ಗಜೇಂದ್ರಗಡ: ರಾಜ್ಯದಲ್ಲಿ ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯು ಯುವ ಮತದಾರರು ಹಾಗೂ ಸಾರ್ವಜನಿಕರ ಗಮನ ಸೆಳೆಯಲು ಪಟ್ಟಣದಲ್ಲಿ ತೆರೆದಿರುವ ಸೆಲ್ಫಿ ಪಾಯಿಂಟ್‌ಗಳು ಯುವ ಸಮೂಹದ ಜತೆಗೆ ಮಹಿಳೆಯರನ್ನು ಆಕರ್ಷಿಸುತ್ತಿವೆ.
ಸೆಲ್ಪಿ ಪಾಯಿಂಟ್‌ನಲ್ಲಿ ಮಾಹಿತಿ: ಸೆಲ್ಪಿ ಪಾಯಿಂಟ್ ಪ್ರೆಮ್ ಅಲ್ಲಿ ಚುನಾವಣಾ ಪರ್ವ, ದೇಶದ ಗರ್ವ, ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ, ಮೈ ವೋಟ್ ಕೌಂಟ್ಸ್, ಮೇ ೭ಕ್ಕೆ ನಾನು ಮತದಾನ ಮಾಡುವೆ, ಹೀಗೆ ಹತ್ತಾರು ಮಾಹಿತಿ ಒಳಗೊಂಡಿದೆ. ಮಹಿಳೆಯರನ್ನು ಹೆಚ್ಚು ಸೆಳೆಯಲು ಸಖಿ ಸೆಲ್ಪಿ ಪಾಯಿಂಟ್, ಮಹಾರಾಜ ನಂತೆ ನಾನು ವೋಟ್ ಮಾಡಿದೆ ಎನ್ನುವ ಹೆಮ್ಮೆಯ ಸೆಲ್ಪಿ ಪಾಯಿಂಟ್, ಕುಟುಂಬದ ಜತೆಗೆ ನಿಂತು ಪೋಟೋ ತೆಗೆಸಿಕೊಳ್ಳುವ ಸೆಲ್ಪಿ ಪಾಯಿಂಟ್ ಮತದಾನದ ದಿನಾಂಕ, ಮತದಾನ ಮಾಡುತ್ತೇನೆ ಎಂದು ನೆನಪಿಸುತ್ತಿವೆ.
ಸೆಲ್ಪಿಗೆ ಮುಂದಾದ ಮತದಾರರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ಕಡೆ ಸೆಲ್ಪ ಪಾಯಿಂಟ್ ಮಾಡಿದ್ದು, ಕಾಲೇಜ್ ವಿದ್ಯಾರ್ಥಿಗಳು, ಯುವಕ ಯುವತಿಯರು, ಮಹಿಳೆಯರು ಸೇರಿದಂತೆ ಬಸ್ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬರು ಮತದಾನದ ಜಾಗೃತಿಯ ಸೆಲ್ಪಿ ಪಾಯಿಂಟ್ ಅಲ್ಲಿ ಸೆಲ್ಪಿ ತೆಗೆದುಕೊಂಡು ಹೋಗುತ್ತಿದ್ದಾರೆ.ಇದೊಂದು ವಿಭಿನ್ನವಾಗಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.ಮತದಾನ ಜಾಗೃತಿಗಾಗಿ ಯುವ ಮತದಾರರು, ಮಹಿಳೆಯರನ್ನು ಹೆಚ್ಚು ಗಮನ ಸೆಳೆಯಲು ಉದ್ದೇಶದಿಂದ ಜನದಟ್ಟಣೆಯ ೫ ಸ್ಥಳಗಳಲ್ಲಿ ಸೆಲ್ಪಿ ಕೇಂದ್ರ ತೆರೆಯಲಾಗಿದೆ. ಯುವ ಮತದಾರರ ಗಮನ ಸೆಳೆಯುವುದರ ಜತೆಗೆ ಮತದಾನ ಪ್ರಮಾಣ ಹೆಚ್ಚಿಸಲು ಈ ಪ್ರಯತ್ನ ಸಹಕಾರಿಯಾಗಲಿದೆ. ಸೆಲ್ಪಿ ಪಾಯಿಂಟ್ ನಲ್ಲಿ ಸೆಲ್ಪಿ ತೆಗೆದುಕೊಂಡವರು ವಾಟ್ಸಾಪ್, ಫೇಸ್‌ಬುಕ್, ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಮಾಡಿಕೊಳ್ಳುವದರಿಂದ ಮತದಾನ ಜಾಗೃತಿಯಾಗಲಿದೆ ಎಂದು ತಾಪಂ ಇಒ ಬಸವರಾಜ ಬಡಿಗೇರ್ ಹೇಳಿದರು.