ವಿಜ್ಞಾನ, ವಸ್ತು ಪ್ರದರ್ಶನ: ಮಕ್ಕಳಿಗೆ ಕುತೂಹಲ

KannadaprabhaNewsNetwork | Published : Jan 23, 2025 12:48 AM

ಸಾರಾಂಶ

Science, object display: Curiosity for children

ಕನ್ನಡಪ್ರಭ ವಾರ್ತೆ ತರೀಕೆರೆ

ವಿಜ್ಞಾನ ಮತ್ತು ವಸ್ತು ಪ್ರದರ್ಶನದಂತಹ ಕಾರ್ಯಕ್ರಮವು ಮಕ್ಕಳ ಮನಸ್ಸು ಬಹುಬೇಗ ಆಸಕ್ತಿ ಮತ್ತು ಕುತೂಹಲಕ್ಕೆ ಒಳಗಾಗುತ್ತದೆ ಎಂದು ಪಟ್ಟಣದ ಜ್ಞಾನ ದೇಗುಲ ಅಕಾಡೆಮಿ ಶಾಲೆ ಅಡಳಿತಾಧಿಕಾರಿ ಸಂಕೇತ್ ಹೇಳಿದ್ದಾರೆ.

ಅವರು, ಜ್ಞಾನ ದೇಗುಲ ಅಕಾಡೆಮಿ ಶಾಲೆ ವತಿಯಿಂದ ಶಾಲೆಯಲ್ಲಿ ಏರ್ಪಾಡಾಗಿದ್ದ (ಅವಿನ್ಯ-2) ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು

ಪಠ್ಯದ ವಿಷಯಗಳು ಎಷ್ಟೇ ಬಾರಿ ಓದಿದರು ಸುಲಭವಾಗಿ ಅರ್ಥವಾಗುವುದಿಲ್ಲ. ಆದರೆ, ಇಂತಹ ಪ್ರದರ್ಶನಗಳು ಸುಲಭ ವಿಷಯಗಳಿಗೆ ಸಹಕಾರಿಯಾಗುತ್ತದೆ, ವಿಜ್ಞಾನ ಮತ್ತು ವಸ್ತು ಪ್ರದರ್ಶನದಲ್ಲಿ ಪೋಷಕರು ಮಕ್ಕಳಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಹೆಚ್ಚು ಆಸಕ್ತಿ ಇರುತ್ತದೆ, ಇದು ಶಿಕ್ಷಣದ ಒಂದು ಭಾಗವಾಗಿ ರೂಪಗೊಂಡಿದೆ ಎಂದು ಅವರು ತಿಳಿಸಿದರು

ಯುವ ವಿಜ್ಞಾನಿ ಜಯರಾಮ್ ಅವರು ಅಧುನಿಕ ಕೃಷಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾತನಾಡಿದರು.

ಶಾಲಾ ಆಡಳಿತ ಅಧಿಕಾರಿ ಸಂಕೇತ್, ಪ್ರಾಂಶುಪಾಲ ಮಹಾದೇವ ಹಾಗೂ ಅನೇಕ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ಈ ವಸ್ತು ಪ್ರದರ್ಶನದಲ್ಲಿ ಮಕ್ಕಳು ಮಾಡಿದ ವಿವಿಧ ಬಗೆಯ ಮಾಡೆಲ್ ಗಳು ಗಮನ ಸೆಳೆದವು ಹಸಿರೀಕರಣ, ಭೂಮಿ, ಕನ್ನಡ ವ್ಯಾಕರಣ, ಕವಿಗಳು, ಗಣಿತದ ಸೂತ್ರಗಳು, ಗಡಿಯಾರ, ಹೊಸ ತಂತ್ರಜ್ಞಾನ, ಮಧ್ಯಕಾಲ ಇತಿಹಾಸ ಆಗಿನ ಕಾಲದ ಜೀವನ, ಗುಡಿಗೋಪುರ, ಮೊಬೈಲ್ ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ತರಕಾರಿಗಳು ಬೆಳೆಯುವ ರೀತಿ, ಸಾವಯವ ಗೊಬ್ಬರ, ರೈತನ ದುಡಿಮೆ, ಮಣ್ಣು ಉದ್ಯಾನವನ, ಹೀಗೆ ನೂರಾರು ವಿಷಯಗಳ ಮೇಲೆ ಮಕ್ಕಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಪುಟ್ಟ ಮಕ್ಕಳು ಶ್ರದ್ಧೆಯಿಂದ ಬಗೆ ಬಗೆಯ ಮಾಡಲ್ ಗಳನ್ನು ತಂದು ಪ್ರದರ್ಶನಕ್ಕೆ ಇಟ್ಟಿದ್ದು, ವಿಶೇಷವಾಗಿತ್ತು.

ಪೋಷಕರು ಮಕ್ಕಳ ಉತ್ಸಾಹದಲ್ಲಿ ಭಾಗಿಯಾಗಿದ್ದರು.

ಕಲಾ ಮತ್ತು ವಿಜ್ಞಾನ ಕ್ಷೇತ್ರದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಈ ಪ್ರದರ್ಶನದಲ್ಲಿ 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಸ್ತು ಪ್ರದರ್ಶನ ನೋಡುಗರಿಗೆ ಮೆಚ್ಚುಗೆ ಪಡೆಯಿತು.

--------------------

ಫೋಟೊ: ತರೀಕೆರೆಯಲ್ಲಿ ಜ್ಞಾನ ದೇಗುಲ ಅಕಾಡೆಮಿ ಶಾಲೆ ವತಿಯಿಂದ ಏರ್ಪಾಡಾಗಿದ್ದ (ಅವಿನ್ಯ-2) ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಲೆ ಅಡಳಿತಾಧಿಕಾರಿ ಸಂಕೇತ್, ಪ್ರಾಂಶುಪಾಲರಾದ ಮಹದೇವ್ ಮತ್ತಿತರರು ಇದ್ದಾರೆ.

Share this article