ದ್ವಿತೀಯ ಪಿಯು ಫಲಿತಾಂಶ: ಚಿಕ್ಕಬಳ್ಳಾಪುರಕ್ಕೆ 18ನೇ ಸ್ಥಾನ

KannadaprabhaNewsNetwork | Published : Apr 11, 2024 12:46 AM

ಸಾರಾಂಶ

ಜಿಲ್ಲೆಯಾದ್ಯಂತ ಸುಮಾರು 13260 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 6205 ಬಾಲಕರು, 7055 ಬಾಲಕಿಯರು ಇದ್ದಾರೆ. ಒಟ್ಟು 10528 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 4775 ವಿದ್ಯಾರ್ಥಿಗಳು, 5753 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ 19 ನೇ ಸ್ಥಾನದಿಂದ 18 ನೇ ಸ್ಥಾನಕ್ಕೆ ಜಿಗಿದಿದೆ. ಅಲ್ಲದೆ ಎರಡು ಮತ್ತು ಮೂರನೇ ರ್‍ಯಾಂಕ್ ಗಳನ್ನು ಬಿಜಿಎಸ್ ಪಿಯು ಕಾಲೇಜು ಪಡೆದು ಕೊಂಡಿದೆ.

ಈ ಭಾರಿಯೂ ಹೆಣ್ಣು ಮಕ್ಕಳೆ ಮೊದಲ ಸ್ಥಾನದಲ್ಲಿದ್ದಾರೆ. ಪರೀಕ್ಷೆಯಲ್ಲಿ ಶೇ 79.4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಈ ಫಲಿತಾಂಶದಲ್ಲಿ ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 13260 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 6205 ಬಾಲಕರು, 7055 ಬಾಲಕಿಯರು ಇದ್ದಾರೆ. ಒಟ್ಟು 10528 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 4775 ವಿದ್ಯಾರ್ಥಿಗಳು, 5753 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಕಲಾ ವಿಭಾಗ:

ಕಲಾ ವಿಭಾಗದಲ್ಲಿ 1717 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 859 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5382 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 4238ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 6161 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 5431 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ತೃತೀಯ ರ್‍ಯಾಂಕ್‌ನಗರದ ಹೊರವಲಯದ ಅಗಲಗುರ್ಕಿಯ ಬಿ.ಜಿ.ಎಸ್. ಪಿ.ಯು. ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಫಲಿತಾಂಶವು ಶೇ 100 ರಷ್ಟು ಬಂದಿದ್ದು,ವಿಜ್ಞಾನ ವಿಭಾಗದಲ್ಲಿ ಆರ್. ಹರಿಪ್ರಿಯ ಎಂಬ ವಿದ್ಯಾರ್ಥಿನಿಯು 600 ಅಂಕಗಳಿಗೆ 596 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿರುತ್ತಾರೆ.

ವಾಣಿಜ್ಯದಲ್ಲಿ ದ್ವಿತೀಯ ರ್‍ಯಾಂಕ್‌

ವಾಣಿಜ್ಯ ವಿಭಾಗದಲ್ಲಿ ಬಿ. ಆಶ್ರಿತಾ ಎಂಬ ವಿದ್ಯಾರ್ಥಿನಿಯು 600 ಅಂಕಗಳಿಗೆ 595 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿರುತ್ತಾರೆ. ಒಟ್ಟು 600 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿರುತ್ತಾರೆ. ಒಟ್ಟು 907 ವಿದ್ಯಾರ್ಥಿಗ ಳು ಪರೀಕ್ಷೆಯನ್ನುಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100ರಷ್ಟು ಫಲಿತಾಂಶವು ಬಂದಿರುತ್ತದೆ.ಮಾಲೂರು ಸರ್ಕಾರಿ ಕಾಲೇಜು ಸಾಧನೆಮಾಲೂರಿನ ಸರ್ಕಾರಿ ಪಿಯು ಕಾಲೇಜು ಈ ಬಾರಿ ೭೧.೩೧ ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡ ೧೦೧ ವಿದ್ಯಾರ್ಥಿಗಳಲ್ಲಿ ೭೭ ವಿದ್ಯಾರ್ಥಿಗಳು ಪಾಸಾಗಿದ್ದು,ಶೇ.೭೬.೨೩ ಫಲಿತಾಂಶ ಪಡೆದಿದೆ.ಕಾರ್ಮಸ್ ವಿಭಾಗದಲ್ಲಿ ಪರೀಕ್ಷೆಯಲ್ಲಿ ಕುಳಿತ್ತಿದ್ದ ೪೦ ವಿದ್ಯಾರ್ಥಿಗಳಲ್ಲಿ ೧೯ ವಿದ್ಯಾರ್ಥಿಗಳು ಪಾಸಾಗಿ ಶೇ.೪೭.೫ ಪಡೆದಿದ್ದರೆ,ಕಲಾ ವಿಭಾಗದಲ್ಲಿ ೧೧೭ ವಿದ್ಯಾರ್ಥಿಗಳಲ್ಲಿ ೮೮ ವಿದ್ಯಾರ್ಥಿಗಳು ಪಾಸಾಗಿ ಕಲಾ ವಿಭಾಗವು ೭೫. ೨೧ ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಮನೋಹರ್ ಹೆಚ್.ಎನ್. ೫೭೩ ಅಂಕ ಪಡೆದು ಕಾಲೇಜಿಗೆ ಪ್ರಥಮ ಬಂದಿದ್ದಾರೆ.

ಗುಡಿಬಂಡೆ ಸರ್ಕಾರಿ ಕಾಲೇಜು

ಗುಡಿಬಂಡೆ ತಾಲೂಕಿನಲ್ಲಿರುವ ಏಕೈಕ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಈ ಬಾರಿ ಒಟ್ಟು 86 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 45 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ.52.32 ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.79 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 16 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 34 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 14 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 19 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಸಿಕೆಬಿ-3 ಆರ್.ಹರಿಪ್ರಿಯ(ವಿಜ್ಞಾನ).

ಸಿಕೆಬಿ-4 ಬಿ. ಆಶ್ರಿತಾ(ವಾಣಿಜ್ಯ).

Share this article