ಕನ್ನಡಪ್ರಭ ವಾರ್ತೆ ಮಂಡ್ಯ
ಪೂರ್ವ ಮುಂಬೈನ ಅಂಥೇರಿಯ ಎಂಐಡಿಸಿ ಕ್ಸೈಲೋ ಹಾಲ್‌ನಲ್ಲಿ ನಡೆದ 1ನೇ ರಾಷ್ಟ್ರೀಯ ಗೋಜರ್ಯೋ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ನಮ್ಮ ಶಾಲೆ ಮಕ್ಕಳು ಚಿನ್ನ, ಕಂಚಿನ ಪದಕ ಪಡೆದು ಏಷ್ಯನ್ ಗೋಜುರ್ಯು ಕರಾಟೆ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ ಎಂದು ಕರಾಟೆ ತರಬೇತಿದಾರ ಶಿಹಾನ್ ಡಾ.ವಿನಯ್ ಕುಮಾರ್ ಹೇಳಿದರು.ನಗರದ ಸ್ವರ್ಣಸಂದ್ರ ಬಡಾವಣೆಯ ಓಕಿನವ ಬುಡಕಾಯ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಕರಾಟೆ ತರಬೇತಿ ಶಾಲೆಯಲ್ಲಿ ಮಾತನಾಡಿ, ಏ.28ರಿಂದ ಏ.30ರವರೆಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳಾದ ಆರ್.ಭಾವಿಶ್ 1 ಚಿನ್ನ ಪದಕ, ಕೆ.ಲಿಕಿತ್ ಮತ್ತು ಮೋಹನ್‌ರಾವ್ ತಲಾ 1 ಕಂಚಿನ ಪದಕ ಪಡೆದು ಕೀರ್ತಿ ತಂದಿದ್ದಾರೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಕರಾಟೆ ತರಬೇತಿ ಪಡೆದು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಓದುವುದ ಜೊತೆಗೆ ಸೃಜನಾತ್ಮಕ ಕಲೆ ಕರಾಟೆ ತರಬೇತಿ ಪಡೆದ ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರಿಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.ದೊಡ್ಡ ಮಟ್ಟದ ಸ್ಪರ್ಧೆಯಲ್ಲಿ ಭಾಗವಯಿಸಿ ಇದೇ ಪ್ರಥಮ ಭಾರಿಗೆ ಜಿಲ್ಲೆಗೆ ಕರಾಟೆ ಭಾಗದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಇವರು ಜೂ.7ರಿಂದ 9ರವರೆಗೆ ಪುಣೆಯಲ್ಲಿ ನಡೆಯುವ ಏಷ್ಯನ್ ಗೋಜುರ್ಯು ಕರಾಟೆ ಚಾಂಪಿಯನ್‌ಶಿಪಿಗೆ ಆಯ್ಕೆಯಾಗಿ ಕರ್ನಾಟಕದಿಂದ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಕಂಚಿನ ಪದಕ, ಪ್ರಮಾಣ ಪತ್ರಗಳನ್ನು ವಿತರಿಸಿ, ಅಭಿನಂದಿಸಿದರು.ಸಾರಿಗೆ ಬಸ್ ನಿರ್ವಾಹಕ, ಚಾಲಕರಿಗೆ ಸಾರ್ವಜನಿಕರ ಅಭಿನಂದನೆ
ಮಳವಳ್ಳಿ:ಮೈಸೂರಿನಿಂದ ಮಳವಳ್ಳಿಗೆ ಬರುವಾಗ ಕೆಎಸ್ಆರ್ ಟಿಸಿ ಬಸ್ ನಲ್ಲಿ ಸಿಕ್ಕಿದ್ದ 8 ಗ್ರಾಂ ಚಿನ್ನದ ಓಲೆಯನ್ನು ಸಾರಿಗೆ ಬಸ್ ನಿರ್ವಾಹಕ ಪಿ.ಎಚ್.ಅನಂತಸ್ವಾಮಿ ಹಾಗೂ ಚಾಲಕ ಎಂ.ಟಿ.ಆನಂದ್ ವಾರಸುದಾರರಿಗೆ ವಾಪಸ್ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಹಿನ್ನೆಲೆಯಲ್ಲಿ ಅಭಿನಂದಿಸಲಾಯಿತು.ಪಟ್ಟಣದ ಗಂಗಾಮತಸ್ಥರ ಬೀದಿಯ ಆಶಾ ಮೈಸೂರಿಗೆ ಹೋಗಿ ವಾಪಸ್ ಕೆಎ-11 ಎಫ್-0225 ಬಸ್‌ನಲ್ಲಿ ಮಳವಳ್ಳಿಗೆ ಬರುವಾಗ ನಮ್ಮ ಕೈಚೀಲವನ್ನು ಬಿಟ್ಟು ಹೋಗಿದ್ದರು. ಬ್ಯಾಗ್ ನನ್ನು ಗಮನಿಸಿದ ಚಾಲಕ ಮತ್ತು ನಿರ್ವಾಹಕ ಪರಿಶೀಲಿಸಿದಾಗ ಚಿನ್ನದ ಓಲೆ ಮತ್ತು 2 ಸಾವಿರ ನಗದು ಪತ್ತೆಯಾಗಿತ್ತು. ಅಲ್ಲದೇ, ಗುರುತಿನ ಚೀಟಿ ಸಹ ಸಿಕ್ಕಿತ್ತು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ವಾರಸುದಾರರಾದ ಆಶಾ ಅವರಿಗೆ ಬ್ಯಾಗ್ ನನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಿರ್ವಾಹಕ ಹಾಗೂ ಚಾಲಕ ವಾಪಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿರ್ವಾಹಕ ಹಾಗೂ ಚಾಲಕನ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದರು.