ವೈಜ್ಞಾನಿಕ ಚಿಕಿತ್ಸೆಯಿಂದ ಬಂಜೆತನ ನಿವಾರಣೆ ಸಾಧ್ಯ: ಐವಿಎಫ್ ಆಕ್ಸೆಸ್‌ನ ಬಂಜೆತನ ತಜ್ಞೆ ಡಾ.ಕೆ.ವಿ.ಕಾವ್ಯ

KannadaprabhaNewsNetwork |  
Published : Jun 24, 2024, 01:33 AM IST
23ಎಚ್ಎಸ್ಎನ್4 : ಲಯನ್ಸ್ ಸೇವಾ ಸಂಸ್ಥೆ ಹಾಗು ಕಾವೇರಿ ಕ್ಲಿನಿಕ್ ವತಿಯಿಂದ ಉಚಿತ ಬಂಜೆತನ ಸಮಾಲೋಚನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ವೈಜ್ಞಾನಿಕ ಚಿಕಿತ್ಸೆಯಿಂದ ಮಾತ್ರ ಬಂಜೆತನ ನಿವಾರಿಸಬಹುದು, ಮದುವೆಯಾಗಿ ಮೂರು ವರ್ಷ ಆದರೂ ಮಕ್ಕಳಾಗಿಲ್ಲವೆಂದರೆ ಕೂಡಲೇ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ಐವಿಎಫ್ ಆಕ್ಸೆಸ್‌ನ ಬಂಜೆತನ ತಜ್ಞೆ ಡಾ.ಕೆ.ವಿ.ಕಾವ್ಯ ಸಲಹೆ ನೀಡಿದರು. ಬೇಲೂರಿನಲ್ಲಿ ಉಚಿತ ಬಂಜೆತನ ಸಮಾಲೋಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಚಿತ ಬಂಜೆತನ ಸಮಾಲೋಚನೆ । ಉಚಿತ ಫಲವತ್ತತೆ ಪರಿಶೀಲನೆ ಶಿಬಿರ ಆಯೋಜನೆ

ಕನ್ನಡಪ್ರಭ ವಾರ್ತೆ ಬೇಲೂರು

ಇಂದಿನ ಆಧುನಿಕ ವೈಜ್ಞಾನಿಕ ವಿದ್ಯಮಾನದಲ್ಲಿ ಸ್ತ್ರೀ ಪುರುಷರಿಗೆ ವಿಫುಲ ಅವಕಾಶಗಳಿವೆ. ಮೂಡನಂಬಿಕೆಗಳಿಂದ ಬಂಜೆತನವನ್ನು ಹೋಗಲಾಡಿಸಲು ಸಾಧ್ಯವಿಲ್ಲ, ಬದಲಾಗಿ ವೈಜ್ಞಾನಿಕ ಚಿಕಿತ್ಸೆಯಿಂದ ಮಾತ್ರ ನಿವಾರಿಸಬಹುದು, ಮದುವೆಯಾಗಿ ಮೂರು ವರ್ಷ ಆದರೂ ಮಕ್ಕಳಾಗಿಲ್ಲವೆಂದರೆ ಕೂಡಲೇ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ಐವಿಎಫ್ ಆಕ್ಸೆಸ್‌ನ ಬಂಜೆತನ ತಜ್ಞೆ ಡಾ.ಕೆ.ವಿ.ಕಾವ್ಯ ಸಲಹೆ ನೀಡಿದರು.

ಪಟ್ಟಣದ ದೇವಸ್ಥಾನ ರಸ್ತೆಯ ಕಾವೇರಿ ಕ್ಲಿನಿಕ್‌ನಲ್ಲಿ ಲಯನ್ಸ್ ಕ್ಲಬ್ ಹಾಗೂ ಕಾವೇರಿ ಕ್ಲಿನಿಕ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಫಲವತ್ತತೆ ಪರಿಶೀಲನೆ ಶಿಬಿರ ಹಾಗೂ ಐವಿಎಫ್ ಅಕ್ಸೆಸ್ ಉಚಿತ ಬಂಜೆತನ ಸಮಾಲೋಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಶಿಬಿರದಲ್ಲಿ ಅನೇಕ ದಂಪತಿಗೆ ಅವರ ಸಮಸ್ಯೆಗಳು ಮತ್ತು ಅಗತ್ಯ ಪರಿಹಾರ ಕ್ರಮಗಳ ಬಗ್ಗೆ ಸಲಹೆ ನೀಡಲಾಗುತ್ತಿದೆ. ಬಂಜೆತನ ಸಂಬಂಧಿತ ಸಮಸ್ಯೆಗಳಿಗೆ ಅಂತಹ ದಂಪತಿಗೆ ಸರಿಯಾದ ಸಲಹೆಯನ್ನು ನೀಡುವುದು ಶಿಬಿರದ ಉದ್ದೇಶವಾಗಿದೆ. ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಸರಿಯಾಗಿ ತೆಗೆದುಕೊಂಡಿದ್ದರೂ ಕೂಡ ಯಾವ ರೀತಿ ಮಾರ್ಗದರ್ಶನ ಪಡೆಯಬೇಕು ಎಂದು ಸರಿಯಾಗಿ ಗೊತ್ತಿರುವುದಿಲ್ಲ. ವೈದ್ಯರ ಜತೆ ಇದರ ಬಗ್ಗೆ ಚರ್ಚಿಸಿದಾಗ ಏನು ಚಿಕಿತ್ಸೆ ನೀಡಬೇಕು ಎಂದು ತಿಳಿಯುತ್ತದೆ. ಶೇಕಡ ೪೦ ಮಹಿಳೆಯರಿಗೆ ಈ ತೊಂದರೆ ಇದ್ದರೆ ಶೇಕಡ ೪೦ ಪುರುಷರಿಗೂ ತೊಂದರೆಯಿದೆ. ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಸದುಪಯೋಗ ಪಡೆಸುಕೊಳ್ಳಬೇಕು ಎಂದು ತಿಳಿಸಿದರು.

ಸೀನಿಯರ್ ಫ್ಯಾಮಿಲಿ ಪಿಸಿಷಿಯನ್ ಹಾಗೂ ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಚಂದ್ರಮೌಳಿ ಮಾತನಾಡಿ, ‘ಪ್ರತಿ ವರ್ಷದಂತೆ ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರಗಳನ್ನು ನಮ್ಮ ಲಯನ್ಸ್ ಸಂಸ್ಥೆ ಹಾಗೂ ಕಾವೇರಿ ಕ್ಲಿನಿಕ್ ಸಹಯೋಗದೊಂದಿಗೆ ಆಯೋಜಿಸುತ್ತಿದ್ದು ಇದರ ಸದುಪಯೋಗವನ್ನು ಸಾಕಷ್ಟು ಜನರು ಪಡೆಯುತ್ತಿದ್ದಾರೆ. ಉಚಿತ ಬಂಜೆತನ ಸಮಾಲೋಚನ ಕಾರ್ಯಕ್ರಮೆಲ್ಲಿ ಸುಮಾರು ೧೧೨ ಜನರು ಭೇಟಿಯಾಗಿದ್ದರು. ಅದರಲ್ಲಿ ೫ ಜನರಿಗೆ ಪಾಸಿಟಿವ್ ಅಂಶ ಕಂಡು ಬಂದಿದ್ದು ಈ ಶಿಬಿರದ ಉಪಯೋಗ ಪಡೆದುಕೊಂಡಿದ್ದಾರೆ. ಮುಂದೆಯೂ ಕೂಡ ನಮ್ಮ ಲಯನ್ಸ್ ಸಂಸ್ಥೆಯಿಂದ ಉಚಿತ ಮಧುಮೇಹ, ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ವೈ.ಬಿ.ಸುರೇಶ್, ಕಾರ್ಯದರ್ಶಿ ಬಿ.ಟಿ.ರವಿಕುಮಾರ್, ಖಜಾಂಚಿ ಪ್ರಶಾಂತ್, ಟ್ರಸ್ಟ್ ಅಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ಮುಕ್ತರ್ ಅಹಮದ್, ಮಾಜಿ ಅಧ್ಯಕ್ಷ ಅಬ್ದುಲ್ ಲತೀಫ್, ಆದರ್ಶ, ಸಂತೋಷ್ ಕುಮಾರ್, ನೌಷದ್ ಪಾಷ, ರುಬೀನ ತಾರಾಮಣಿ ಸುರೇಶ್, ಗುರುಪಾದಸ್ವಾಮಿ, ಆಲಿಂ,ಪಿಆರ್‌ಒ ಚೇತನ್ ಕುಮಾರ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ