ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಅಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠಗ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸುವರು. ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೇ ವೇಳೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರ ಅನಾವರಣ ಹಾಗೂ ಶ್ರೀರಾಮಾಯಣ ದರ್ಶನಂ ಹಿಂದಿ ಆವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಜಿ.ಟಿ. ದೇವೇಗೌಡ, ವಿಶ್ರಾಂತ ಕುಲಪತಿ ಡಾ.ಕೆ.ಎಸ್. ರಂಗಪ್ಪ, ಡಾ.ಎಂ.ಎ. ಶೇಖರ್ ಮೊದಲಾದವರು ಪಾಲ್ಗೊಳ್ಳುವರು ಎಂದರು.ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತ ಕನ್ನಡ, ಹಿಂದಿ, ಇಂಗ್ಲಿಷ್ ನಲ್ಲಿನ ಮಾಹಿತಿ ಪುಸ್ತಕವಾದ ತ್ರಿ ರಂಗ- ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಅವಲೋಕನ ಕೃತಿಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಿಡುಗಡೆಗೊಳಿಸುವರು. ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ, ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಅವರು ವಿವರಿಸಿದರು.
ಹಿರಿಯ ಸಾಹಿತಿ ಡಾ.ಸಿ. ನಾಗಣ್ಣ ಮಾತನಾಡಿ, ಕುವೆಂಪು ಅವರ ಕರ್ಮಭೂಮಿ ಮೈಸೂರು ಆಗಿತ್ತು. ಹಲವಾರು ದಶಕ ಇಲ್ಲಿಯೇ ನೆಲೆಸಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರಿಗೆ ಭಾರತರತ್ನ ಎಂದೋ ಬರಬೇಕಾಗಿತ್ತು. ಬಾರದೇ ಇರಲು ಈ ಕುರಿತು ಈ ಹಿಂದೆ ಆಗೊಮ್ಮೆ ಈಗೊಮ್ಮೆ ಎದ್ದಿದ್ದ ಕ್ಷೀಣಧ್ವನಿ ಸಹ ಕಾರಣವಾಗಿರಬಹುದಾಗಿದೆ. ಆದರೆ, ಈಗ ಇಡೀ ರಾಷ್ಟ್ರದ ಗಮನ ಅವರತ್ತ ಸೆಳೆದು ಭಾರತರತ್ನ ದಕ್ಕುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಹಿರಿಯ ಸಾಹಿತಿ ಡಾ. ಸಿಪಿಕೆ, ಕೆ.ಟಿ. ವೀರಪ್ಪ, ಡಾ.ಎಲ್. ದೇವೇಗೌಡ, ಎಚ್.ಎಲ್. ಯಮುನಾ ಇದ್ದರು.ಇದು ಕನ್ನಡದ ಡಿಂಡಿಮವನ್ನು ದೆಹಲಿಯಲ್ಲಿ ಬಾರಿಸುವ ಕಾರ್ಯಕ್ರಮವೂ ಆಗಿದೆ. ಬದುಕಿದ್ದಾಗಲೇ ಕುವೆಂಪು ಅವರಿಗೆ ಭಾರತರತ್ನ ಸಿಗಬೇಕಾಗಿತ್ತಾದರೂ, ಈಗ ಮರಣೋತ್ತರವಾಗಿಯಾದರೂ ಸಿಗಲೆಂಬ ಹೋರಾಟ ತಮ್ಮೆಲ್ಲರದಾಗಿದೆ. ಇದಕ್ಕೆ ಯಾರ ವಿರೋಧವೂ ವ್ಯಕ್ತವಾಗದೆಂಬ ಭಾವನೆ ತಮ್ಮದು.
- ಡಾ. ಸಿಪಿಕೆ, ಹಿರಿಯ ಸಾಹಿತಿ