ದ್ವಿತೀಯ ಪಿಯು: ಸುಕೃತಿ ಶೇ.95.16 ಫಲಿತಾಂಶ; ಕೆ.ಆರ್‌.ಪುರಂ ಶ್ರೀ ವೆಂಕಟೇಶ್ವರ ಪಿಯು ಕಾಲೇಜ್‌ ಸಾಧನೆ

KannadaprabhaNewsNetwork | Published : Apr 11, 2024 1:47 AM

ಸಾರಾಂಶ

ಪಿಯುಸಿಯಲ್ಲಿ ರಾಷ್ಟ್ರೀಯ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಿ.ಸುಕೃತಿ ಶೇ.95.16 ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಹಾಗೂ ಕೆ.ಆರ್‌.ಪುರಂ ಶ್ರೀ ವೆಂಕಟೇಶ್ವರ ಪಿಯು ಕಾಲೇಜ್‌ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ರಾಷ್ಟ್ರೀಯ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಿ.ಸುಕೃತಿ ಶೇ.95.16 ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸಂಸ್ಕೃತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ತಲಾ 99 ಅಂಕಗಳನ್ನು ಪಡೆದಿರುವ ಸುಕೃತಿ ಇತರೆ ವಿಷಯಗಳಲ್ಲೂ 90ರಿಂದ 95ರವರೆಗೆ ಅಂಕಗಳನ್ನು ಪಡೆದಿದ್ದು, ಒಟ್ಟಾರೆ 600ಕ್ಕೆ 571 ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪೋಷಕರು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

- - -

ಶೇ.78 ಫಲಿತಾಂಶ ಪಡೆದ ಬಿಬಿಎಂಪಿ ಕಾಲೇಜುಗಳುಕನ್ನಡಪ್ರಭ ವಾರ್ತೆ ಬೆಂಗಳೂರುಬಿಬಿಎಂಪಿ ನಿರ್ವಹಣೆಯ 18 ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 2,427 ವಿದ್ಯಾರ್ಥಿಗಳ ಪೈಕಿ 1,889 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ. 78ರಷ್ಟು ಫಲಿತಾಂಶ ಪಡೆದುಕೊಂಡಿವೆ.ಕಳೆದ 2022-23ನೇ ಸಾಲಿನಲ್ಲಿ ಬಿಬಿಎಂಪಿ ಪಿಯು ಕಾಲೇಜು ಶೇ. 63.18ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಈ ವರ್ಷ ಶೇ. 15ರಷ್ಟು ಫಲಿತಾಂಶ ಹೆಚ್ಚಾಗಿ ಶೇ. 78ರಷ್ಟು ಬಂದಿದೆ. ಭೈರವೇಶ್ವರ ನಗರ ಪಿಯು ಕಾಲೇಜು ಶೇ.94.96ರಷ್ಟು ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದೆ. ಈ ಕಾಲೇಜಿನಿಂದ 29 ವಿದ್ಯಾರ್ಥಿಗಳು ಅತ್ಯನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಸ್ತೂರಬಾನಗರ ಪಿಯು ಕಾಲೇಜು ಶೇ.88.10ರಷ್ಟು ಫಲಿತಾಂಶ ಪಡೆದು ಎರಡನೇ ಸ್ಥಾನ, ಕಾವೇರಿಪುರ ಪಿಯು ಕಾಲೇಜು ಶೇ.87.69ರಷ್ಟು ಫಲಿತಾಂಶ ಪಡೆದು ಮೂರನೇ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ಒಟ್ಟು 227 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗ ತಿಳಿಸಿದೆ.- - -ಜೆ.ಎಸ್‌. ಕಾಲೇಜಿಗೆ ಶೇ.99.5 ಫಲಿತಾಂಶಬೆಂಗಳೂರು ದಕ್ಷಿಣ: ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 99.5 ಒಟ್ಟಾರೆ ಕಾಲೇಜು ಫಲಿತಾಂಶದೊಂದಿಗೆ 210 ಡಿಸ್ಟಿಂಕ್ಷನ್‌ಗಳೊಂದಿಗೆ 28 ರಾಜ್ಯ ಶ್ರೇಣಿಗಳನ್ನು ಪಡೆದುಕೊಂಡು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗುಂಟೆ ಸರ್ಕಲ್ ಬಳಿಯಿರುವ ಜೆ.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಸಿಬ್ಬಂದಿ ಹಾಗೂ ಪೋಷಕರ ನಿರಂತರ ಬೆಂಬಲ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಕಾರಣ ಎಂದು ಕಾಲೇಜಿನ ಅಧ್ಯಕ್ಷ ಪ್ರೊ. ಡಾ। ಎಸ್‌.ಜಯರಾಮ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

- - -

ಪಿಯುಸಿಯಲ್ಲಿ ಕೆ.ಆರ್‌.ಪುರಂ ಶ್ರೀ ವೆಂಕಟೇಶ್ವರ ಪಿಯು ಕಾಲೇಜ್‌ ಸಾಧನೆ1.ತೇಜಸ್ವಿನಿ ಬಿ. (96.33%)

2.ತಾಂಜೀಲಾ ಎಸ್. (96.33%)3.ನಂದಿತಾ ಪಿ. (96.17%)

4.ರೇವತಿ (96%)5.ನಿತಿನ್‌ ಕೆ.ಆರ್‌. (96%)

6.ಭಾಗ್ಯಲಕ್ಷ್ಮಿ ಆರ್‌. (95.17)7.ಹರ್ಷಾ ಎಸ್‌.ವೈ. (95%)

8.ವಿದ್ಯಾಶ್ರೀ ಎನ್‌. (94.83%)9.ಸುಮನ್‌ ಬಿ. (94.33%)

10.ತಸ್ಮಿಯಾ ಎಸ್‌.ಎ. (94.17%)11.ಆ್ಯಂಟನಿ ಕಾವ್ಯ (93.33%)

12.ಹರಿಣಿ ವಿ (92.83%)13.ನಿಷಾ ಎಸ್‌. (92.50%)

14.ಸಂದೀಪ್‌ ಕೆ. (92.33%)15.ರೂಪಾ ಯಾದವ್‌ (92.17%)

16.ದಿವ್ಯಾ ಕೆ. (92.17%)17.ದೀಪ್ತಿ ಕೆ. (92%)

18.ಚೇತನ್‌ ಎ. (92%)19.ಪಲ್ಲವಿ ಕೆ.ಎಚ್‌. (91.67%)

20.ಉಮರ್ ಫಾರೂಕ್‌ (91.67%)21.ಚೈತ್ರಾ ಆರ್‌. (91.50%)

22.ಲಿಖಿತಾ ಬಿ.ಜಿ. (91.17%)23.ಸ್ವಪ್ತಾ ಜಿ (91%)

24.ಸುರೇಂದ್ರ ಆರ್‌. (90.50%)25.ಹರ್ಷಿತ್‌ ಎಂ.ಬೋನ್‌ಸ್ಲೇ (90.33%)

26.ರೇಖಾ ಎಂ.ಆರ್‌. (90.17%)

Share this article