ಕಂದಕೂರು ಗ್ರಾಮದ ಕೊಂಡಮಾಯಿ ಗುಡ್ಡದಲ್ಲಿ ಚೇಳುಗಳಿಗೆ ಪೂಜೆ ! । ಜೀವಂತ ಚೇಳುಗಳ ಜೊತೆ ಆಟ
ಇಲ್ಲಿಗೆ ಸಮೀಪದ, ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಕೊಂಡಮಾಯಿ ಗುಡ್ಡದಲ್ಲಿ ಪ್ರತಿವರ್ಷದ ನಾಗರಪಂಚಮಿಯಂದು ಮಾತ್ರ ನಡೆಯುವ ಚೇಳಿನ ಜಾತ್ರೆ ವಿಶೇಷ. ಈ ದಿನದಂದು ಭಕ್ತರು ಹಾವಿಗೆ ಪೂಜೆಗೈದು ಹಾಲೆರೆಯುವುದು ಸಾಮಾನ್ಯವಾದರೆ, ಇಲ್ಲಿ ಚೇಳಿಗೆ ಅಗ್ರಪೂಜೆ ! ಚೇಳುಗಳನ್ನು ಮೈಮೇಲೆ ಬಿಟ್ಟುಕೊಂಡು ಸರಸವಾಡೋದು ಇಲ್ಲಿನ ದೃಶ್ಯಗಳು ಮೈನವಿರೇಳಿಸುತ್ತವೆ.
ಎಂದಿನಂತೆ, ಈ ಬಾರಿಯೂ ಸಹ ಸೋಮವಾರ ಬೆಳಿಗ್ಗೆಯಿಂದಲೇ ಕಂದಕೂರಿನ ಕೊಂಡಮಾಯಿ ಗುಡ್ಡದತ್ತ ಸಾವಿರಾರು ಜನರು ಧಾವಿಸಿದರು. ಪೂಜೆಗೈಯ್ಯುವ ಭಕ್ತರ ಜೊತೆ ಜೀವಂತ ಚೇಳುಗಳ ಮೈಮೇಲೆ ಬಿಟ್ಟುಕೊಳ್ಳುವ ಜನರ ಕುತೂಹಲ ಮನೆ ಮಾಡಿತ್ತು.ಕೊಂಡಮಾಯಿ ಗುಡ್ಡದ ಇತಿಹಾಸ ಶತಮಾನಗಳಿಂದ ಅನ್ನುತ್ತಾರಾದರೂ, ಕಳೆದ ಕೆಲವು ದಶಕಗಳಿಂದ ಚೇಳಿನೆ ಜಾತ್ರೆಗೆ ಮಹತ್ವ ಸಿಕ್ಕಿದ್ದು, ಭಕ್ತಿ ಭಾವದ ಜೊತೆಗೆ ಅಚ್ಚರಿಯ ನೋಡಲು ರಾಜ್ಯದ ವಿವಿಧೆಡೆಯಿಂದ ಸೇರಿದಂತೆ, ನೆರೆಯ ತೆಲಂಗಾಣ, ಆಂಧ್ರ, ಮಹಾರಾಷ್ಟ್ರದಿಂದ ನಾಗರಪಂಚಮಿಯಂದು ಇಲ್ಲಿಗೆ ಜನರು ಆಗಮಿಸುತ್ತಾರೆ.
ಚೇಳುಗಳನ್ನು ಹುಡುಕಿ ತೆಗೆಯುವ ಜನರಲ್ಲಿ ಕೆಲವರು ಕೈ, ಮುಖ, ಕುತ್ತಿಗೆ ಮೇಲೆ ಹಾಕಿಕೊಂಡರೆ, ಇನ್ನೂ ಕೆಲವರು ನಾಲಿಗೆಯ ಮೇಲೆ ಚೇಳು ಬಿಟ್ಟುಕೊಳ್ಳುತ್ತಾರೆ. ಮೈಜುಮ್ಮೆನ್ನಿಸುವ ಈ ಸಾಹಸ ಅಚ್ಚರಿ ಜೊತೆಗೆ ಆತಂಕವನ್ನೂ ಮೂಡಿಸುತ್ತದೆ. ನಾಗರಪಂಚಮಿ ಮರುದಿನ ಈ ಚೇಳುಗಳು ಮತ್ತೇ ಸಿಗೋಲ್ಲ ಅನ್ನಲಾಗುತ್ತದೆ.
ಬಾಕ್ಸ್....
ಕೊಂಡಮಾಯಿ ಗುಡ್ಡದಲ್ಲಿ ಚೇಳಿನ ಜಾತ್ರೆ ಅಚ್ಚರಿ ಅರಿಯಲು ಖುದ್ದು ಕುಟುಂಬ ಸಮೇತ ಇಲ್ಲಿಗಾಗಮಿಸಿದ್ದ ಎಸ್ಪಿ ಪೃಥ್ವಿಕ್, ಅಚ್ಚರಿ ಕಂಡು ದಂಗಾದರು. ಸಾವಿರಾರು ಜನರ ಮಧ್ಯೆ, ತಾವೂ ಸಹ ಕೈಮೇಲೆ ಚೇಳು ಇಟ್ಟುಕೊಂಡು ನೋಡಿದ ಎಸ್ಪಿ ಪೃಥ್ವಿಕ್, ಮಗುವಿಗೂ ಸಹ ಚೇಳಿನ ಅನುಭವ ನೀಡಿಸಿದಂತಿತ್ತು.
17ವೈಡಿಆರ್1 : ಕಂದಕೂರಿನ ಕೊಂಡಮಾಯಿ ಗುಡ್ಡದಲ್ಲಿನ ಚೇಳಿನ ಜಾತ್ರೆಯ ವೇಳೆ ಜೀವಂತ ಚೇಳನ್ನು ಹಣೆಯ ಮೇಲೆ ಇಟ್ಟುಕೊಂಡ ವರ್ಷಾರೆಡ್ಡಿ.
17ವೈಡಿಆರ್3 : ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಚೇಳು ಹಿಡಿದು ಅಚ್ಚರಿ ವ್ಯಕ್ತಪಡಿಸಿದರು.