ದೇಶದ ಅಭಿವೃದ್ಧಿಗೆ ಸ್ವಾವಲಂಬಿ ತಂತ್ರಜ್ಞಾನ ಅವಶ್ಯಕ: ಡಾ.ಶಿವಪ್ರಸಾದ

KannadaprabhaNewsNetwork |  
Published : Sep 22, 2025, 01:02 AM IST
(ಫೋಟೊ 20ಬಿಕೆಟಿ11, ಪ್ರೋ.ಎನ್.ಜಿ ಕರೂರ ಬಿವಿವಿ ಎಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ) | Kannada Prabha

ಸಾರಾಂಶ

ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಬಿವಿವಿಎಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ಅಭಿವೃದ್ಧಿಗೆ ಸ್ವಾವಲಂಬಿ ತಂತ್ರಜ್ಞಾನ ಅವಶ್ಯಕತೆ ಇದೆ. ಶಿಕ್ಷಕರು ಮುಂದಿನ ಪಿಳಿಗೆ ಗಮದಲ್ಲಿಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಧಾರವಾಡದ ಐಐಟಿಯ ಡೀನ್‌ ಡಾ.ಶಿವಪ್ರಸಾದ ಹೇಳಿದರು.ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಂಡ ಬಿವಿವಿಎಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮುಂದಿನ 20 ವರ್ಷಗಳ ತಂತ್ರಜ್ಞಾನ ತುಂಬಾನೆ ಬದಲಾವಣೆಗೊಳ್ಳುವ ಸಾಧ್ಯತೆ ಇದೆ, ಮಾನವ ಇಲ್ಲದೆ ರೋಬೋಟ್‌ ಗಳ ಮೂಲಕ ಕೆಲಸ ಮಾಡುವ ಕಾರ್ಯ ಪ್ರಾರಂಭಗೊಂಡಿರುವ ಇಂತಹ ಸನ್ನಿವೇಶದಲ್ಲಿ ನಾವುಗಳ ಯಾವ ರೀತಿ ಬದಲಾವಣೆಗೊಳ್ಳಬೇಕು, ತಂತ್ರಜ್ಞಾನದ ಉಪಯೋಗ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಮೊದಲು ಶಿಕ್ಷಕರು ಅರಿಯಬೇಕಿದೆ. ನಮ್ಮನ್ನು ಅರಿತುಕೊಳ್ಳುವ ಮೂಲಕ ಹೊಸ ಹೊಸ ಸಂಶೋಧನಾ ಅಧ್ಯಯನಗಳ ಮೂಲಕ ನಮ್ಮನ್ನು ಅರಿತು ಮಕ್ಕಳಿಗೆ ಬೋಧನೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಬಿ.ವಿ.ವಿ. ಸಂಘದಲ್ಲಿ ಉತ್ತಮ ಶಿಕ್ಷಕರ ಕಾರ್ಯ ಪಡೆ ಇದೆ. ಇಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಸತ್ಕರಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯಾಗಿದೆ. ಇಂಥ ಪ್ರತಿಭಾವಂತ ಶಿಕ್ಷಕರ ಸಮೂಹದಿಂದ ಸಂಸ್ಥೆಗೆ ಒಂದು ಹೆಸರು ಬಂದಿದೆ ಎಂದರು.

ಹ್ಯುಮನ್ ಮೈಂಡ್ ಸೆಟ್ ಕೋಚ್ ರಾದ ಮಹೇಶ ಮಾಶ್ಯಾಳ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಜೋತೆ ಸಂಪರ್ಕಕ್ಕಿಂತ ಗುರು ಶಿಷ್ಯರು ಎಂಬ ಸಂಬಂಧ ಬೆಳೆಸಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ, ಈ ಸಂಬಂಧ ಬೆಳೆಯಲು ವಾದಕ್ಕಿಂತ ಸಂವಾದ ಅಗತ್ಯ ಎಂದು ಹೇಳಿದರು.

ಮೇಜರ್.ಸಿ.ಎಸ್.ಆನಂದ ಮಾತನಾಡಿ, ಬದುಕಿನಲ್ಲಿ ಜಿಜ್ಞಾಸೆ ಅವಶ್ಯವಾಗಿದೆ. ಶಿಕ್ಷಣ ನೀಡುವ ಶಿಕ್ಷಕ ವೃತ್ತಿಯಲ್ಲ ಅದೊಂದು ತಪಸ್ಸ. ಆ ತಪಸ್ಸು ನಮ್ಮ ಬೆಳವಣಿಗೆ ಹೆಚ್ಚಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿದರು. ಸಂಘದ ಆಡಳಿತಾಧೀಕಾರಿ ವಿ.ಆರ್.ಶಿರೋಳ ಸ್ವಾಗತಿ ಪ್ರಸ್ತಾವಿಕ ಮಾತನಾಡಿದರು, ಸಂಘದ ಪ್ರಸಾರರಂಗದ ನಿರ್ದೇಶಕರಾದ ಪಿ.ಎನ್.ಶಿಂಪಿ ವಂದಿಸಿದರು.ಸಂಘ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಿ.ವಿ.ವಿ.ಸಂಘದ ಪ್ರೌಢಶಾಲೆಗಳ ಆಡಳಿತ ಮಂಡಳಿ ಮತ್ತು ವಿಸ್ತಾರ ಜಿಂದಗಿ ಇವರ ಸಹಯೋಗದೊಂದಿಗೆ ಸ್ಮೈಲ್ ಟೀಚರ್‌ ಆನ್‌ಲೈನ್‌ ಬೋಧನಾ ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ ವಿಸ್ತಾರ ಜಿಂದಗಿ ಪ್ರಶಸ್ತಿ ಪತ್ರಗಳ ಪ್ರದಾನ ಮಾಡಲಾಯಿತು.

ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ, ಮಲ್ಲಿಕಾರ್ಜುನ ಸಾಸನೂರ, ಸಿದ್ದರಾಮ ಮನಹಳ್ಳಿ. ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಬಿ.ಆರ್.ಬೋಳಿಶೆಟ್ಟಿ ಸೇರಿದಂತೆ ವಿವಿದ ಮಹಾವಿದ್ಯಾಲಯಗಳಿಂದ ಶಿಕ್ಷಕರು ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ: 2023-24 ನೇ ಸಾಲೀನ ಪ್ರೋ.ಎನ್.ಜಿ ಕರೂರ ಬಿವಿವಿ ಎಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ವಿಭಾಗದಲ್ಲಿ ಮುಧೋಳ ಆರ್.ಎಂ.ಜಿ ಪ್ರೌಡಶಾಲೆ ವಿಜ್ಞಾನ ವಿಭಾಗದ ಸಹ ಶಿಕ್ಷಕ ಎಸ್.ವಿ ಗುಳಬಾಳ. ಪದವಿ ಕಾಲೇಜು ಶಿಕ್ಷಣ ವಿಭಾಗದಲ್ಲಿ ಬಿವಿವಿಎಸ್ ಇನ್ಸ್ಟಿಟ್ಯೂಟ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಜ್‌ (ಎಂ.ಬಿ.ಎ) ನಿರ್ದೇಶಕ ಡಾ.ಪ್ರಕಾಶ ವಡವಡಗಿ. ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ಪಿ.ಎಂ.ಎನ್.ಎಂ.ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರೊ.ಡಾ.ಕಾಶಿನಾಥ ಅರಬ್ಬಿ, ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಬಸವೇಶ್ವರ ಎಂಜಿನಿಯರಂಗ್ ಕಾಲೇಜು ಸಂಯೋಜಿತ ಪ್ರಾಧ್ಯಾಪಕ ಡಾ.ಪಾಂಡುರಂಗ ಕುಲಕರ್ಣಿ ಹಾಗೂ 2024-25 ನೇ ಸಾಲೀನ ಪ್ರೊ.ಎನ್.ಜಿ. ಕರೂರ ಬಿವಿವಿಎಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವಿಭಾಗದಲ್ಲಿ ಬಸವೇಶ್ವರ ಇಂಟರನ್ಯಾಷನಲ್ ಪಬ್ಲಿಕ್‌ ಸ್ಕೂಲ್ ಸಹ ಶಿಕ್ಷಕಿ ಅಂಜುಮ್ ಎಂ.ಸಿದ್ದಿಕ್, ಪದವಿ ಕಾಲೇಜು ಶಿಕ್ಷಣ ವಿಭಾಗದಲ್ಲಿ ಬಸವೇಶ್ವರ ಪ.ಪೂ.ವಿಜ್ಞಾನ ಕಾಲೇಜಿ ಪ್ರಾಧ್ಯಾಪಕ ಡಾ.ನಾಗರಾಜ ಬೇವಿನಹಳ್ಳಿ, ವೈದ್ಯಕಿಯ ಶಿಕ್ಷಣ ವಿಭಾಗದಲ್ಲಿ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವೈ. ಶ್ರೀನಿವಾಸ. ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಬಿಡದಿಯ ಅಮೃತ ಇಂಜಿನಿಯರಿಂಗ್‌ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಅನಿತಾ ಎಸ್. ಅವರಿಗೆ ಪ್ರಶಸ್ತಿ ಲಭಿಸಿದೆ. ಡಾ.ಗುರುಲಿಂಗ ಕಾಪಸೆ ಬಿವಿವಿಎಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು : 2023-24 ನೇ ಸಾಲೀನ ಪದವಿ ಶಿಕ್ಷಣ ಕಲಾ ವಿಭಾಗ ಬಸವೇಶ್ವರ ಸ್ವತಂತ್ರ ಪ.ಪೂ. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರಾದ ಮಹಾಂತೇಶ ಕಟಗೇರಿ, 2024-25ನೇ ಸಾಲಿನಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಧ್ಯಾಪಕರಾದ ಮೋನಪ್ಪ ಬಡಿಗೇರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ