗೆ ಆದ್ಯತೆ ನೀಡಲಾಗುತ್ತದೆ. ಇದರ ತಯಾರಿಗಾಗಿ ₹10 ಸಾವಿರ ಅನುದಾನ ದೊರೆಯಲಿದೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ಸ್ಪರ್ಧೆ ನಡೆಯುತ್ತದೆ.ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರಾದ ರವಿ ದೇವರಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಹಾಟ್ ವೆಸಲ್ ಕ್ಯಾರಿಯರ್ ಕಿಟ್ ತಯಾರಿಸಿದೆ. ಇದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿರುವುದು ಸಂತಸ ತಂದಿದೆ ವಿದ್ಯಾರ್ಥಿನಿ ರಕ್ಷಿತಾ ಚುರ್ಚಿಹಾಳ ಹೇಳಿದರು.

ಮಕ್ಕಳು ಚುರುಕಾಗಿದ್ದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಇದೇ ಸಾಕ್ಷಿ. ಇದೊಂದು ಕಡಿಮೆ ಖರ್ಚಿನಲ್ಲಿ ತಯಾರಿಸಿದ ಮಾದರಿ. ಜಪಾನಿನಲ್ಲಿ ಪ್ರದರ್ಶನ ಆಗುತ್ತಿರುವುದು ಸಂತಸ ತಂದಿದೆ. ಇಲ್ಲಿ ಒಟ್ಟು 14 ರಾಷ್ಟ್ರಗಳ ವಿಜ್ಞಾನ ಮಾದರಿಗಳು ಪ್ರದರ್ಶನಗೊಳ್ಳಲಿವೆ ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!