ಸುಂಟಿಕೊಪ್ಪ: ಸ್ವ ಉದ್ಯೋಗ ಮಾಹಿತಿ ಕಾಯಾಗಾರ

KannadaprabhaNewsNetwork |  
Published : Jun 18, 2025, 11:48 PM IST
ಚಿತ್ರ.1: ಹಿರಿಯರಿಂದ ಮಕ್ಕಳಿಗೆ ಕೈ ತುತ್ತು ನೀಡುತ್ತಿರುವುದು. | Kannada Prabha

ಸಾರಾಂಶ

ಪುಟ್ಟ ಮಕ್ಕಳಿಗೆ ಅಜ್ಜಿಯ ಕೈ ತುತ್ತು ಮತ್ತು ಸ್ವ ಉದ್ಯೋಗದ ಕುರಿತು ಕಾನ್‌ಬೈಲ್‌ ವಿಭಾಗದ ಶ್ರೀ ಕ್ಷೇತ್ರ ಧ. ಗ್ರಾ. ಯೋ. ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಕಾವೇರಿ ಜ್ಞಾನ ವಿಕಾಸ ಕೇಂದ್ರ ಹಾಗೂ ಭೂಮಿಕ ಸ್ವಸಹಾಯ ಸಂಘ ಸಂಯುಕ್ತಾಶ್ರಯದಲ್ಲಿ ಪುಟ್ಟ ಮಕ್ಕಳಿಗೆ ಅಜ್ಜಿಯ ಕೈ ತುತ್ತು ಸ್ವ ಉದ್ಯೋಗದ ಕುರಿತು ಕಾನ್‌ಬೈಲ್ ವಿಭಾಗದ ಶ್ರೀ ಕ್ಷೇ. ಧ.ಗ್ರಾ.ಯೋ. ಸ್ವ ಸಹಾಯ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರ ನೀಡಲಾಯಿತು.

ಭಾನುವಾರ ಮಂಜಿಕೇರೆ ಸಮುದಾಯ ಭವನದಲ್ಲಿ ಕಾನ್‌ಬೈಲ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಕಾನ್‌ಬೈಲ್ ಕಾರ್ಯಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಸ್ವ ಸಹಾಯ ಸಂಘದ ಪದಾಧಿಕಾರಿಗಳ ಮಕ್ಕಳಿಗೆ ಅಜ್ಜಿಯಂದಿರ ಕೈ ತುತ್ತು ಎಂಬ ವಿನೂತನ ಕಾರ್ಯಕ್ರಮದಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹಿಂದಿನ ಕಾಲದ ಆಚಾರ ವಿಚಾರ ವೈಚಾರಿಕತೆಯು ಮರೆಯಾಗುತ್ತಿದೆ. ಮಕ್ಕಳಿಗೆ ಹಿರಿಯರೊಂದಿಗೆ ಇರಬೇಕಾದ ಗೌರವ, ಪ್ರೀತಿ, ಅನೋನ್ಯತೆ, ವಾತ್ಸಲ್ಯತೆಯು ಕುಂಠಿತಗೊಳ್ಳುತ್ತಿರುವುದು ಸೋಜಿಗದ ವಿಚಾರವಾಗಿದೆ. ಇದನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಅಜ್ಜಿಯ ಕೈ ತುತ್ತು ಎಂಬ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಹಿರಿಯರ ಸಂಬಂಧಗಳನ್ನು ಗಟ್ಟಿಗೊಳಿಸುವ ಇರಾದೆ ಹೊಂದಲಾಗಿದೆ ಎಂದು ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಾಲಿನಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಮಾಲಿನಿ ಅವರು, ಇಂದಿನ ದಿನಗಳಲ್ಲಿ ನಾವು ಸ್ವ ಉದ್ಯೋಗವನ್ನು ಕಲಿತುಕೊಳ್ಳುವುದರಿಂದ ನಮ್ಮ ವೈಯಕ್ತಿಕ ಜೀವನವು ಸುಭದ್ರ ಜೀವನವಾಗಿ ನಿರ್ವಹಿಸಬಹುದು. ತಮ್ಮ ಕುಟುಂಬಗಳ ನಿರ್ವಹಣೆಗೂ ಸ್ವ ಉದ್ಯೋಗ ಸಹಕಾರಿಯಾಗಲಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಭೂಮಿಕ ತಂಡದ ಸದಸ್ಯೆ ಪೂವಮ್ಮ ವಹಿಸಿದ್ದರು. ಗ್ರಾಮದ ಹಿರಿಯರಿಂದ ಮಕ್ಕಳಿಗೆ ಕೈ ತುತ್ತು ನೀಡಲಾಯಿತು. ಕಾನ್‌ಬೈಲ್ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಾದ ಜನನಿ, ಭೂಮಿಕ, ಕನ್ನಿಕ, ಭಗವತಿ ಹಾಗೂ ದೃತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಮೊದಲಿಗೆ ಅಜಿರ ಸ್ವಾಗತಿಸಿ, ಶೋಭಾ ವಂದಿಸಿದರು. ಸಮಾರಂಭದ ವೇದಿಕೆಯಲ್ಲಿ ಕಾನ್‌ಬೈಲ್ ವ್ಯಾಪ್ತಿಯ ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ