ಹುಣಸಗಿ: ವಿದ್ಯಾರ್ಥಿ ದಿಸೆಯಲ್ಲಿಯೇ ಸ್ವಯಂ ಸೇವಾ ಗುಣಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕಿದೆ ಎಂದು ಪ್ರಾಚಾರ್ಯ ಎಸ್. ಎಂ. ಕಿರಣಗಿ ಹೇಳಿದರು.
ಸಮುದಾಯದ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿಕೊಳ್ಳಲು ಸೇವಾ ಯೋಜನೆ ಸಾರ್ಥಕವಾಗಿದೆ. ಸಮಾಜದಲ್ಲಿ ಸಾಮಾಜಿಕ ಜವಾಬ್ದಾರಿ, ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಲು ಸೇವಾ ಕಾರ್ಯವು ಸಹಕಾರಿಯಾಗಿದೆ ಎಂದರು.ಉಪನ್ಯಾಸಕ ಬಸವರಾಜ ಹುಣಸಗಿ ಮಾತನಾಡಿ, ಸೇವಾ ಕಡೆಗೆ ವಿದ್ಯಾರ್ಥಿಗಳ ಮನಸ್ಸು ಒಲಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಸಾಮಾಜಿಕ ಕೆಲಸದಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣಗಳು ಹಾಗೂ ಜನಾಭಿವೃದ್ಧಿಗೆ ಪುಷ್ಠಿ ಸಿಕ್ಕಂತಾಗುತ್ತದೆ. ಹೀಗಾಗಿ ಶಿಕ್ಷಣದ ಜತೆಗೂ ವಿದ್ಯಾರ್ಥಿಗಳು ಸೇವಾ ಕಾರ್ಯ ಚಟುವಟಿಕೆಯತ್ತಾ ಸಾಗಬೇಕಿದೆ ಎಂದರು.ಬಿಸಿಎಂ ವಸತಿ ಮೇಲ್ವಿಚಾರಕ ನಾಗರಾಜ, ಶರಣಕುಮಾರ, ತಿರುಪತಿ, ರೇಣುಕಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.