ಕನ್ನಡಪ್ರಭ ವಾರ್ತೆ ಪರಮಾನಂದವಾಡಿ
ಸಮೀಪದ ಖೇಮಲಾಪುರ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಅರಣ್ಯ ಸಿದ್ದೇಶ್ವರ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಡಳಿತ ಮಂಡಳಿಯವರು ಸಹಕಾರ ಸಂಘದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ತರಬೇಡಿ. ನೀವು ರಾಜಕೀಯ ಮಾಡುವುದಾದರೆ ಸಂಸ್ಥೆಯ ಹೊರಗಡೆ ಮಾಡಿ, ಬ್ಯಾಂಕ್ ಮೇಲೆ ರೈತರ ವಿಶ್ವಾಸ, ಬ್ಯಾಂಕಿನವರಿಗೆ ಗ್ರಾಹಕರು ಹಾಗೂ ರೈತರ ಮೇಲೆ ವಿಶ್ವಾಸ ಇದ್ದರೆ ಮಾತ್ರ ಸಂಸ್ಥೆಗಳು ಮುಂದುವರಿಯಲು ಸಾಧ್ಯ. ಸಂಸ್ಥೆಯಿಂದ ರೈತರ ಕಣ್ಣೀರು ಒರೆಸುವ ಕೆಲಸವಾಗಬೇಕೇ ಹೊರತು ರೈತರ ಕಣ್ಣಲ್ಲಿ ರಕ್ತ ಭರಿಸುವ ಕೆಲಸವಾಗಬಾರದು ಎಂದು ಸಲಹೆ ನೀಡಿದರು.
ಸಿದ್ದಾಪುರದ ಕಾಡಯ್ಯಾ ಸ್ವಾಮೀಜಿ ನೇತೃತ್ವ, ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿರ್ದೇಶಕ ಅಪ್ಪಾಸಾಬ ಕುಲಗೂಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಯಬಾಗ ತಾಲೂಕು ನಿಯಂತ್ರಣ ಅಧಿಕಾರಿ ಶಿವಾನಂದ ಪಾಟೀಲ, ಎನ್.ಕೆ. ಕರೆಣ್ಣವರ, ಶ್ರೀಧರ ಪಾಟೀಲ ಆಗಮಿಸಿದ್ದರು. ಶ್ರೀ ಅರಣ್ಯ ಸಿದ್ದೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಮೂಡಲಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಲಭಾವಿ, ಸಿದ್ದು ಬೆಳಗಲಿ, ರಾಜು ಬಡಿಗೇರ, ಸಂಗಮೇಶ ಪಾಲಭಾವಿ, ಮೃತ್ಯುಂಜಯ ಮಠಪತಿ, ರವಿ ಚೌಗಲಾ, ಮಹಾಂತೇಶ ದುಪದಾಳ, ಕುಮಾರ ಹೊನವಾಡೆ, ಸಿದ್ದು ಪಾಲಭಾವಿ, ಸಾಗರ ಅಂಬಿ, ಬಾಳು ಅಂಬಿ, ರಾಮು ಕಾಂಬಳೆ, ಲಿಂಗರಾಜ ಚಿಟ್ಟಿ, ಕುಮಾರ ಕಾಂಬಳೆ, ಸಂಘದ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು ಇದ್ದರು. ಶಿಕ್ಷಕ ಸಿದ್ದು ಮಿರ್ಜಿ ನಿರೂಪಿಸಿ ವಂದಿಸಿದರು.