ಎಂ.ಬಿ.ಪಾಟೀಲ ಯೋಜನೆಗಳಿಂದ ರೈತರಿಗೆ ಭದ್ರತೆ

KannadaprabhaNewsNetwork | Published : Oct 22, 2024 12:16 AM

ಸಾರಾಂಶ

ಸಚಿವ ಎಂ.ಬಿ.ಪಾಟೀಲ ಅವರ ನೀರಾವರಿ ಯೋಜನೆಗಳು ಕೃಷಿ ಮತ್ತು ರೈತರ ಬದುಕಿಗೆ ಭದ್ರತೆ ನೀಡಿವೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ‌ ಹೇಳಿದರು. ಬಬಲೇಶ್ವರ ಪಟ್ಟಣದಲ್ಲಿ‌ ಕೆ.ಆರ್.ಐ.ಡಿ.ಎಲ್ ವತಿಯಿಂದ ₹ 32 ಲಕ್ಷ ವೆಚ್ಚದಲ್ಲಿ ಮತ್ತು ಹೊಕ್ಕುಂಡಿಯಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ‌ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಮುಂಚೆ ಈ ಭಾಗದಲ್ಲಿನ ಜನ ಕುಡಿಯುವ ನೀರು ಕೇಳುತ್ತಿದ್ದರು. ಆದರೆ, ಈಗ ಸಕ್ಕರೆ ಕಾರ್ಖಾನೆ ಸ್ಪಾಪಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಸಚಿವ ಎಂ. ಬಿ.ಪಾಟೀಲರು ಕೈಗೊಂಡ ನೀರಾವರಿ‌ ಯೋಜನೆಗಳಿಂದಾಗಿ‌ ಈ ಭಾಗದಲ್ಲಿ ರೈತರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ಬಿಟ್ಟು ಕೃಷಿಯಲ್ಲಿ ಬದುಕು‌ ಕಟ್ಟಿಕೊಂಡಿದ್ದಾರೆ‌. ತಮ್ಮ ಜಮೀನುಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದಾಗಿ ಕೃಷಿ ಮತ್ತು ಅನ್ನದಾತರ ಬದುಕಿಗೆ ಭದ್ರತೆ ಸಿಕ್ಕಂತಾಗಿದೆ ಎಂದು ತಿಳಿಸಿದರು.ಈ ವೇಳೆ ಶಾಸಕರು ವಿದ್ಯಾರ್ಥಿಗಳಿಗೆ ನೋಟಬುಕ್ ವಿತರಿಸಿದರು. ಈ ಸಂದರ್ಭದಲ್ಲಿ‌ ಮುಖಂಡರಾದ ವಿ.ಎಸ್.ಪಾಟೀಲ, ಈರಗೊಂಡ ಬಿರಾದಾರ, ಬಿ.ಜಿ.ಬಿರಾದಾರ, ಡಾ.ಕೌಸರ್ ಅತ್ತಾರ, ಚನ್ನಪ್ಪ ಕೊಪ್ಪದ, ಮಲ್ಲು ಮರ್ಯಾಣಿ, ಜಿ.ಎಸ್.ಯರನಾಳ, ಅಕ್ಬರ್ ಗೋಕಾವಿ, ಹುದ್ದಾರ, ಜಂಗ್ಲಿಬಾಷಾ, ಮೈಬೂಬ ಮುಜಾವರ, ಹುಸೇನ ಅಪರಾಜ, ಗುರುರಾಜ ಜಂಗಮಶೆಟ್ಟಿ, ಸಿದರಾಯ ಆಡಿನ, ಪ.ಪಂ ಮುಖ್ಯಾಧಿಕಾರಿ ಆರ್.ಎಸ್.ಸೋಲಾಪುರ, ವೈ.ಎನ್.ಪಾಟೀಲ, ನಾಗರಾಜ ಕುಲಕರ್ಣಿ, ರಫೀಕ್‌ ಸೋನಾರ, ಗುರುರಾಜ ಜೈನಾಪೂರ, ಪದ್ಮೊಗಿ ಒಡೆಯರ, ರಾಮಪ್ಪ ತೇಲಿ, ಪರಸಪ್ಪ ವಾಲಿಕಾರ, ಡಿ.ಎಸ್.ಟಕ್ಕಳಕಿ, ಮಹೇಶ ಮಾಳಿ, ಮೈಬೂಬ ಮುಲ್ಲಾ, ಶಂಕರಗೌಡ ಹಲಗಣಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ಪಿಡಿಒ ಭಾರತಿ ಹಿರೇಮಠ ಮುಂತಾದವರು ಇದ್ದರು.

Share this article