ಇಷ್ಠಲಿಂಗ ಪೂಜೆಯಲ್ಲಿ ವೈಜ್ಞಾನಿಕತೆ ಅಡಕ: ರಾಮಲಿಂಗಯ್ಯ ಶ್ರೀ

KannadaprabhaNewsNetwork |  
Published : May 13, 2026, 02:00 AM IST
ತಾಳಿಕೋಟೆ,  1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಶರಣರ ಪರಿಕಲ್ಪನೆಯಂತೆ, ಇಷ್ಟಲಿಂಗ ಪೂಜೆ, ಇಷ್ಟಲಿಂಗ ಧರಿಸಿದವನೇ ಮಾಡಬೇಕು. ಸದ್ಗುರುವಿನ ಬಳಿ ಬಂದು ದೀಕ್ಷಾ ಮೂಲಕ ಇಷ್ಟಲಿಂಗ ಪಡೆಯಬೇಕು ಎಂದು ಚಬನೂರಿನ ಸಿದ್ಧಿ ಪುರುಷ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿ ರಾಮಲಿಂಗಯ್ಯ ಮಹಾಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಶರಣರ ಪರಿಕಲ್ಪನೆಯಂತೆ, ಇಷ್ಟಲಿಂಗ ಪೂಜೆ, ಇಷ್ಟಲಿಂಗ ಧರಿಸಿದವನೇ ಮಾಡಬೇಕು. ಸದ್ಗುರುವಿನ ಬಳಿ ಬಂದು ದೀಕ್ಷಾ ಮೂಲಕ ಇಷ್ಟಲಿಂಗ ಪಡೆಯಬೇಕು ಎಂದು ಚಬನೂರಿನ ಸಿದ್ಧಿ ಪುರುಷ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿ ರಾಮಲಿಂಗಯ್ಯ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಚಬನೂರ ಗ್ರಾಮದ ಪ್ರತಿಷ್ಠಿತ ದಾಸೋಹ ಮಠವಾಗಿರುವ ಸಿದ್ಧಿ ಪುರುಷ ರಾಮಲಿಂಗೇಶ್ವರ ಮಠದಲ್ಲಿ ಮೇ.1ರಿಂದ 30ರವರೆಗೆ ಸಿದ್ಧಿ ಪುರುಷ ರಾಮಲಿಂಗೇಶ್ವರ ವೈದಿಕ ಸಂಸ್ಕಾರ ಶಿಬಿರದಲ್ಲಿ ಸೋಮವಾರ ನಡೆದ ಇಷ್ಠಲಿಂಗ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ದಿಪುರುಷ ರಾಮಲಿಂಗೇಶ್ವರರು ನಮಗೆ ದಾರಿದೀಪವಾಗಿದ್ದಾರೆ. ವೈದಿಕ ಸಂಸ್ಕಾರ ಶಿಬಿರಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಬೇಸಿಗೆ ಶಿಬಿರಗಳಾಗಿವೆ. ಈ ಶಿಬಿರದಿಂದ ಮೌಲ್ಯಯುತವಾದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ರಾಮಲಿಂಗೇಶ್ವರ ಮಠದಲ್ಲಿ ಈ ಭಾಗದಲ್ಲಿ ಮಕ್ಕಳಿಗೆ ಇಷ್ಟಲಿಂಗ ಪೂಜೆ, ಶಿವಯೋಗ ಸಾಧನೆ ಮತ್ತು ಪೂಜಾ ವಿಧಿವಿಧಾನಗಳು, ವೈದಿಕ ಸಂಸ್ಕಾರ, ಧಾರ್ಮಿಕ ಆಚರಣೆಗಳು ಮತ್ತು ಇಷ್ಟಲಿಂಗ ಪೂಜೆ ಬಗ್ಗೆ ಜ್ಞಾನ ನೀಡುವುದು, ವೇದ, ಪಠಣ, ಯೋಗ, ಒಳಗೊಂಡು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಧಾರ್ಮಿಕ ಹಿನ್ನೆಲೆ ಬಲಪಡಿಸಲು ಅವಶ್ಯವಾಗಿರುವ ಅಂಶಗಳು ಈ ಶಿಬಿರದಲ್ಲಿ ಕಲಿಸಲಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರದ ಜ್ಞಾನ ಅರಿವು ಮೂಡಿಸುವ ಸಲುವಾಗಿ ವೈದಿಕ ಸಂಸ್ಕಾರ ಶಿಬಿರ ಹಮ್ಮಿಕೊಂಡಿದೆ ಎಂದರು.

ನಂದವಾಡಗಿ ವೇದ ಪಂಡಿತ ಸಿದ್ದು ಹಿರೇಮಠ ಮಾತನಾಡಿ, ಈ ಭಾಗದ ಮಕ್ಕಳಲ್ಲಿ 1 ತಿಂಗಳ ಶಾಲಾ ರಜೆ ವೇಳೆ ಮಕ್ಕಳಿಗೆ ಉಪಯುಕ್ತವಾಗುವ ಜಿಲ್ಲೆಯಲ್ಲಿಯೇ ಮಾದರಿಯಾಗುವ ವೈದಿಕ ಸಂಸ್ಕಾರ ಶಿಬಿರ ಆಯೋಜಿಸಿ ಕಾಶಿ ವೇದ ಪಂಡಿತರಿಂದ ಹಾಗೂ ಶ್ರೀಶೈಲ ವೇದ ಮತ್ತು ಜ್ಯೋತಿಷ್ಯ ಪಂಡಿತರಿಂದ ವಾರಕ್ಕೊಮ್ಮೆ ವಿಶೇಷ ಭೋದನಾ ಶಿಬಿರ ನಡೆಯುತ್ತಾ ಬಂದಿದೆ. ನಿತ್ಯ ಕುಂಟೋಜಿಯ ವೈದಿಕ ಶಾಸ್ತ್ರಿ ವಿರೇಶ ಹಿರೇಮಠ, ವೈದಿಕ ಶಾಸ್ತ್ರಿ ಪ್ರದೀಪ ಹಿರೇಮಠ, ಗಿರೀಶ ಹಿರೇಮಠ ನಡೆಸಿಕೊಟ್ಟರು.

ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ನಿತ್ಯ ದಾಸೋಹದ ಪ್ರಸಾದದ ಜತೆಗೆ ವಸತಿ ಸೌಲಭ್ಯವನ್ನು ಸಹ ಮಠದ ಧರ್ಮಾಧಿಕಾರಿ ರಾಮಲಿಂಗಯ್ಯ ಮಹಾಸ್ವಾಮೀಜಿ ಕಲ್ಪಿಸಿ ಮಕ್ಕಳಲ್ಲಿ ಮೌಲ್ಯಯುತವಾದ ಬದುಕಿನ ದಾರಿ ತೋರಿಸುತ್ತಿರುವುದು ಗುಣಗಾನಮಯವಾಗಿದೆ ಎಂದರು.ಇಷ್ಟಲಿಂಗ ಎಂಬರ್ಥ ಒಳ್ಳೆಯ ಶಿವ, ಮಂಗಲ ಇತ್ಯಾದಿಗಳಿಂದ ಕೂಡಿದೆ. ಇಷ್ಟಲಿಂಗ ಪೂಜೆಯಿಂದ ಅನಿಷ್ಟ ದೂರವಾಗುತ್ತದೆ. ಇಷ್ಟಲಿಂಗದ ನಿರಂತರ ಪೂಜೆಯಿಂದಲೂ ಲಿಂಗಾಂಗ ಸಾಮರಸ್ಯ ಸಾಧ್ಯವೆಂಬ ವೈಜ್ಞಾನಿಕ ನಿಲುವು ಶರಣರದ್ದಾಗಿದೆ. ಈ ಕಾರಣದಿಂದಲೇ ಮಕ್ಕಳಿಗಾಗಿಯೇ ವೈದಿಕ ಸಂಸ್ಕಾರ ಶಿಬಿರವನ್ನು ಶ್ರೀಮಠದ ವತಿಯಿಂದ ಆಯೋಜಿಸಿದ್ದೇವೆ.

-ರಾಮಲಿಂಗಯ್ಯ ಮಹಾಸ್ವಾಮೀಜಿ, ಜ್ಯೋತಿಷ್ಯ ರತ್ನ ಚಬನೂರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ರಸ್ತೆ ಅಪಘಾತ- ಟ್ಯ್ರಾಕ್ಟರ್‌ ಚಾಲಕ ಸಾವು
36 ಕೆರೆ ಭರ್ತಿಗೆ ಆಗ್ರಹ: ರೈತ ಸಂಘದ ಪ್ರತಿಭಟನೆ