- ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್‌ಗಳನ್ನು ನಾಶಪಡಿಸುವ ಸಲುವಾಗಿ ಚಾಲಕರ ತಪಾಸಣೆ
- ಎಸ್ಪಿ ಸೂಚನೆ; ಸಂಚಾರಿ ಠಾಣೆ ಪೊಲೀಸರಿಂದ ಶುಕ್ರವಾರ, ಶನಿವಾರ ಜಾಗೃತಿ
- ಫೆ.23, 24 ರಂದು ಹೆಲ್ಮೆಟ್ ವಿಶೇಷ ಕಾರ್ಯಾಚರಣೆ: ಜಿಲ್ಲಾ ಪೊಲೀಸ್ ಮಾಹಿತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದಲ್ಲಿ ಸಂಚಾರ ಪೊಲೀಸರು ಶುಕ್ರವಾರ, ಶನಿವಾರ ಗುಣಮಟ್ಟವಲ್ಲದ, ಪ್ಲಾಸ್ಟಿಕ್ ಹೆಲ್ಮೆಟ್, ಅರ್ಧ ಹೆಲ್ಮೆಟ್ ತಪಾಸಣೆ ಕಾರ್ಯಾಚರಣೆ ನಡೆಸಿ, ಚಾಲಕರಿಂದ ಸುರಕ್ಷಿತವಲ್ಲದ ಸಾವಿರಾರು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡರು. ಅಲ್ಲದೇ, ಗುಣಮಟ್ಟದ ಐಎಸ್‌ಐ ಹೆಲ್ಮೆಟ್‌ಗಳನ್ನೇ ಧರಿಸಿ ದ್ವಿಚಕ್ರ ವಾಹನಗಳ ಚಲಾಯಿಸುವಂತೆ ಜನಜಾಗೃತಿ ಮೂಡಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ್, ಜಿ. ಮಂಜುನಾಥ, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚಣೆ ನಡೆಯಿತು.
ಎರಡು ದಿನಗಳಲ್ಲಿ ಸುಮಾರು 2 ಸಾವಿರ ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್‌ಗಳನ್ನು ನಾಶಪಡಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು. ಕೇವಲ ಈ ಬಾರಿ ಐಎಸ್‌ಐ ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ತಂದು ಹಾಕಿಕೊಂಡವರಿಗೆ ಹಾಗೂ ಪ್ಲಾಸ್ಟಿಕ್ ಹೆಲ್ಮೆಟ್/ಅರ್ಧ ಹೆಲ್ಮೆಟ್ ಅನ್ನು ಅರಿತುಕೊಂಡು ವಶಕ್ಕೆ ನೀಡಿದವರಿಗೆ ಮಾತ್ರ ದಂಡ ವಿಧಿಸದೇ ತಿಳಿವಳಿಕೆ ನೀಡಿ ಕಳುಹಿಸಲಾಯಿತು.
- - - -22ಕೆಡಿವಿಜಿ40, 41: