ಕನ್ನಡಪ್ರಭ ವಾರ್ತೆ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘ ಶತಾಯುಷಿ ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿ ನಿಮಿತ್ತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ `ಶ್ರಮಿಕ ಮಹಿಳೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮನೆಯಲ್ಲಿ ಗಂಡ ಹೇಳಿದಂತೆ ಕೇಳಿಕೊಂಡು ಹೊರಪ್ರಪಂಚದ ಅರಿವಿಲ್ಲದೆ ಇರುವ ಗೃಹಲಕ್ಷ್ಮೀ ಎಂದು ಕರೆಯಿಸಿಕೊಳ್ಳುವುದಕ್ಕಿಂತ ಮಹಿಳೆ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವುದು ಶ್ರೇಷ್ಠವಾದದ್ದು. ಇಂದು ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಗೆ ಮೀಸಲಾತಿ ಇದೆ. ಆದರೆ, ಆ ಮೀಸಲಾತಿ ಅಧಿಕಾರ ಕೇವಲ ಅಧಿಕಾರ ನಿರ್ವಹಣೆ ಮಾಡುವುದಾಗಿದೆಯೇ ವಿನಃ ಕಾನೂನು ಮಾಡುವ ಅಧಿಕಾರ ಹೊಂದಿರುವುದಿಲ್ಲ. ಯಾವಾಗ ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಗೆ ಮೀಸಲಾತಿ ನೀಡಿ ಅವಳು ಕಾನೂನನ್ನು ಮಾಡುವ ಅಧಿಕಾರ ಹೊಂದುತ್ತಾಳೊ ಆವಾಗ ಮಹಿಳೆ ನಿಜವಾದ ಸದ್ಗತಿಯಾಗುವಳು ಎಂದರು.ಮಹಿಳಾ ದಿನಾಚರಣೆಯನ್ನು ಸೌಂದರ್ಯ ಸ್ಪರ್ಧೆ, ರಂಗೋಲಿ ಸ್ಪರ್ಧೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಣೆ ಮಾಡದೇ ಹೆಣ್ಣು ಮಕ್ಕಳಲ್ಲಿ ಪ್ರಜ್ಞೆ ಮೂಡಿಸುವಂತೆ ವಿಚಾರ ಸಂಕಿರಣಗಳನ್ನು, ಚರ್ಚೆಗಳನ್ನು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು. ಮಹಿಳೆ ಸ್ವಾವಲಂಬನೆ ಎನ್ನುವುದು ಅವಳ ಆರ್ಥಿಕ ಅವಲಂಬನೆ ಮೇಲೆ ನಿಂತಿದೆ. ಸಂಪೂರ್ಣ ಸ್ವಾವಲಂಬನೆ ಸಿಗಬೇಕೆಂದರೆ ಸಾಮಾಜಿಕ ಸ್ವಾತಂತ್ರ್ಯ ಇರಬೇಕು. ಆಗ ಮಹಿಳೆ ನಿರ್ಭಯದಿಂದ ಜೀವನ ಸಾಗಿಸಲು ಸಾಧ್ಯವಾಗುವುದು ಎಂದರು.
ಎಸ್.ಎಂ. ರಾಚಯ್ಯನವರ ಗೌರಮ್ಮ ಹಲಗತ್ತಿಯವರ ಕುರಿತು ಸ್ವರಚಿತ ಕವನ ವಾಚಿಸಿದರು. ಸತೀಶ ತುರಮರಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ಸನ್ಮಾನಿತರನ್ನು ಪರಿಚಯಿಸಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.