)
ಕುಂದಾಪುರ ; ಕೊಲ್ಲೂರು ಸಮೀಪ ನಿರ್ಮಾಣ ಹಂತದ ದೇವಸ್ಥಾನದ ಮೇಲಿನಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ಶಿಲ್ಪಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅವರು ವಂಡ್ಸೆ ಗ್ರಾಮದ ಕಂಬಳಗದ್ದೆ ಬಳಿಯ ದೇವಸ್ಥಾನದಲ್ಲಿ ಅ.16 ರಂದು ಸಂಜೆ 4:30ರ ಸುಮಾರಿಗೆ ಕೆಲಸ ಮಾಡುವಾಗ ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಹಣೆಗೆ, ಎಡ ಭುಜಕ್ಕೆ ತೀವ್ರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಚಿನ್ಮಯಿ ಆಸ್ಪತ್ರೆಗೆ, ನಂತರ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 8:45ಕ್ಕೆ ಮೃತಪಟ್ಟಿದ್ದಾರೆ ಎಂದು ಮೃತರ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.