ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲಾ ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಮರಳೂರಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು
ನಾವು ಮಹರ್ಷಿ ವಾಲ್ಮೀಕಿ ವಂಶಸ್ಥರು. ಆದರ್ಶ ಸಮಾಜದ ಸಂದೇಶ ಸಾರಿದ ವಾಲ್ಮೀಕಿ ರಾಮಾಯಣವನ್ನು ಎಲ್ಲರೂ ಓದಬೇಕು. ಸುಮಾರು 390 ಭಾಷೆಗಳಲ್ಲಿ ರಾಮಾಯಣ ಇದೆ. ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿಯವರು ಬುದ್ಧ, ಗಾಂಧಿ, ಅಂಬೇಡ್ಕರ್ ಅವರಂತಹ ಮಹನೀಯರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ಪಕ್ಷ ಭೇದವನ್ನು ಮರೆತು, ನಾವೆಲ್ಲರೂ ಒಂದಾಗಿ ಮೀಸಲಾತಿ ಹಕ್ಕನ್ನು ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ನಾಯಕ ನೌಕರರ ಸಂಘದ ಅಧ್ಯಕ್ಷ ಕೆ.ಜಯರಾಮ್ ಕಠಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಎಲ್. ಗೀತಾಲಕ್ಷ್ಮಿ ವಿಶೇಷ ಉಪನ್ಯಾಸ ನೀಡಿದರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಟೂಡಾ ಆಯುಕ್ತ ಎಸ್.ಆರ್. ಉಮೇಶ್‌ಚಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೆ.ಎಸ್. ಮೃತ್ಯುಂಜಯ, ಡಾ.ಕೆ.ಆರ್. ರಾಜಕುಮಾರ್, ಕೆ.ಎನ್. ಗಂಗಾಧರ್, ಕೆಂಪರಾಮಯ್ಯ, ಸೀತರಾಮಯ್ಯ, ಶಂಕರಲಿಂಗಯ್ಯ, ಎಸ್. ನರಸಿಂಹರಾಜು, ಶಂಕರಲಿಂಗಯ್ಯ, ಉಮೇಶ್ ಎಸ್., ಷಡಕ್ಷರಯ್ಯ, ಡಾ. ಎಲ್.ಪಿ. ರಾಜು, ಬಿ.ಐ. ಹೇಮಾವತಿ, ವೀರಣ್ಣ, ಚಂದ್ರಶೇಖರ್, ಭಾವನ ಬಸವರಾಜ್, ಬಿ. ತಿಪ್ಪೇಸ್ವಾಮಿ, ಪ್ರೊ. ಮಾರಪ್ಪ, ಟಿ.ಎಂ. ವಿಜಯ್‌ಕುಮಾರ್, ಭೀಮಣ್ಣ, ಎಚ್.ಜಿ. ಪುರಷೋತ್ತಮ್ ಮೊದಲಾದವರು ಭಾಗವಹಿಸಿದ್ದರು.