ಇಂದಿನಿಂದ ದ್ವಿತಿಯ ಪಿಯು ಪರೀಕ್ಷೆ ಆರಂಭ

KannadaprabhaNewsNetwork |  
Published : Mar 01, 2024, 02:19 AM ISTUpdated : Mar 01, 2024, 07:50 AM IST
ಅಫಜಲ್ಪುರ ಪಟ್ಟಣದ ಪಿಯು ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಗಳು ಪರೀಕ್ಷೆಗೆ ಸಿದ್ದಗೆ ಮಾಡಿಕೊಳ್ಳುತ್ತಿರುವುದು. | Kannada Prabha

ಸಾರಾಂಶ

ದ್ವಿತಿಯ ಪಿಯುಸಿ ಪರೀಕ್ಷೆ ಪರೀಕ್ಷೆಗಳು ಇಂದಿನಿಂದ ಆರಂಭವಾಗಲಿದ್ದು ಅಫಜಲ್ಪುರ ತಾಲೂಕಿನಾದ್ಯಂತ 2457 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಚವಡಾಪುರ

ದ್ವಿತಿಯ ಪಿಯುಸಿ ಪರೀಕ್ಷೆ ಪರೀಕ್ಷೆಗಳು ಇಂದಿನಿಂದ ಆರಂಭವಾಗಲಿದ್ದು ಅಫಜಲ್ಪುರ ತಾಲೂಕಿನಾದ್ಯಂತ 2457 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಅಫಜಲ್ಪುರ ತಾಲೂಕಿನಾದ್ಯಂತ ಇರುವ 22 ಪದವಿ ಪೂರ್ವ ಕಾಲೇಜುಗಳ ಪೈಕಿ 5 ಸರಕಾರಿ ಹಾಗೂ 17 ಖಾಸಗಿ ಹಾಗೂ ಅನುದಾನಿತ ಪಿಯು ಕಾಲೇಜುಗಳಲ್ಲಿ ಓದುತ್ತಿರುವ 2457 ವಿದ್ಯಾರ್ಥಿಗಳು ಒಟ್ಟು 4 ವಿವಿಧ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಅಫಜಲ್ಪುರ ಪಟ್ಟಣದಲ್ಲಿ ಮೂರು ಪರೀಕ್ಷೆ ಕೇಂದ್ರಗಳನ್ನು ಮಾಡಲಾಗಿದ್ದು ಈ ಪೈಕಿ ಸರಕಾರಿ ಪಿಯು ಕಾಲೇಜಲ್ಲಿ 31 ಕೋಣೆಗಳಲ್ಲಿ ಎಂಟು ಕಾಲೇಜುಗಳ 772 ವಿದ್ಯಾರ್ಥಿಗಳು, ಶ್ರೀ ಮತಿ ಮಹಾಂತಮ್ಮ ಪಾಟೀಲ್ ಪಿಯು ಕಾಲೇಜಲ್ಲಿ 32 ಕೋಣೆಗಳಲ್ಲಿ ಐದು ಕಾಲೇಜುಗಳ 775 ವಿದ್ಯಾರ್ಥಿಗಳು, ಬಸವರಾಜ ಪಾಟೀಲ ಸೇಡಂ ಪಿಯು ಕಾಲೇಜಲ್ಲಿ 15 ಕೋಣೆಗಳಲ್ಲಿ ಐದು ಕಾಲೇಜುಗಳ 350 ವಿದ್ಯಾರ್ಥಿಗಳು, ಕರಜಗಿ ಪಿಯು ಕಾಲೇಜಲ್ಲಿ 19 ಕೋಣೆಗಳಲ್ಲಿ ನಾಲ್ಕು ಕಾಲೇಜುಗಳ 560 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಇಂದಿನಿಂದ ಆರಂಭವಾಗಲಿರುವ ಪರೀಕ್ಷೆಗಳು ಸುಸೂತ್ರವಾಗಿ ನಡೆಸಲು ಎಲ್ಲ ಸಿದ್ಧತೆಗಳು ಮಾಡಲಾಗಿದೆ ಎಂದು ಪರೀಕ್ಷೆ ಕೇಂದ್ರಗಳ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಇನ್ನೂ ಪರೀಕ್ಷಾ ನಕಲು ತಡೆಯಲು ಹಾಗೂ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ ಪೋಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ ಎಂದು ಸಿಪಿಐ ಚನ್ನಯ್ಯ ಹಿರೇಮಠ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ