ಶಿವಶಕ್ತಿ ಸಹಕಾರಿ ಸಂಘದ ದ್ವಿತೀಯ ವಾರ್ಷಿಕೋತ್ಸವ

KannadaprabhaNewsNetwork |  
Published : Sep 17, 2024, 12:50 AM IST
ಪೋಟೋ೧೬ಸಿಎಲ್‌ಕೆ೨ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದ ಎಸ್.ಆರ್, ಕನೆನ್ಷನ್ ಹಾಲ್‌ನಲ್ಲಿ ಚಳ್ಳಕೆರೆ ಶಿವಶಕ್ತಿ ಸೌಹಾರ್ಧ ಸಹಕಾರಿ ಸಂಘ ನಿಯಮಿತ ಏರ್ಪಡಿಸಿದ್ದ ದ್ವಿತೀಯ ವರ್ಷದ ಸರ್ವಸದಸ್ಯರ ಮಹಾಸಭೆಗೆ ಅಧ್ಯಕ್ಷ ಕೆ.ಸಿ.ವೀರೇಶ್ ಚಾಲನೆ ನೀಡಿದರು.  | Kannada Prabha

ಸಾರಾಂಶ

ನಗರದ ವಾಣಿಜ್ಯೋದ್ಯಮವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರು ಹಾಗೂ ಇತರೆ ವರ್ಗದವರಿಗೆ ಸಣ್ಣ ಪ್ರಮಾಣದ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಚಳ್ಳಕೆರೆ ಶಿವಶಕ್ತಿ ಸೌಹಾರ್ಧ ಸಹಕಾರಿ ಸಂಘ ನಿಯಮಿತ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದು ಅಧ್ಯಕ್ಷ ಕೆ.ಸಿ. ವೀರೇಶ್ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ನಗರದ ವಾಣಿಜ್ಯೋದ್ಯಮವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರು ಹಾಗೂ ಇತರೆ ವರ್ಗದವರಿಗೆ ಸಣ್ಣ ಪ್ರಮಾಣದ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಚಳ್ಳಕೆರೆ ಶಿವಶಕ್ತಿ ಸೌಹಾರ್ಧ ಸಹಕಾರಿ ಸಂಘ ನಿಯಮಿತ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದು ಅಧ್ಯಕ್ಷ ಕೆ.ಸಿ. ವೀರೇಶ್ ತಿಳಿಸಿದರು.

ಅವರು, ಖಾಸಗಿ ಬಸ್ ನಿಲ್ದಾಣದ ಎಸ್.ಆರ್, ಕನ್ವೆನ್ಷನ್ ಹಾಲ್‌ನಲ್ಲಿ ಸಂಘದ ದ್ವಿತೀಯ ವರ್ಷದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆ ವರ್ಷ ಆರಂಭವಾದ ನಮ್ಮ ಸೌಹಾರ್ಧ ಸಹಕಾರಿ ಸಂಘ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಎರಡನೇ ವರ್ಷದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚು ಲಾಭ ದಾಖಲಿಸುವಲ್ಲಿ ಸಂಘ ಯಶಸ್ವಿಯಾಗಿದೆ ಎಂದರು.

ಪ್ರಸ್ತುತ 2023-24ರ ಅವಧಿಯಲ್ಲಿ ಸಂಘ ₹10,14,518 ರಷ್ಟು ಲಾಭ ಗಳಿಸಲು ಸಾಧ್ಯವಾಗಿದೆ. ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗೆ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರು ಬ್ಯಾಂಕ್‌ನ ಸಿಬ್ಬಂದಿ ವರ್ಗ ಸಕರಾತ್ಮಕವಾಗಿ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ವ್ಯವಸ್ಥಾಪಕ ಟಿ. ಮಾರುತಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಶಕ್ತಿ ಸೌಹಾರ್ದ ಸಹಕಾರ ಸಂಘವು ಉತ್ತಮ ಲಾಭವನ್ನು ಗಳಿಸುವ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮ ವಹಿಸಿದೆ. ಆರ್ಥಿಕ ಕ್ಷೇತ್ರವನ್ನು ಬಲಪಡಿಸಲು ಬ್ಯಾಂಕ್‌ಗಳೇ ಆಧಾರವಾಗಿವೆ. ಬ್ಯಾಂಕ್‌ನ ನೆರವು ಪಡೆಯದೆ ಅಭಿವೃದ್ಧಿ ಮಾಡಲು ಸಾಧ್ಯವಾಗದು. ಆದ್ದರಿಂದ ನಿಮ್ಮೆಲ್ಲರ ಶುಭ ಹಾರೈಕೆಯಂತೆ ಎರಡನೇ ವರ್ಷದಲ್ಲೇ 10 ಲಕ್ಷಕ್ಕೂ ಹೆಚ್ಚು ಲಾಭವನ್ನು ದಾಖಲಿಸಿದೆ ಎಂದರು.

ಉಪಾಧ್ಯಕ್ಷ ಎಂ.ಜೆ. ರಾಘವೇಂದ್ರ, ನಿರ್ದೇಶಕರಾದ ಭಾಸ್ಕರ್‌ರಾವ್‌ ಗಾಯಕವಾಡ್, ಈ.ಕೆ. ಸುಧಾಮಣಿ, ಎನ್.ಎಚ್. ರಾಜು, ಕುಂದೂರು ಮಹಂತೇಶ್, ಟಿ. ಮಂಜುನಾಥ, ಸಿ.ವಿ. ರಮೇಶ್, ಎಚ್. ದೀಪಾ, ಎನ್. ಶ್ವೇತಾ, ಕೆ.ಪಿ. ಶಿವಲಿಂಗಪ್ಪ, ನವೀನ್‌ ಗಾಯಕವಾಡ್, ಕೆ.ಸಿ. ರಾಘವೇಂದ್ರ, ಸಿಬ್ಬಂದಿಯಾದ ಕೆ. ಸಹನ, ಎ. ಸತೀಶ್‌ಬಾಬು ಮುಂತಾದವರು ಭಾಗವಹಿಸಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?