ಕನ್ನಡಪ್ರಭ ವಾರ್ತೆ ಮಂಡ್ಯ
ಮಾಂಡವ್ಯ ಇಂಟಿಗ್ರೆಟೆಡ್ ಪದವಿ ಪೂರ್ವ ವತಿಯಿಂದ ನಗರದ ಎಸ್.ಬಿ.ಸಮುದಾಯ ಭವನದಲ್ಲಿ ನಡೆದ ಹಿರಿಯ-ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳುವಂತೆ ವಿದ್ಯಾರ್ಥಿಗಳು ಕನಸು ಕಾಣಬೇಕು. ಮತ್ತೆ ಅದನ್ನು ನನಸು ಮಾಡಲು ಕಠಿಣ ಶ್ರಮಪಡಬೇಕು ಎಂದು ಉದಾಹರಣೆ ಸಮೇತ ವಿವರಿಸಿದರು.
ವಿಜ್ಞಾನ ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುತ್ತೀರಿ. ಅಂತಹ ಸಾಧನೆಗೆ ಬಹು ಮುಖ್ಯವಾಗಿ ಡಾ.ದೇವಿಶೆಟ್ಟಿ, ಡಾ.ಜವಳಿ, ಡಾ. ಮಂಜುನಾಥ್ ಅವರಂತಹ ಸಾಧಕರ ಆದರ್ಶಗಳನ್ನು ಸ್ಫೂರ್ತಿಯಾಗಿಸಿಕೊಳ್ಳಬೇಕು. ಅವರಂತೆ ನಾವೂ ಸಾಧಕರಾಗಿ ಹೊರಹೊಮ್ಮುವಂತೆ ಕಿವಿಮಾತು ಹೇಳಿದರು.ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಶಿಕ್ಷಣ ಎಂದರೆ ಒಳ್ಳೆಯ ನಡೆ-ನುಡಿಯನ್ನು ಹೇಳಿಕೊಡುವಂತಹುದ್ದು. ಬುದ್ದಿಯನ್ನು ಬಗ್ಗಿಸುವಂತಹುದ್ದು. ಮನೆಯಲ್ಲಿರುವ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲವನ್ನೂ ಕಲಿಯುತ್ತಾರೆ. ಇದು ಶಿಕ್ಷಣದ ಪ್ರಭಾವವಾಗಿದೆ ಎಂದರು.
ಮಕ್ಕಳು ಮಾನವರಾಗಿ, ನಾಗರೀಕರಾಗಿ, ಇನ್ನೊಬ್ಬರೊಡನೆ ಸ್ನೇಹ, ಗೌರವದಿಂದ ವರ್ತಿಸುವಂತಹ ಜ್ಞಾನವನ್ನು ಪಡೆಯುವುದು ಶಿಕ್ಷಣ. ಪ್ರತಿಯೊಬ್ಬರನ್ನು ಉದ್ಯಮಶೀಲರನ್ನಾಗಿ ಮಾಡುವುದೇ ಶಿಕ್ಷಣ. ಜೊತೆಗೆ ಮಾನವ ಸಾಮರ್ಥ್ಯವನ್ನು ಸೇರಿಸುವಂತಹುದ್ದಾಗಿದೆ ಎಂದರು.ಎಸ್.ಬಿ.ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಹರಳಹಳ್ಳಿ ಕಾಲೇಜಿನ ಪ್ರಾಂಶುಪಾಲ ಸಿ. ಕುಮಾರ, ಮಾಂಡವ್ಯ ಇಂಟಿಗ್ರೇಟೆಡ್ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಪಾಲುದಾರ ಎಂ.ಅವಿನಾಶ್, ಡಿ.ಎಸ್.ರಾಘವೇಂದ್ರ, ಕಾಲೇಜಿನ ಪ್ರಾಂಶುಪಾಲ ಕೆ.ಕೆ. ಚಂದ್ರಶೇಖರ್, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೋಹನ್, ಎಂ.ಎಸ್. ಅರ್ಚನಾ, ಪಿ.ಚನ್ನೇಶ್ ಇತರರಿದ್ದರು.