ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಜರಬಾದ್ ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸೆಸ್ಕ್‌ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ವಿಭಾಗದಿಂದ ಒಟ್ಟು 729 ಕ್ರೀಡಾಪಟುಗಳು ಭಾಗವಹಿಸಿದ್ದು, ಇವರಲ್ಲಿ 611 ಪುರುಷರು ಹಾಗೂ 118 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೇರಂ, ಬ್ಯಾಸ್ಕೆಟ್ ಬಾಲ್, ಈಜು, ವಾಲಿಬಾಲ್, ಚೆಸ್, ಟೆಬಲ್ ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಸ್ನೂಕರ್, ಯೋಗ, ಹಾಕಿ, ಟೆಬಲ್ ಟೆನ್ನಿಸ್, ಫುಟ್ ಬಾಲ್, ಕಬಡ್ಡಿ, ಲಾನ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ದೇಹದಾರ್ಡ್ಯ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಯಿತು. ಈ ಎಲ್ಲಾ ಕ್ರೀಡೆಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆಯಿತು.ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸೆಸ್ಕ್ ಮುಖ್ಯ ಎಂಜಿನಿಯರ್ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಮೃತ್ಯುಂಜಯ ಹಾಗೂ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ ಅವರು, ನಿಗಮ ಮಟ್ಟದ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ಸೆಸ್ಕ್ ಕ್ರೀಡಾ ಸಮಿತಿ ಕೋಶಾಧ್ಯಕ್ಷ ಪರಮೇಶ್ವರ್, ನೌಕರರ ಸಂಘದ ಉಪಾಧ್ಯಕ್ಷರಾದ ಸಂದೀಪ್, ಮಹೇಶ್, ಡಿಪ್ಲೊಮಾ ಎಂಜಿನಿಯರ್ಸ್ ಸಂಘದ ಉಪಾಧ್ಯಕ್ಷ ರವಿಲಿಂಗಪ್ಪ, ಕವಿಮಂ ಪಜಾ/ ಪವ ವರ್ಗಗಳ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ನಿಗಮ ಕ್ರೀಡಾ ಕಾರ್ಯದರ್ಶಿ ಎಂ.ಎ. ಮಂಜುನಾಥ್, ನೌಕರರ ಸಂಘ(659), ಕೆಪಿಟಿಸಿಎಲ್‌ಲೆಕ್ಕಾಧಿಕಾರಿಗಳ ಸಂಘದ ಕಲ್ಯಾಣ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ, ಸ್ಥಳೀಯ ಸಮಿತಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಇದ್ದರು.