ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಯಾಂತ್ರಿಕ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಾದ ಪ್ರಕಾಶ ರಾಠೋಡ ತಂಡವು ECO FRIENDLY SOLAR PANEL CLEANING BY ROBOT ವಸ್ತು ಪ್ರದರ್ಶನ ಮಾಡಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಚಾರ್ಯ ವಾಸುದೇವ ಕೆ.ಅಪ್ಪಾಜಿಗೋಳ ಹಾಗೂ ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಗಂಗಾಧರ ಹುನಗುಂದ ಅಭಿನಂದಿಸಿದ್ದಾರೆ. ಮಾರ್ಗದರ್ಶಕರಾದ ಲಿಂಗರಾಜ ಬಿ.ಶಾಮನೂರ, ಶಿವಲಿಂಗ ಮೂಕನವರ ಅವರನ್ನು ಸಹ ಪ್ರಾಚಾರ್ಯರು ಹಾಗೂ ವಿಭಾಗ ಮುಖ್ಯಸ್ಥರು ಅಭಿನಂದಿಸಿದ್ದಾರೆ.